ಮಡಿಕೇರಿ: ಶಾಶ್ವತ ಮನೆಗಳಿಗಾಗಿ ಕಾಯುತ್ತಿದ್ದಾರೆ 'ಯರವ' ಬುಡಕಟ್ಟು ಕುಟುಂಬಗಳು!

ರಾಜಕೀಯ ಪಕ್ಷಗಳ ಪ್ರಮುಖ ಮತಬ್ಯಾಂಕ್‌ಗೆ ಕಾರಣವಾಗಿದ್ದರೂ, ಹಲವಾರು ವರ್ಷಗಳಿಂದ ಅವರ ಸಂಕಷ್ಟಗಳಿಗೆ ಉತ್ತರ ಸಿಕ್ಕಿಲ್ಲ. ನಾವು ಹುಟ್ಟಿದಾಗಿನಿಂದ ದಯನೀಯ ಜೀವನ ನಡೆಸುತ್ತಿದ್ದೇವೆ. ನಾವು ನಮ್ಮ ಪೂರ್ವಜರು ನಡೆಸಿದ ಅದೇ ಜೀವನವನ್ನು ನಡೆಸುತ್ತಿದ್ದೇವೆ.
ಯೆರವ ಬುಡಕಟ್ಟು
ಯೆರವ ಬುಡಕಟ್ಟು
Updated on

ಮಡಿಕೇರಿ: ಹರಿದ ಟಾರ್ಪಾಲಿನ್ ಛಾವಣಿಗಳು, ಜಲಾವೃತ ಮತ್ತು ಕೆಸರು ತುಂಬಿದ ಗುಡಿಸಲುಗಳು, ಶೌಚಾಲಯದ ಸೌಕರ್ಯಗಳ ಕೊರತೆ ಮತ್ತು ಇತರ ಮೂಲ ಸೌಕರ್ಯಗಳು ಇದು ದಕ್ಷಿಣ ಕೊಡಗಿನ ಪೈಸಾರಿ ಭೂಮಿಯಲ್ಲಿ ವಾಸಿಸುವ 25 ಯರವ ಕುಟುಂಬಗಳ ಜೀವನದ ಕಥೆ.

ರಾಜಕೀಯ ಪಕ್ಷಗಳ ಪ್ರಮುಖ ಮತಬ್ಯಾಂಕ್‌ಗೆ ಕಾರಣವಾಗಿದ್ದರೂ, ಹಲವಾರು ವರ್ಷಗಳಿಂದ ಅವರ ಸಂಕಷ್ಟಗಳಿಗೆ ಉತ್ತರ ಸಿಕ್ಕಿಲ್ಲ. ನಾವು ಹುಟ್ಟಿದಾಗಿನಿಂದ ದಯನೀಯ ಜೀವನ ನಡೆಸುತ್ತಿದ್ದೇವೆ. ನಾವು ನಮ್ಮ ಪೂರ್ವಜರು ನಡೆಸಿದ ಅದೇ ಜೀವನವನ್ನು ನಡೆಸುತ್ತಿದ್ದೇವೆ. ಅನ್ಯಾಯದ ವಿರುದ್ಧ ಧ್ವನಿಯೆತ್ತಿ ಆರು ವರ್ಷಗಳ ಹಿಂದೆಯೇ ಪ್ರತಿಭಟನೆ ಆರಂಭಿಸಿದ್ದೇವೆ. ಆದರೆ ಯಾವುದೂ ಬದಲಾಗಿಲ್ಲ ಎಂದು ವಿರಾಜಪೇಟೆ ಸಮೀಪದ ಬಾಳುಗೋಡು ವ್ಯಾಪ್ತಿಯ ಕುಟ್ಟಿಪರಂಬು ಬಡಾವಣೆಯ ಬುಡಕಟ್ಟು ನಿವಾಸಿ ಶೋಬಾ ತಮ್ಮ ನೋವು ಹಂಚಿಕೊಂಡಿದ್ದಾರೆ. ಒಟ್ಟು 25 ಕುಟುಂಬಗಳು ಈಗ ಪೈಸಾರಿ ಜಮೀನಿನಲ್ಲಿ ನೆಲೆಸಿದ್ದು, ಸರ್ಕಾರಿ ಯೋಜನೆಯಡಿ ಯೋಗ್ಯ ಮನೆಗಳನ್ನು ಪಡೆಯಲು ಹೋರಾಟ ನಡೆಸುತ್ತಿದ್ದಾರೆ.

