ರಾಜ್ಯದಲ್ಲಿ ಈ ವರ್ಷ 46 ಭೂಕುಸಿತ ಸಂಭವಿಸಿವೆ, 12 ಮಂದಿ ಸಾವು; ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಅಪಾಯ ಎಂದ ತಜ್ಞರು

ಕರ್ನಾಟಕದಲ್ಲಿ 31,261.42 ಚದರ ಕಿಲೋಮೀಟರ್ ಪ್ರದೇಶವು ಭೂಕುಸಿತಕ್ಕೆ ಒಳಗಾಗುತ್ತಿದೆ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ದತ್ತಾಂಶವು ಬಹಿರಂಗಪಡಿಸಿದೆ.
ಅಂಕೋಲಾ-ಶಿರೂರು ಭೂ ಕುಸಿತ
ಅಂಕೋಲಾ-ಶಿರೂರು ಭೂ ಕುಸಿತ
Updated on

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಜುಲೈ ಅಂತ್ಯದವರೆಗೆ 46 ಭೂಕುಸಿತಗಳು ಸಂಭವಿಸಿವೆ ಮತ್ತು ಇದಕ್ಕೆ ಸಂಬಂಧಿತ ಘಟನೆಗಳಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ತಜ್ಞರು ಮತ್ತು ಭೂವಿಜ್ಞಾನಿಗಳು ಮುಂಬರುವ ದಿನಗಳಲ್ಲಿ ಇನ್ನಷ್ಟು ಭೂಕುಸಿತ ಸಂಭವಿಸುವ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ(KNDMC) ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(KSDMA)ವು ಕರ್ನಾಟಕದಲ್ಲಿ ಭೂಕುಸಿತಕ್ಕೆ ಒಳಗಾಗುವ ತಾಲ್ಲೂಕುಗಳ ಪಟ್ಟಿ ಮಾಡಿದೆ. ಇದರಲ್ಲಿ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿವೆ.

ಜಿಲ್ಲಾಡಳಿತಗಳು ನೀಡಿದ ಮಾಹಿತಿ ಆಧಾರದ ಮೇಲೆ ಡೇಟಾವನ್ನು ಒಟ್ಟುಗೂಡಿಸಲಾಗಿದ್ದು, ಭೂಕುಸಿತದ ಘಟನೆಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಎರಡೂ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಅಂಕೋಲಾ-ಶಿರೂರು ಭೂ ಕುಸಿತ
ಭಾರೀ ಮಳೆಗೆ ಸಕಲೇಶಪುರದಲ್ಲಿ ಭೂಕುಸಿತ: ಕೊಚ್ಚಿ ಹೋದ ರಸ್ತೆ

ಹೆಚ್ಚಿನ ಭೂಕುಸಿತಗಳು ರಸ್ತೆ ಕಾಮಗಾರಿಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಂದ ಉಂಟಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವರ್ಷ ಭೂಕುಸಿತ ಸಂಬಂಧಿತ ಘಟನೆಗಳಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ ಮತ್ತು 2006 ರಿಂದ ಕರ್ನಾಟಕದಲ್ಲಿ ಒಟ್ಟು 101 ಸಾವುಗಳು ಮತ್ತು 1,541 ಭೂಕುಸಿತಗಳು ಸಂಭವಿಸಿವೆ ಎಂದು ಅಂಕಿಅಂಶಗಳು ತಿಳಿಸಿವೆ.

ಕರ್ನಾಟಕದಲ್ಲಿ 31,261.42 ಚದರ ಕಿಲೋಮೀಟರ್ ಪ್ರದೇಶವು ಭೂಕುಸಿತಕ್ಕೆ ಒಳಗಾಗುತ್ತಿದೆ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ದತ್ತಾಂಶವು ಬಹಿರಂಗಪಡಿಸಿದೆ. ಈ ಪೈಕಿ ಉತ್ತರ ಕನ್ನಡದ8,389.26 ಚದರ ಕಿಮೀ) ಮೊದಲ ಸ್ಥಾನದಲ್ಲಿ ಮತ್ತು ಶಿವಮೊಗ್ಗ(4,797.97 ಚದರ ಕಿಮೀ) ನಂತರದ ಸ್ಥಾನದಲ್ಲಿದೆ ಎಂದು ಕೆಎಸ್‌ಡಿಎಂಎ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

"2018, 2019 ಮತ್ತು 2020 ಕ್ಕೆ ಹೋಲಿಸಿದರೆ ಈ ವರ್ಷ, ನಾವು ಸಶಸ್ತ್ರ ಪಡೆಗಳು, NDRF ಮತ್ತು SDRF ನಿಂದ ಸಹಾಯ ಕೇಳುವ ಪ್ರಮಾಣ ಕಡಿಮೆಯಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com