ಲೋಕಸಭೆ ಚುನಾವಣೆ 2024: ಮತ ಚಲಾಯಿಸುವುದು ಹೇಗೆ?

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನೀವು ಮತ ​​ಚಲಾಯಿಸಬಹುದು (ಇದನ್ನು ಮತದಾರರ ಪಟ್ಟಿ ಎಂದೂ ಕರೆಯಲಾಗುತ್ತದೆ). ಮತಗಟ್ಟೆಗಳು, ಸ್ಪರ್ಧಿಸುವ ಅಭ್ಯರ್ಥಿಗಳು, ಚುನಾವಣಾ ದಿನಾಂಕಗಳು ಮತ್ತು ಸಮಯ, ಗುರುತಿನ ಚೀಟಿಗಳು ಮತ್ತು ಇವಿಎಂಗಳ ಮಾಹಿತಿಯನ್ನು ಸಹ ಮತದಾರರು ಪಡೆಯಬಹುದು.
ವಿವಿಪ್ಯಾಟ್
ವಿವಿಪ್ಯಾಟ್

ರಾಜ್ಯದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಚುನಾವಣೆ ನಡೆಯಲಿದ್ದು, ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಚುನಾವಣಾ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಮಧ್ಯೆ ಮತದಾರರು ಹೇಗೆ ಮತದಾನ ಮಾಡಬಹುದು ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನೀವು ಮತ ​​ಚಲಾಯಿಸಬಹುದು (ಇದನ್ನು ಮತದಾರರ ಪಟ್ಟಿ ಎಂದೂ ಕರೆಯಲಾಗುತ್ತದೆ). ಮತಗಟ್ಟೆಗಳು, ಸ್ಪರ್ಧಿಸುವ ಅಭ್ಯರ್ಥಿಗಳು, ಚುನಾವಣಾ ದಿನಾಂಕಗಳು ಮತ್ತು ಸಮಯ, ಗುರುತಿನ ಚೀಟಿಗಳು ಮತ್ತು ಇವಿಎಂಗಳ ಮಾಹಿತಿಯನ್ನು ಸಹ ಮತದಾರರು ಪಡೆಯಬಹುದು.

ಮತ ಚಲಾಯಿಸುವುದು ಹೇಗೆ?

  • ಮೊದಲನೇ ಮತಗಟ್ಟೆ ಅಧಿಕಾರಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುತ್ತಾರೆ ಮತ್ತು ನಿಮ್ಮ ಗುರುತಿನ ಚೀಟಿಯನ್ನು ಪರಿಶೀಲಿಸುತ್ತಾರೆ.

  • ಎರಡನೇ ಮತಗಟ್ಟೆ ಅಧಿಕಾರಿ ನಿಮ್ಮ ಬೆರಳಿಗೆ ಶಾಯಿ ಹಾಕುತ್ತಾರೆ, ಚೀಟಿ ನೀಡುತ್ತಾರೆ ಮತ್ತು ರಿಜಿಸ್ಟರ್‌ನಲ್ಲಿ ನಿಮ್ಮ ಸಹಿಯನ್ನು ತೆಗೆದುಕೊಳ್ಳುತ್ತಾರೆ (ಫಾರ್ಮ್ 17A) .

  • ನಂತರ ನಿಮ್ಮನ್ನು ಮೂರನೇ ಮತಗಟ್ಟೆ ಅಧಿಕಾರಿ ಬಳಿ ಕಳಿಸುತ್ತಾರೆ. 2ನೇ ಮತಗಟ್ಟೆ ಅಧಿಕಾರಿ ನಿಮಗೆ ಕೊಟ್ಟ ಚೀಟಿಯನ್ನು ನೀವು 3ನೇ ಮತಗಟ್ಟೆ ಅಧಿಕಾರಿಗೆ ಕೊಡಬೇಕು.

