
ತುಮಕೂರು/ಹುಬ್ಬಳ್ಳಿ: 78ನೇ ಸ್ವಾತಂತ್ಯ್ರೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ತುಮಕೂರಿನ ಕುಣಿಗಲ್‌ನಲ್ಲಿ ಕೆಲ ಯುವಕರು ಪ್ಯಾಲಿಸ್ತೀನ್ ಬಾವುಟ ಹಾರಿಸಲು ಯತ್ನಿಸಿದ್ದು ಇದಕ್ಕೆ ಸ್ಥಳೀಯ ಯುವಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದರು.
ಕುಣಿಗಲ್ ಪಟ್ಟಣದ ಸರ್ಕಾರಿ ಶಾಲಾ ಮೈದಾನದಲ್ಲಿ ಈ ಘಟನೆ ನಡೆದಿದೆ. ತಾಲೂಕು ಆಡಳಿತದಿಂದ ಧ್ವಜಾರೋಹಣ ಕಾರ್ಯಕ್ರಮದ ವೇಳೆ ಕೆಲ ಯುವಕರ ಗುಂಪು ಪ್ಯಾಲಿಸ್ತೀನ್ ಬಾವುಟ ಹಾರಿಸಲು ಯತ್ನಿಸಿದರು. ಈ ವೇಳೆ ಮತ್ತೊಂದು ಗುಂಪು ಪ್ಯಾಲಿಸ್ತೀನ್ ಬಾವುಟ ಹಾರಿಸಿದರೆ ವಿವಾದಕ್ಕೆ ಕಾರಣವಾಗುತ್ತದೆ ಎಂದು ಬುದ್ದಿ ಹೇಳಿದರು.
ಮತ್ತೊಂದೆಡೆ ಹಳೇ ಹುಬ್ಬಳ್ಳಿಯ ಸರ್ಕಲ್ ನಲ್ಲಿ ಬ್ಯಾರಲ್ ಮೇಲೆ ಹಜರತ್ ಸೈಯದ್ ಫತೇಶಾ ವಲಿ ದರ್ಗಾ ಎಂಬ ಬೋರ್ಡ್ ಹಾಕಿ ಧ್ವಜಾರೋಹಣ ಮಾಡಿರುವಂತಹ ಘಟನೆ ಹಳೇ ಹುಬ್ಬಳ್ಳಿಯ ಸರ್ಕಲ್ನಲ್ಲಿ ನಡೆದಿದೆ. ಆ ಮೂಲಕ 78ನೇ ಸ್ವಾತಂತ್ರ್ಯ ದಿನಾಚರಣೆ ದಿನವೂ ಹಳೇ ಹುಬ್ಬಳ್ಳಿಯಲ್ಲಿ ವಿವಾದ ಉಂಟಾಗಿದೆ. ಅನುಮತಿ ಇಲ್ಲದೆ ಮುಸ್ಲಿಂರು ಧ್ವಜಾರೋಹಣ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಶ್ರೀರಾಮಸೇನೆ ಮುಖಂಡರು ಶಾಂತಿ ಕದಡಲು ಯತ್ನಿಸಿದ ಆರೋಪದಡಿ ಹುಬ್ಬಳ್ಳಿ-ಧಾರವಾಡ ಡಿಸಿಪಿ ನಂದಗಾವಿಗೆ ದೂರು ನೀಡಿದ್ದಾರೆ.
Advertisement