ಚಿತ್ರದುರ್ಗ: ರಾಜ್ಯ ಪೊಲೀಸರು ಸಂಪೂರ್ಣವಾಗಿ ದುರ್ಬಲರಾಗಿದ್ದಾರೆ ಎಂದು ಬೆಂಗಳೂರು ನಗರದ ನಿವೃತ್ತ ಪೊಲೀಸ್ ಕಮಿಷನರ್ ಮಂಗಳವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೆಚ್ಚಿನ ಹಣ ವಸೂಲಿ ಮಾಡುವಂತೆ ರಾಜ್ಯ ಸರ್ಕಾರ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದು, ಭ್ರಷ್ಟ ಕೃತ್ಯಗಳಿಗೆ ಎಡೆಮಾಡಿಕೊಡುತ್ತಿದೆ. ಇದು ರಾಜ್ಯ ಪೊಲೀಸರನ್ನು ದುರ್ಬಲಗೊಳಿಸಿದೆ ಎಂದರು.
ಕಮಿಷನ್ ಕೊಡುವವರೆಗೂ ಪೊಲೀಸರಿಗೆ ಸರಿಯಾದ ಪೋಸ್ಟಿಂಗ್ ನೀಡುವುದಿಲ್ಲ. ಇದು ಅವರ ಸೇವೆಗಳ ಮೇಲೆ ಪರಿಣಾಮ ಬೀರುತ್ತಿದೆ. ಇನ್ನುಳಿದ ಇಲಾಖೆಗಳಲ್ಲಿ ಗುತ್ತಿಗೆ, ಟೆಂಡರ್, ಪರ್ಸೆಂಟೇಜ್ ಗಳಿಂದ ಕಮಿಷನ್ ಬರುತ್ತದೆ. ಆದರೆ ಪೊಲೀಸ್ ಇಲಾಖೆಯಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಬೇಕಿದ್ದು, ಹಣ ಪಾವತಿಸುವಂತೆ ಸರ್ಕಾರ ಪೊಲೀಸ್ ಇಲಾಖೆಗೆ ಒತ್ತಡ ಹೇರುತ್ತಿರುವುದು PSI ಪರಶುರಾಮ್ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ಬಲಿಷ್ಠ ಮುಖ್ಯಮಂತ್ರಿಯಿದ್ದರೆ ಈ ರೀತಿಯ ಕಮಿಷನ್ ಘಟನೆಗಳು ನಡೆಯುವುದಿಲ್ಲ, ಆದರೆ, ನಮ್ಮಲ್ಲಿ ಒಬ್ಬ ದುರ್ಬಲ ಮುಖ್ಯಮಂತ್ರಿ ಇದ್ದಾರೆ ಎಂದು ಭಾಸ್ಕರ್ ರಾವ್ ಆರೋಪಿಸಿದರು.
Advertisement