3ನೇ ಹಂತದ Bengaluru Metro ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು, 21 ಸ್ಟೇಷನ್​ಗಳು!

ಬೆಂಗಳೂರು ನಮ್ಮ ಮೆಟ್ರೋ(Namma Metro) ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, 3ನೇ ಹಂತದ ಮೆಟ್ರೋ ಯೋಜನೆಗೆ ಕೇಂದ್ರ ಸಚಿವ ಸಂಪುಟ ಗ್ರೀನ್​ಸಿಗ್ನಲ್ ನೀಡಿದೆ. ಬರೋಬ್ಬರಿ 15,611 ಕೋಟಿ ರೂ. ಕಾಮಗಾರಿ ಇದಾಗಿದ್ದು, ಕೇಂದ್ರ ಒಪ್ಪಿಗೆ ನೀಡಿದೆ. ಕಾರಿಡಾರ್-1 ಜೆಪಿ ನಗರದ ನಾಲ್ಕನೇ ಹಂತದಿಂದ ಕೆಂಪಾಪುರದವರೆಗೆ 21 ಸ್ಟೇಷನ್​ಗಳು ಇದ್ದು, 32.15 ಕಿಮೀ ವಿಸ್ತೀರ್ಣವಿದೆ.
Namma Metro
ನಮ್ಮ ಮೆಟ್ರೊ
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ(Union Cabinet Meeting) ಸಭೆಯಲ್ಲಿ ಇಂದು ಬೆಂಗಳೂರು ಸೇರಿದಂತೆ ಭಾರತದಾದ್ಯಂತ ಮೂರು ಪ್ರಮುಖ ಮೆಟ್ರೋ ರೈಲು ಯೋಜನೆಗಳು ಮತ್ತು ಎರಡು ಹೊಸ ವಿಮಾನ ನಿಲ್ದಾಣ ಸೌಲಭ್ಯಗಳಿಗೆ ಅನುಮೋದನೆ ನೀಡಿದೆ.

ಹೌದು.. ಬೆಂಗಳೂರು ನಮ್ಮ ಮೆಟ್ರೋ(Namma Metro) ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, 3ನೇ ಹಂತದ ಮೆಟ್ರೋ ಯೋಜನೆಗೆ ಕೇಂದ್ರ ಸಚಿವ ಸಂಪುಟ ಗ್ರೀನ್​ಸಿಗ್ನಲ್ ನೀಡಿದೆ. ಬರೋಬ್ಬರಿ 15,611 ಕೋಟಿ ರೂ. ಕಾಮಗಾರಿ ಇದಾಗಿದ್ದು, ಕೇಂದ್ರ ಒಪ್ಪಿಗೆ ನೀಡಿದೆ. ಕಾರಿಡಾರ್-1 ಜೆಪಿ ನಗರದ ನಾಲ್ಕನೇ ಹಂತದಿಂದ ಕೆಂಪಾಪುರದವರೆಗೆ 21 ಸ್ಟೇಷನ್​ಗಳು ಇದ್ದು,

32.15 ಕಿಮೀ ವಿಸ್ತೀರ್ಣವಿದೆ. ಕಾರಿಡಾರ್- 2 ಹೊಸಹಳ್ಳಿ ಯಿಂದ ಕಡಬಗೆರೆಯವರೆಗೆ ಒಂಬತ್ತು ಸ್ಟೇಷನ್​ಗಳಿದ್ದು, 12.50 ಕಿಮೀ ಮಾರ್ಗ ಇದಾಗಿದೆ. ಈ ಮೂಲಕ ಒಟ್ಟು ಮೆಟ್ರೋ ವಿಸ್ತೀರ್ಣ 220.20 ಕಿ.ಮೀ ಹೊಂದಲಿದೆ ಎಂದು ಹೇಳಲಾಗಿದೆ.

Namma Metro
ಬೆಂಗಳೂರು: Namma Metro ಚಾಲಕರಹಿತ ರೈಲಿನ ವ್ಯವಸ್ಥೆ, ನಿಯಂತ್ರಣ ಹೇಗೆ? ಇಲ್ಲಿದೆ Video

