ಲಂಚ ಪಡೆಯುತ್ತಿದ್ದಾಗ ಬಳ್ಳಾರಿ ಬಿಯುಡಿಎ ಆಯುಕ್ತ ಲೋಕಾಯುಕ್ತ ಬಲೆಗೆ

ಲಂಚ ಪಡೆಯುತ್ತಿದ್ದಾಗ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬಿಯುಡಿಎ) ಆಯುಕ್ತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ
ಲೋಕಾಯುಕ್ತ

ಬಳ್ಳಾರಿ: ಲಂಚ ಪಡೆಯುತ್ತಿದ್ದಾಗ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬಿಯುಡಿಎ) ಆಯುಕ್ತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆಯುಕ್ತ ವಿ ರಮೇಶ್ ಎಂಬುವವರು ಲ್ಯಾಂಡ್ ಡೆವಲಪರ್ ಓರ್ವರಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ.

ಈರೇಶಿ ಎಂಬುವವರು ಭೂ ಅಭಿವೃದ್ಧಿಗಾಗಿ ತಾತ್ಕಾಲಿಕ ಅನುಮೋದನೆಗೆ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಕೆಲಸ ಆಗಬೇಕಾದಲ್ಲಿ ದುಬಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ರೋಸಿ ಹೋದ ಲ್ಯಾಂಡ್ ಡೆವಲಪರ್ ರಮೇಶ್, ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

ಲೋಕಾಯುಕ್ತ
ಹೊಟೇಲ್ ಪರವಾನಗಿ ನೀಡಲು ಲಂಚ ಸ್ವೀಕಾರ: ಕಾರ್ಮಿಕ ಇಲಾಖೆ ಇನ್ಸ್‏ಪೆಕ್ಟರ್ ಲೋಕಾಯುಕ್ತ ಬಲೆಗೆ

ದೂರು ಸ್ವೀಕರಿಸಿದ್ದ ಲೋಕಾಯುಕ್ತ ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಯನ್ನು ಬಲೆಗೆ ಬೀಳಿಸಲು ಯೋಜನೆ ರೂಪಿಸಿದ್ದು, ಅಧಿಕಾರಿ 5 ಲಕ್ಷ ರೂಪಾಯಿ ಲಂಚ ಪಡೆಯುವಾಗ ಆತನನ್ನು ಬಂಧಿಸಿದ್ದಾರೆ. ಆಯುಕ್ತರ ಜೊತೆಗೆ ಬಿಯುಡೆ ನಗರ ಯೋಜನ ಸದಸ್ಯ ಕಲ್ಲಿನಾಥ್ 6 ಲಕ್ಷ ರೂಪಾಯಿಗಳೊಂದಿಗೆ ಸಿಕ್ಕಿಬಿದ್ದಿದ್ದರೆ, ಸಹಾಯಕ ನಗರ ಯೋಜಕ 3 ಲಕ್ಷ ರೂಪಾಯಿ, ವ್ಯವಸ್ಥಾಪಕ ನಾರಾಯಣ 10,000 ರೂಪಾಯಿಗಳೊಂದಿಗೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

60,000 ರೂಪಾಯಿಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಫ್ ಡಿಎ ಆಗಿರುವ ಕೇಸ್ ವರ್ಕರ್ ಶಂಕರ್ ಇಟ್ಟಿದ್ದು, 20,000 ರೂಪಾಯಿಗಳ ಮೊತ್ತದ ಲಂಚವನ್ನು ಯುಪಿಐ ಮೂಲಕ ಸ್ವೀಕರಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ.

ಇವರೊಂದಿಗೆ ಬುಡಾ ಜೂನಿಯರ್ ಇಂಜಿನಿಯರ್ ಖಾಜಿ ಖಾಜಾ ಹುಸೇನ್ ಅವರನ್ನು ಯುಪಿಐ ಮೂಲಕ 20,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕಾಗಿ ಬಂಧಿಸಲಾಯಿತು. "ಎಲ್ಲಾ ಆರೋಪಿಗಳು ವಶದಲ್ಲಿದ್ದಾರೆ ಮತ್ತು ಲೋಕಾಯುಕ್ತರು ಲಂಚದ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ" ಎಂದು ಲೋಕಾಯುಕ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com