ಮಂಗಳೂರು: ಸೌಕರ್ಯಗಳ ಕೊರತೆಯನ್ನು ನೆಪಮಾಡದೆ ಮತದಾನ ಮಾಡಿದ ಪಾವೂರ್ ಉಲಿಯಾ ದ್ವೀಪದ ಜನತೆ

ಮಂಗಳೂರಿನ ಭಾಗವಾಗಿರುವ ಪಾವೂರ್ ಉಲಿಯಾ ದ್ವೀಪದ ಜನತೆ ಸೌಕರ್ಯಗಳ ಕೊರತೆಯನ್ನೂ ಲೆಕ್ಕಿಸದೇ ಮತದಾನ ಮಾಡಿದ್ದಾರೆ.
ಪಾವೂರ್ ಉಲಿಯಾ ದ್ವೀಪ
ಪಾವೂರ್ ಉಲಿಯಾ ದ್ವೀಪonline desk

ಮಂಗಳೂರು: ಮಂಗಳೂರಿನ ಭಾಗವಾಗಿರುವ ಪಾವೂರ್ ಉಲಿಯಾ ದ್ವೀಪದ ಜನತೆ ಸೌಕರ್ಯಗಳ ಕೊರತೆಯನ್ನೂ ಲೆಕ್ಕಿಸದೇ ಮತದಾನ ಮಾಡಿದ್ದಾರೆ. ಮತಗಟ್ಟೆಗಳಿಗೆ ದ್ವೀಪ ಪ್ರದೇಶದಿಂದ ದೋಣಿಗಳ ಮೂಲಕ ಆಗಮಿಸಿದ ಜನತೆ ಮತದಾನ ಮಾಡಿ ಮಾದರಿಯಾಗಿದ್ದಾರೆ.

ಸಂಪರ್ಕ ಕಲ್ಪಿಸುವ ಸೇತುವೆ ಇಲ್ಲದೇ ಇದ್ದರೂ ಸಹ, ಇಲ್ಲಿನ ಜನತೆ ಭೌಗೋಳಿಕ ಸವಾಲುಗಳನ್ನೂ ಮೀರಿ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಿದ್ದಾರೆ.

50 ಕ್ಕೂ ಹೆಚ್ಚು ಕುಟುಂಬಗಳು ಮತ್ತು 150 ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಪಾವೂರ್ ಉಲಿಯಾ ದ್ವೀಪ ಏಕತೆ ಮತ್ತು ನಾಗರಿಕ ಜವಾಬ್ದಾರಿಗಳಿಗೆ ಉದಾಹರಣೆಯಾಗಿದೆ. ಹಿರಿಯರಿಂದ ಹಿಡಿದು ಮಹಿಳೆಯರು ಮತ್ತು ಯುವಕರವರೆಗೂ, ಸಮುದಾಯದ ಪ್ರತಿಯೊಬ್ಬ ಸದಸ್ಯರು ಪ್ರಜಾಪ್ರಭುತ್ವದ ಪಾಲ್ಗೊಳ್ಳುವಿಕೆಗೆ ಪ್ರಾಮುಖ್ಯತೆಯನ್ನು ನೀಡಿದ್ದಾರೆ.

ಮುಖ್ಯ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಿಸಿಕೊಡುವಂತೆ ದ್ವೀಪ ಗ್ರಾಮದವರು ಹಲವು ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟವರ ಕಿವಿಗೆ ಬಿದ್ದಿಲ್ಲ.

ಪಾವೂರ್ ಉಲಿಯಾ ದ್ವೀಪ
ದಕ್ಷಿಣ ಕನ್ನಡ ಜಿಲ್ಲೆಯ ಬಂಜಾರುಮಲೆಯಲ್ಲಿ ಶೇ.100 ರಷ್ಟು ಮತದಾನ!

ಅದೇನೇ ಇದ್ದರೂ, ಇಲ್ಲಿನ ನಿವಾಸಿಗಳು ತಮ್ಮ ದೀರ್ಘಕಾಲದ ವಿನಂತಿಗಳು ಈಡೇರುತ್ತದೆ ಎಂಬ ವಿಶ್ವಾಸದಲ್ಲಿ ಬದುಕುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com