ರೈಡ್-ಹೇಲಿಂಗ್ ಅಪ್ಲಿಕೇಶನ್‌ ಬಳಕೆ: ಆಟೋಗಳಲ್ಲಿ ಬೇರೆ ಬೇರೆ ನೋಂದಣಿ ಸಂಖ್ಯೆ ಬಳಸಬಾರದು; ಸರ್ಕಾರ ಸೂಚನೆ

ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳು ವಾಹನದ ನೋಂದಣಿ ಸಂಖ್ಯೆ ಮತ್ತು ಬುಕ್ ಮಾಡಿದ ಸಂಖ್ಯೆಯು ಹೊಂದಾಣಿಕೆಯಾಗುತ್ತಿದೆಯೇ ಎಂದು ಪರಿಶೀಲಿಸಲು ಪ್ರಯಾಣಿಕರನ್ನು ಕೇಳುವುದರಿಂದ ಇದನ್ನು ಲಘುವಾಗಿ ತೆಗೆದುಕೊಳ್ಳಬಾರದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಟೊರಿಕ್ಷಾ ಚಾಲಕರು ಓಲಾ ಮತ್ತು ಉಬರ್‌ನಂತಹ ಬಹು ಪ್ರಯಾಣ-ಬುಕಿಂಗ್ ಅಪ್ಲಿಕೇಶನ್‌ಗಳ ಸಂಖ್ಯೆಗಳನ್ನು ಉಲ್ಲೇಖಿಸಿ, ತಮ್ಮ ಆಟೋಗಳಲ್ಲಿ ಹೆಚ್ಚುವರಿ ನೋಂದಣಿ ನಂಬರ್ ಪ್ಲೇಟ್‌ಗಳನ್ನು ಪೇಪರ್‌ನಲ್ಲಿ ಮುದ್ರಿಸಿ ಪ್ರದರ್ಶಿಸುವುದನ್ನು ನೋಡುತ್ತೇವೆ.

ನಾನು ಇತ್ತೀಚೆಗೆ ಮನೆಗೆ ಹೋಗಲು ಆಟೋವನ್ನು ಬುಕ್ ಮಾಡಿದ್ದೆ. ಒಂದು ಆಟೋ ಸ್ಥಳಕ್ಕೆ ಬಂದು ನನಗಾಗಿ ಕಾಯುತ್ತಿತ್ತು. ನಾವು ರೈಡ್ ಬುಕ್ ಮಾಡಿದಾಗ, ವಾಹನದ ನೋಂದಣಿ ಸಂಖ್ಯೆಯನ್ನು ನಮಗೆ ತೋರಿಸಲಾಯಿತು. ಆದರೆ ಬಂದ ವಾಹನದ ನೋಂದಣಿ ಸಂಖ್ಯೆ ಬೇರೆ ಇತ್ತು’ ಎನ್ನುತ್ತಾರೆ ಕಾಲೇಜು ವಿದ್ಯಾರ್ಥಿನಿ ಮೇಘಾ. ಆದಾಗ್ಯೂ, ಆಟೊದ ಮುಂಭಾಗ ಮತ್ತು ಹಿಂಭಾಗದಲ್ಲಿ ಪ್ರದರ್ಶಿಸಲಾದ ಅಪ್ಲಿಕೇಶನ್‌ನಲ್ಲಿ ತೋರಿಸಿರುವ ನೋಂದಣಿ ಸಂಖ್ಯೆಯನ್ನು ನಾನು ನೋಡಿದೆ. ನಾನು ಆಟೋ ಹತ್ತಿ, OTP ಹಂಚಿಕೊಂಡು ನನಗೆ ಹೋಗಬೇಕಾದ ಸ್ಥಳಕ್ಕೆ ತಲುಪಿದೆ ಎಂದರು.

ಆಟೋ ಚಾಲಕರು ತಮ್ಮ ರೈಡ್-ಹೇಲಿಂಗ್ ಅಕೌಂಟ್ ನೊಂದಿಗೆ ಬೇರೆ ಆಟೋ ಬಳಸುತ್ತಿದ್ದರೆ ಈ ರೀತಿ ಆಗಬಹುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳು ವಾಹನದ ನೋಂದಣಿ ಸಂಖ್ಯೆ ಮತ್ತು ಬುಕ್ ಮಾಡಿದ ಸಂಖ್ಯೆಯು ಹೊಂದಾಣಿಕೆಯಾಗುತ್ತಿದೆಯೇ ಎಂದು ಪರಿಶೀಲಿಸಲು ಪ್ರಯಾಣಿಕರನ್ನು ಕೇಳುವುದರಿಂದ ಇದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಹೊಂದಾಣಿಕೆಯಾಗದಿದ್ದಲ್ಲಿ, ಪ್ರಯಾಣಿಕರು ವಾಹನವನ್ನು ಹತ್ತಬಾರದು ಏಕೆಂದರೆ ಇದು ಅವರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡಿದ ಹೆಚ್ಚುವರಿ ಸಾರಿಗೆ ಆಯುಕ್ತ (ಜಾರಿ) ಮಲ್ಲಿಕಾರ್ಜುನ ಅವರಲ್ಲಿ ಪ್ರಸ್ತಾಪಿಸಿದಾಗ, ಬಹು ವಾಹನ ನೋಂದಣಿ ಸಂಖ್ಯೆಗಳನ್ನು ಬಳಸಿಕೊಂಡು ಆಟೋಗಳನ್ನು ನಡೆಸುವುದು ಕಾನೂನುಬಾಹಿರವಾಗಿದೆ. ಒಂದು ವಾಹನವು ಕೇವಲ ಒಂದು ನೋಂದಣಿ ಸಂಖ್ಯೆಯನ್ನು ಹೊಂದಿರಬೇಕು. ಅದನ್ನು ಕಾನೂನಿನ ಪ್ರಕಾರ ವಾಹನದ ಮುಂಭಾಗ ಮತ್ತು ಹಿಂಭಾಗದಲ್ಲಿ ಅಳವಡಿಸಬೇಕು. ರೈಡ್-ಹೇಲಿಂಗ್ ಅಪ್ಲಿಕೇಶನ್‌ನೊಂದಿಗೆ ನೋಂದಾಯಿಸಲಾದ ವಾಹನವನ್ನು ಮಾತ್ರ ಬಳಸಬೇಕು. ಆಟೋ ಚಾಲಕರು ಬಹು ವಾಹನ ನೋಂದಣಿ ಸಂಖ್ಯೆಗಳನ್ನು ಹೊಂದಿರಬಾರದು ಎಂದರು.

ಅಂತಹ ಆಟೋಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಹಾಗೂ ಸಂಚಾರಿ ಪೊಲೀಸರಿಗೆ ಅಧಿಕಾರ ನೀಡಲಾಗಿದೆ ಎಂದರು. ಲೋಕಸಭೆ ಚುನಾವಣೆಯ ನಂತರ, ಬಹು ನೋಂದಣಿ ಸಂಖ್ಯೆಗಳನ್ನು ಬಳಸುವ ಇಂತಹ ಆಟೋಗಳ ವಿರುದ್ಧ ಇಲಾಖೆಯು ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com