ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷೆ: ಬೆಂಗಳೂರು ಕೇಂದ್ರದಲ್ಲಿ ಸಾಮೂಹಿಕ ನಕಲು ಆರೋಪ!

ವಾರ್ಷಿಕ ಪರೀಕ್ಷೆಗಳನ್ನು ನಡೆಸುವಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆಎಸ್‌ಒಯು) ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ (ಎಂಸಿಜೆ) ಎಂಎ ಅಂತಿಮ ವರ್ಷದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ವಾರ್ಷಿಕ ಪರೀಕ್ಷೆಗಳನ್ನು ನಡೆಸುವಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆಎಸ್‌ಒಯು) ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ (ಎಂಸಿಜೆ) ಎಂಎ ಅಂತಿಮ ವರ್ಷದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಏಪ್ರಿಲ್ 16 ಮತ್ತು 24 ರ ನಡುವೆ ಪರೀಕ್ಷೆ ಬರೆಯುವಾಗ ಬಹಿರಂಗವಾಗಿ ನಕಲು ಮಾಡುವುದು ಮತ್ತು ಮೊಬೈಲ್ ಫೋನ್ ಬಳಸುತ್ತಿರುವುದು ಕಂಡುಬಂದಿದೆ.

ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗಳಿಗೆ ಸಂಬಂಧಿಸಿದ ಯಾವುದೇ ಚಾರ್ಟ್‌ಗಳನ್ನು ಪ್ರದರ್ಶಿಸಲಾಗಿಲ್ಲ. ತರಗತಿ ಕೊಠಡಿಗಳು ಮತ್ತು ಆಸನ ವ್ಯವಸ್ಥೆಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ವಿತರಿಸಿದ ನಂತರ ಪರೀಕ್ಷಾ ಕೇಂದ್ರದಿಂದ ನಿರ್ಗಮಿಸಿದ ಮೇಲ್ವಿಚಾರಕರು ಉತ್ತರ ಪತ್ರಿಕೆ ಸಂಗ್ರಹಿಸಲು ಪರೀಕ್ಷೆಯ ಡೇಡ್ ಲೈನ್ ಮುಗಿಯುವಾಗ ಕೊಠಡಿಯೊಳಗೆ ಬಂದರು ಎಂದು ಬೆಂಗಳೂರು 1 ಕೇಂದ್ರದಲ್ಲಿ (ಲಗ್ಗೆರೆಯ ಸಿದ್ದಗಂಗಾ ಕಾಲೇಜು) ಪರೀಕ್ಷೆ ಬರೆದ ಸುಮಾರು 15 ಎಂಸಿಜೆ ವಿದ್ಯಾರ್ಥಿಗಳು ಹೇಳಿದರು.

ಮೊದಲ ದಿನ ಕೇಂದ್ರದಲ್ಲಿ ವ್ಯವಸ್ಥೆ ಬಗ್ಗೆ ಮಾಹಿತಿ ಇಲ್ಲದ ಕಾರಣ ಹಲವರು ಗೊಂದಲಕ್ಕೆ ಸಿಲುಕಿದ್ದರು. ಆದಾಗ್ಯೂ, ನಾಲ್ಕನೇ ವಿಷಯದ ಪರೀಕ್ಷೆಯ ಹೊತ್ತಿಗೆ, ಪ್ರತಿಯೊಬ್ಬರೂ ತಮ್ಮ ಮೊಬೈಲ್ ಫೋನ್‌ಗಳನ್ನು ಕೇಂದ್ರದಲ್ಲಿ ಬಳಸಲು ಪ್ರಾರಂಭಿಸಿದರು ಮತ್ತು ಉತ್ತರ ಪತ್ರಿಕೆಗಳನ್ನು ಸಹ ವಿನಿಮಯ ಮಾಡಿಕೊಂಡರು. "ನಮ್ಮ ಪರೀಕ್ಷೆಗಳು ಮೊದಲ ಮಹಡಿಯಲ್ಲಿ ನಡೆದವು, ಮಹಿಳಾ ಮೇಲ್ವಿಚಾರಕರು ತನ್ನ ಮಗುವನ್ನು ನೋಡಿಕೊಳ್ಳಲು ಆಗಾಗ್ಗೆ ಪರೀಕ್ಷೆ ಕೊಠಡಿಯಿಂದ ತೆರಳುತ್ತಿದ್ದರು ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದರು.

ಮೇಲ್ವಿಚಾರಕರು ತುಂಬಾ ಮೃದುವಾಗಿ ವರ್ತಿಸಿ ಕಾಲೇಜಿನ ಮೂರನೇ ಮಹಡಿಯಲ್ಲಿ ಒಬ್ಬ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದರು. “ಆ ವಿದ್ಯಾರ್ಥಿಯನ್ನು ಕೇಳಿದಾಗ, ಅವರು ಚುನಾವಣಾ ಕರ್ತವ್ಯದಲ್ಲಿದ್ದು, ಫ್ಲೈಯಿಂಗ್ ಸ್ಕ್ವಾಡ್‌ನ ಭಾಗವಾಗಿದ್ದು, ಅವರಿಗೆ ಹಲವಾರು ಕರೆಗಳು ಬರುವುದರಿಂದ ಇತರರಿಗೆ ತೊಂದರೆ ನೀಡಲು ಬಯಸುವುದಿಲ್ಲ ಎಂದು ಹೇಳಿದ್ದಾಗಿ ಮತ್ತೋರ್ವ ವಿದ್ಯಾರ್ಥಿ ಹೇಳಿದರು.

ಸಾಂದರ್ಭಿಕ ಚಿತ್ರ
ಕರ್ನಾಟಕ ಮುಕ್ತ ವಿವಿ ಉಪಕುಲಪತಿ ವಿರುದ್ಧ ದೂರು ದಾಖಲು

"ವಿದ್ಯಾರ್ಥಿ ಚುನಾವಣಾ ಕರ್ತವ್ಯದ ಭಾಗವಾಗಿದ್ದರೆ ನಾವು ಏನು ಮಾಡಬಹುದು? ಎಂದು ಮೇಲ್ವಿಚಾರಕರು ಹೇಳಿದರು. ಸಮಸ್ಯೆಯನ್ನು ಕೆಎಸ್‌ಒಯು ಉಪಕುಲಪತಿ ಶರಣಪ್ಪ ವಿ ಹಾಲ್ಸೆ ಅವರ ಗಮನಕ್ಕೆ ತಂದಾಗ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. "ಈ ವಿಷಯ ಕುರಿತು ಚರ್ಚಿಸಲಾಗಿದ್ದು, ರಿಜಿಸ್ಟ್ರಾರ್ (ಮೌಲ್ಯಮಾಪನ) ಅವರಿಂದ ವರದಿ ಕೇಳಿದ್ದೇನೆ. ಕೇಂದ್ರವನ್ನು ಮುಚ್ಚುತ್ತೇವೆ ಮತ್ತು ಇಂತಹ ಅನ್ಯಾಯದ ಆಚರಣೆಗಳಿಗೆ ಕಾರಣರಾದವರನ್ನು ಶಿಕ್ಷಿಸುತ್ತೇವೆ. ನಾಳೆ ಕೆಲವು ಸದಸ್ಯರು ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎಂದರು. ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇದೆಯೇ ಎಂಬ ಪ್ರಶ್ನೆಗೆ ವಿಸಿ ಉತ್ತರ ನೀಡಲಿಲ್ಲ. ಆದಾಗ್ಯೂ, "ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com