  • ನಂತರ ನಿಮ್ಮ ಬೆರಳಿಗೆ ಇಂಕ್ ಹಾಕಿರುವುದನ್ನು ತೋರಿಸಬೇಕು. ಇದನ್ನು ಖಚಿತಪಡಿಸಿಕೊಂಡ ನಂತರ ನಿಮ್ಮನ್ನು ಇವಿಎಂ ಯಂತ್ರ ಇರುವ ಪೆಟ್ಟಿಗೆ ಬಳಿಗೆ ಕಳಿಸಲಾಗುತ್ತದೆ.

  • ಇವಿಎಂ ಯಂತ್ರದಲ್ಲಿ ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಎಲ್ಲ ಅಭ್ಯರ್ಥಿಗಳ ಹೆಸರು, ಚಿಹ್ನೆ ಇರುತ್ತದೆ. ಪ್ರತಿ ಅಭ್ಯರ್ಥಿಯ ಹೆಸರು, ಚಿಹ್ನೆ ಎದುರಿಗೆ ಬಟನ್ ಇರುತ್ತದೆ. ನಿಮ್ಮ ಇಷ್ಟದ ಅಭ್ಯರ್ಥಿ ಎದುರಿನ ಬಟನ್ ಒತ್ತಿದ ಕೂಡಲೇ ಬೀಪ್ ಸೌಂಡ್ ಬರುತ್ತದೆ. ಆಗ ನೀವು ಮತದಾನ ಮಾಡಿದ್ದು ದೃಢವಾಗುತ್ತದೆ.

  • ನಂತರ ಇವಿಎಂ ಯಂತ್ರದ ಪಕ್ಕದಲ್ಲಿ ಇರುವ VVPAT ಯಂತ್ರದಲ್ಲಿ ಒಂದು ಚೀಟಿ ಬರುತ್ತದೆ. ಈ ಚೀಟಿಯಲ್ಲಿ ನೀವು ಯಾರಿಗೆ ಮತ ಹಾಕಿದಿರಿ, ಅವರ ಹೆಸರು, ಅವರ ಪಕ್ಷದ ಚಿಹ್ನೆ ಏನು ಅನ್ನೋದು ಕಾಣುತ್ತದೆ. ಕೇವಲ 7 ಸೆಕೆಂಡ್‌ಗಳ ಕಾಲ ಮಾತ್ರ ಅದು ನಿಮಗೆ ಕಾಣುತ್ತದೆ. ನಂತರ ವಿವಿ ಪ್ಯಾಟ್‌ನ ಬಾಕ್ಸ್‌ ಒಳಗೆ ಬಿದ್ದು ಸೀಲ್ ಆಗುತ್ತದೆ.

ಇವಿಎಂ ಯಂತ್ರದಲ್ಲಿ ನೀವು ಕೇವಲ ಅಭ್ಯರ್ಥಿಗಳು ಮಾತ್ರವಲ್ಲ, ನೋಟಾ ಆಯ್ಕೆಯನ್ನೂ ಮಾಡಬಹುದು. ನಿಮಗೆ ನಿಮ್ಮ ಕ್ಷೇತ್ರದ ಯಾವುದೇ ಅಭ್ಯರ್ಥಿಗೂ ಮತ ಹಾಕಲು ಇಷ್ಟವಿಲ್ಲವಾದರೆ ನೋಟ ಬಟನ್ ಒತ್ತುವ ಮೂಲಕ ನಿಮ್ಮ ಮತದಾನ ಪ್ರಕ್ರಿಯೆ ಮುಗಿಸಬಹುದು.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ecisveep.nic.in ನಲ್ಲಿ ಮತದಾರರ ಮಾರ್ಗದರ್ಶಿ ನೋಡಬಹುದು.

ಗಮನಿಸಿ: ಮತಗಟ್ಟೆಯೊಳಗೆ ಮೊಬೈಲ್ ಫೋನ್, ಕ್ಯಾಮೆರಾಗಳು ಅಥವಾ ಇತರ ಯಾವುದೇ ಗ್ಯಾಜೆಟ್‌ಗಳನ್ನು ಅನುಮತಿಸಲಾಗುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com