Loksabha Election 2024: ಕೊನೆಗೂ ಸಂಧಾನ, Voting ಬಹಿಷ್ಕರಿಸಿದ್ದ ಗ್ರಾಮಸ್ಥರಿಂದ ಸಂಜೆ ಮತದಾನ!

ಮೂಲಸೌಕರ್ಯ ಮತ್ತು ವಿವಿಧ ಸಮಸ್ಯೆಗಳ ಮುಂದಿಟ್ಟುಕೊಂಡು ಇಂದು ನಡೆದ ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸಿದ್ದ ಚಿತ್ರದುರ್ಗದ ಗ್ರಾಮಸ್ಥರು ಕೊನೆಗೂ ಸಂಧಾನದ ಬಳಿಕ ಮತದಾನಕ್ಕೆ ಮುಂದಾಗಿದ್ದಾರೆ.
ಚುನಾವಣಾ ಕರ್ತವ್ಯದಲ್ಲಿ ಅಧಿಕಾರಿಗಳು (ಸಾಂದರ್ಭಿಕ ಚಿತ್ರ)
ಚುನಾವಣಾ ಕರ್ತವ್ಯದಲ್ಲಿ ಅಧಿಕಾರಿಗಳು (ಸಾಂದರ್ಭಿಕ ಚಿತ್ರ)

ಚಿತ್ರದುರ್ಗ: ಮೂಲಸೌಕರ್ಯ ಮತ್ತು ವಿವಿಧ ಸಮಸ್ಯೆಗಳ ಮುಂದಿಟ್ಟುಕೊಂಡು ಇಂದು ನಡೆದ ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸಿದ್ದ ಚಿತ್ರದುರ್ಗದ ಗ್ರಾಮಸ್ಥರು ಕೊನೆಗೂ ಸಂಧಾನದ ಬಳಿಕ ಮತದಾನಕ್ಕೆ ಮುಂದಾಗಿದ್ದಾರೆ.

ಹೌದು... ಚಿತ್ರದುರ್ಗದ ಯರೆಹಳ್ಳಿ, ಸಿದ್ದಾಪುರ ಗ್ರಾಮದ ಜನತೆಯು ತಮಗೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಎಷ್ಟೇ ಮನವಿ ಮಾಡಿದರೂ ಜನಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ನಮ್ಮ ನೆನಪು ಬರುತ್ತದೆ. ಹೀಗಾಗಿ ನಾವು ಈ ಬಾರಿ ಮತವನ್ನೇ ಚಲಾವಣೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದು, ಮತದಾನವನ್ನು ಬಹಿಷ್ಕರಿಸಿ ಕುಳಿತಿದ್ದರು.

ಆದರೆ, ಚುನಾವಣಾ ಅಧಿಕಾರಿಗಳು ಈ ಗ್ರಾಮಸ್ಥರ ಮನವೊಲಿಕೆಗೆ ಬೆಳಗ್ಗೆಯಿಂದಲೇ ಕಸರತ್ತು ನಡೆಸಿದ್ದರು. ಕೊನೆಗೂ ಅವರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ.

ಚುನಾವಣಾ ಕರ್ತವ್ಯದಲ್ಲಿ ಅಧಿಕಾರಿಗಳು (ಸಾಂದರ್ಭಿಕ ಚಿತ್ರ)
ಲೋಕಸಭಾ ಚುನಾವಣೆ 2024: ಮೂಲ ಸೌಕರ್ಯ ಕೊರತೆ ಆರೋಪ; ಉಡುಪಿ, ಹಾಸನ ಜಿಲ್ಲಾ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ!

ಚುನಾವಣಾ ಅಧಿಕಾರಿಗಳು ಈ ಗ್ರಾಮಸ್ಥರ ಮನವೊಲಿಕೆಗೆ ಬೆಳಗ್ಗೆಯಿಂದಲೇ ಕಸರತ್ತು ನಡೆಸಿದ್ದರು. ಕೊನೆಗೂ ಅವರ ಮನವೊಲಿಸುವಲ್ಲಿ ಸಫಲರಾಗಿದ್ದು, ಇಲ್ಲಿ ಸಂಜೆ ವೇಳೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಸಂಜೆ 7 ಗಂಟೆಯಾದರೂ ಮತದಾರರು ಮತಗಟ್ಟೆಗಳಲ್ಲಿ ಸರತಿ ಸಾಲಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

ಸ್ಟ್ರಾಂಗ್‌ ರೂಂನತ್ತ ಇವಿಎಂ, ವಿವಿಪ್ಯಾಟ್‌

ಇನ್ನು ರಾಜ್ಯದ ಉಳಿದೆಡೆ ಮತದಾನ ಮುಕ್ತಾಯವಾದ ಕಡೆ ಚುನಾವಣಾಧಿಕಾರಿಗಳು ಇವಿಎಂ (EVM), ವಿವಿ ಪ್ಯಾಟ್‌ ಬಾಕ್ಸ್‌ಗಳನ್ನು ಪ್ಯಾಕಿಂಗ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ಪ್ಯಾಕಿಂಗ್ ಮಾಡಿದವರು ಸ್ಟ್ರಾಂಗ್ ರೂಂಗೆ ತೆಗೆದುಕೊಂಡು ಹೋಗಿ ಇಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com