ಹಣ್ಣು ವ್ಯಾಪಾರಿ ಮೋಹಿನಿ ಗೌಡ ಭೇಟಿ ಮಾಡಿದ ಪ್ರಧಾನಿ: ಸ್ವಚ್ಛ ಭಾರತದೆಡೆಗಿನ ಕೆಲಸಕ್ಕೆ ಮೆಚ್ಚುಗೆ!
ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಶಿರಸಿಯಲ್ಲಿ ಹಣ್ಣು ವ್ಯಾಪಾರಿ ಮೋಹಿನಿ ಗೌಡ ಅವರನ್ನು ಭೇಟಿ ಮಾಡಿದ್ದಾರೆ. ಸ್ವಚ್ಛ ಭಾರತ ಅಭಿಯಾನದೆಡೆಗೆ ಮೋಹಿನಿ ಗೌಡ ಅವರ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹೆಲಿಪ್ಯಾಡ್ ಗೆ ಆಗಮಿಸುತ್ತಿದ್ದಂತೆಯೇ ಪ್ರಧಾನಿ ಮೋದಿ ಮೋಹಿನಿ ಗೌಡ ಅವರನ್ನು ಭೇಟಿ ಮಾಡಿದ್ದಾರೆ.
ಮೋಹಿನಿ ಗೌಡ-ಪ್ರಧಾನಿ ಮೋದಿ ಭೇಟಿ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ನೆಟಿಜನ್ ಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅಂಕೋಲಾ ಬಸ್ ಸ್ಟ್ಯಾಂಡ್ ನಲ್ಲಿ ಮೋಹಿನಿ ಗೌಡ ಅವರು ಹಣ್ಣು ವ್ಯಾಪಾರಿಯಾಗಿದ್ದು, ಆಕೆ ಹಣ್ಣುಗಳನ್ನು ಎಲೆಗಳಲ್ಲಿ ಸುತ್ತಿ ಮಾರಾಟ ಮಾಡುವುದರಿಂದ ಖ್ಯಾತಿ ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ ಆಕೆ ಯಾರಾದರೂ ಹಣ್ಣುಗಳನ್ನು ತಿಂದ ನಂತರ ಎಲೆಗಳನ್ನು ಎಸೆದರೆ, ಅವಳು ಅವುಗಳನ್ನು ಎತ್ತಿಕೊಂಡು ಕಸದ ತೊಟ್ಟಿಯಲ್ಲಿ ವಿಲೇವಾರಿ ಮಾಡುತ್ತಾರೆ.
ಪ್ರಸ್ತುತ ಕರ್ನಾಟಕದಲ್ಲಿ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ಮೋದಿ, ಸ್ವಚ್ಛ ಭಾರತ ಮಿಷನ್‌ನಲ್ಲಿ ಮೋಹಿನಿ ಗೌಡ ಅವರ ಕೊಡುಗೆಗಳನ್ನು ಪ್ರಶಂಸಿದರು.
"ಪ್ರಧಾನಿ ಮೋದಿಯವರ ಸ್ವಚ್ಛ ಭಾರತ ಅಭಿಯಾನದ ದೃಷ್ಟಿಗೆ ಜನರು ಕೊಡುಗೆ ನೀಡುವ ಇಂತಹ ಉದಾಹರಣೆಗಳು ಇತರರಿಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತವೆ" ಎಂದು ಎಕ್ಸ್‌ನಲ್ಲಿ ಓರ್ವ ವ್ಯಕ್ತಿ ಬರೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