ಇದಲ್ಲದೆ ಬಿಹಾರ ಮತ್ತು ಪಶ್ಚಿಮಬಂಗಾಳದ ಎರಡು ವಿಮಾನ ನಿಲ್ದಾಣಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಪಾಟ್ನಾದ ಬಿಹ್ತಾದಲ್ಲಿ 1,413 ಕೋಟಿ ರೂ ಅಂದಾಜು ವೆಚ್ಚದೊಂದಿಗೆ, ಹೊಸ ಸಮಗ್ರ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಅಸ್ತು ಅಂದಿದೆ. 66,000 ಚದರ ಮೀಟರ್ ವಿಸ್ತೀರ್ಣದಲ್ಲಿ, ಟರ್ಮಿನಲ್ ಅನ್ನು 3,000 ಪೀಕ್ ಅವರ್ ಪ್ರಯಾಣಿಕರನ್ನು (PHP) ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಈ ಟರ್ಮಿನಲ್‌ನಲ್ಲಿ ವಾರ್ಷಿಕವಾಗಿ 50 ಲಕ್ಷ ಪ್ರಯಾಣಿಕರನ್ನು ಹೊಂದುವ ಸಾಮರ್ಥ್ಯ ಇರಲಿದೆ. ಭವಿಷ್ಯದಲ್ಲಿ ವಾರ್ಷಿಕವಾಗಿ ಒಂದು ಕೋಟಿ ಪ್ರಯಾಣಿಕರಿಗೆ ಸಾಮರ್ಥ್ಯವನ್ನು ವಿಸ್ತರಿಸಲು ಅವಕಾಶವಿದೆ. ಯೋಜನೆಯು A-321/B-737-800/A-320 ಮಾದರಿಯ ವಿಮಾನಗಳಿಗೆ 10 ಪಾರ್ಕಿಂಗ್ ಬೇಗಳನ್ನು ಈ ಟರ್ಮಿನಲ್‌ ಹೊಂದಲಿದೆ.

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ 70,390 ಚದರ ಮೀಟರ್‌ನ ಹೊಸ ಟರ್ಮಿನಲ್ ಕಟ್ಟಡವು 3,000 ಪೀಕ್ ಅವರ್ ಪ್ರಯಾಣಿಕರಿಗೆ (PHP) ಅವಕಾಶ ಕಲ್ಪಿಸಲು ಮತ್ತು ವಾರ್ಷಿಕವಾಗಿ 10 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ₹1,549 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸಂಪುಟ ಸಭೆಯಲ್ಲಿ ತಿಳಿಸಿದ್ದಾರೆ.

ಇತರೆ ಮೆಟ್ರೋ ಯೋಜನೆಗಳು

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮೂರು ಮೆಟ್ರೋ ಯೋಜನೆಗಳಿಗೆ ಹಸಿರು ನಿಶಾನೆ ದೊರೆತಿದೆ. ಬೆಂಗಳೂರು ಮೆಟ್ರೊ ರೈಲು 3ನೇ ಹಂತದ ಯೋಜನೆಗೆ ಸಂಪುಟ ಅಸ್ತು ಎಂದಿದೆ. ಈ ಯೋಜನೆ ಒಟ್ಟು 44.65 ಕಿಮೀ ಉದ್ದದ ಎರಡು ಎಲಿವೇಟೆಡ್ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು 31 ನಿಲ್ದಾಣಗಳನ್ನು ಒಳಗೊಂಡಿದೆ. ಅಲ್ಲದೆ ಕ್ಯಾಬಿನೆಟ್ ಥಾಣೆ ಇಂಟಿಗ್ರಲ್ ರಿಂಗ್ ಮೆಟ್ರೋ ರೈಲ್ ಪ್ರಾಜೆಕ್ಟ್‌ಗೂ ಅನುಮೋದನೆ ಸಿಕ್ಕಿದೆ. ಥಾಣೆ ನಗರದ ಪಶ್ಚಿಮ ಭಾಗದ ಪರಿಧಿಯಲ್ಲಿ 22 ನಿಲ್ದಾಣಗಳನ್ನು ಒಳಗೊಂಡಿರುವ 29-ಕಿಮೀ ಕಾರಿಡಾರ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಮೆಟ್ರೋ ಮಾರ್ಗವು 2029 ರ ವೇಳೆಗೆ ನಿತ್ಯ 6.47 ಲಕ್ಷ ಪ್ರಯಾಣಿಕರನ್ನು ಹೊಂದುವ ನಿರೀಕ್ಷೆ ಇದೆ. 2045 ರ ವೇಳೆಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ 8.72 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಈ ಯೋಜನೆಯ ವೆಚ್ಚ 12,200.10 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಪುಣೆಯ ಸ್ವರ್ಗೇಟ್ ಟು ಕಟ್ರಾಜ್ ಅಂಡರ್ಗ್ರೌಂಡ್ ಲೈನ್ ವಿಸ್ತರಣೆ ಕ್ಯಾಬಿನೆಟ್ ಅನುಮೋದಿಸಿದ ಮೂರನೇ ಮೆಟ್ರೋ ಯೋಜನೆ. ಲೈನ್-1B ಎಂದು ಕರೆಯಲ್ಪಡುವ ಈ ಹೊಸ ವಿಸ್ತರಣೆಯು 5.46 ಕಿಮೀ ವ್ಯಾಪಿಸುತ್ತದೆ. ₹ 2,954.53 ಕೋಟಿ ಅಂದಾಜು ವೆಚ್ಚದ ಈ ಯೋಜನೆಯು ಫೆಬ್ರವರಿ 2029 ರೊಳಗೆ ಪೂರ್ಣಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com