ಆರು ವರ್ಷಗಳ ಹಿಂದೆ, ಸಮಸ್ಯೆಯಿಂದಾಗಿ ಯರವರು ಎಸ್ಟೇಟ್ ಮನೆಗಳಿಂದ ಹೊರಬಂದರು ಮತ್ತು ಕುಟ್ಟಿಪರಂಬುನಲ್ಲಿ ಸುಮಾರು ಮೂರು ಎಕರೆ ಪೈಸಾರಿ ಭೂಮಿಯಲ್ಲಿ ನೆಲೆಸಲು ಆರಂಭಿಸಿದರು. ಇಲ್ಲಿ ಡೇರೆಗಳಲ್ಲಿ ವಾಸಿಸಲು ಪ್ರಾರಂಭಿಸಿದರು. ಆದರೆ, ಅವರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಅವರನ್ನು ಜಮೀನಿನಿಂದ ಹೊರಹಾಕಲಾಯಿತು , ಅವರ ಟೆಂಟ್‌ಗಳನ್ನು ಕಿತ್ತುಹಾಕಲಾಯಿತು. ಅದೇನೇ ಇದ್ದರೂ, ಯರವರು ಶಾಶ್ವತ ಮನೆಗಳನ್ನು ಮಂಜೂರು ಮಾಡುವವರೆಗೆ ಭೂಮಿಯಿಂದ ಹೊರಬರಲು ನಿರಾಕರಿಸಿದರು. ಕುಟ್ಟಿಪರಂಬುವಿನಲ್ಲಿ ಎರಡು ಎಕರೆ ಪೈಸಾರಿ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದ್ದರಿಂದ ಅವರ ಹೋರಾಟವು ಸಕಾರಾತ್ಮಕ ಫಲಿತಾಂಶ ನೀಡಿತು.

ಯೆರವ ಬುಡಕಟ್ಟು
ಕೊಡಗು: ತಾಟಳ್ಳಿ ಬುಡಕಟ್ಟು ಸಮುದಾಯದ 70 ಕುಟುಂಬಗಳಿಗೆ ಮರೀಚಿಕೆಯಾದ ಮೂಲಭೂತ ಸೌಕರ್ಯ!

ಶೀಘ್ರದಲ್ಲೇ ಭೂಮಿಯ ಹಕ್ಕುಗಳನ್ನು ಹಸ್ತಾಂತರಿಸುವುದಾಗಿ ಭರವಸೆ ನೀಡಿದರು. ಆದರೆ, ಅದು ಇನ್ನೂ ನಮಗೆ ತಲುಪಿಲ್ಲ. ಈ ಮಾನ್ಸೂನ್, ನಿರಂತರ ಮಳೆಯ ಸಮಯದಲ್ಲಿ, ನಮ್ಮ ಡೇರೆಗಳು ಗಾಳಿಯಲ್ಲಿ ಹಾರಿಹೋದವು. ಮಳೆಯ ರಭಸಕ್ಕೆ ಟಾರ್ಪಲ್‌ಗಳು ಹರಿದು ಹೋಗಿದ್ದು, ನಮಗೆ ಸೂರು ಇಲ್ಲದಂತಾಗಿದೆ. ಆದರೆ, ಸರ್ಕಾರಕ್ಕೆ ನಮ್ಮ ಕಷ್ಟಗಳ ಬಗ್ಗೆ ಇನ್ನೂ ಗಮನಕ್ಕೆ ಹರಿಸಿಲ್ಲ ಎಂದು ಶೋಭಾ ತಿಳಿಸಿದ್ದಾರೆ.

ಸಂಬಂಧಿತ ಅಧಿಕಾರಿಗಳು ಪೈಸಾರಿ ಜಮೀನಿನಲ್ಲಿ ನಿವೇಶನಗಳನ್ನು ಗುರುತಿಸಿದ್ದಾರೆ. ಆದರೆ ಇನ್ನೂ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಇದರಿಂದ ಸ್ವಂತವಾಗಿ ಅಕ್ಕಿ, ತರಕಾರಿ ಬೆಳೆಯಬಹುದು ಎಂಬ ಕಾರಣಕ್ಕೆ ಮನೆ, ಕೃಷಿ ಭೂಮಿಗೆ ಬೇಡಿಕೆ ಇಟ್ಟಿದ್ದೆವು. ಆದರೆ ನಮಗೆ ಕೇವಲ ಎರಡು ಎಕರೆ ಜಮೀನು ಮಂಜೂರಾಗಿದ್ದು, ಇನ್ನೂ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಎಂದು ವಿವರಿಸಿದರು.

ಶೌಚಾಲಯ, ವಿದ್ಯುತ್, ಮನೆ ಇಲ್ಲದೇ ಇಲ್ಲಿನ 25 ಕುಟುಂಬಗಳು ನಿತ್ಯ ವನ್ಯಜೀವಿಗಳ ಭಯದಲ್ಲಿ ಬದುಕುತ್ತಿವೆ. ಈ ವರ್ಷ ಬುಡಕಟ್ಟುಗಳಿಗೆ ಟಾರ್ಪಾಲಿನ್‌ಗಳು ಸಹ ಬಂದಿಲ್ಲ, ಹೀಗಾಗಿ ಗಾಳಿ ಮಳೆಯಿಂದ ಬದುಕು ದುಸ್ತರವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com