ಜನರ ವಿಶ್ವಾಸ ಕಳೆದುಕೊಂಡ ಸಿದ್ದರಾಮಯ್ಯ, ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲಿ: ನಟ ಚೇತನ್ ಅಹಿಂಸಾ

ಸಿದ್ದರಾಮಯ್ಯ ನಾನು ಬಸವಣ್ಣನ ಅನುಯಾಯಿ, ಅಂಬೇಡ್ಕರ್ ವಾದಿ ಎನ್ನುತ್ತಾರೆ. ಟೋಕನಿಸಂ ರೀತಿ ಸಾಂಕೇತಿಕವಾಗಿ ಮಾತನಾಡುತ್ತಾರೆ. ಆದರೆ ಅಂಬೇಡ್ಕರ್, ಬಸವಣ್ಣನವರ ತತ್ವದ ವಿರುದ್ಧವಾಗಿ ಕೆಲಸಗಳನ್ನು ಮಾಡುತ್ತಾರೆ.
ಚೇತನ್ ಅಹಿಂಸಾ-ಸಿದ್ದರಾಮಯ್ಯ
ಚೇತನ್ ಅಹಿಂಸಾ-ಸಿದ್ದರಾಮಯ್ಯ
Updated on

ಚಿಕ್ಕಬಳ್ಳಾಪುರ: ವಾಲ್ಮೀಕಿ ನಿಗಮ ಹಗರಣ, ಮುಡಾ ಅಕ್ರಮಗಳು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕಂಗೆಡಿಸಿದೆ. ಇನ್ನು ಸಿಎಂ ಸಿದ್ದರಾಮಯ್ಯ ಜನರ ವಿಶ್ವಾಸ ಕಳೆದುಕೊಂಡಿದ್ದು ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಡಲಿ ಎಂದು ನಟ ಚೇತನ್ ಅಹಿಂಸಾ ಆಗ್ರಹಿಸಿದ್ದಾರೆ.

ಬಡವರು, ದಲಿತರು, ಆದಿವಾಸಿಗಳು, ರೈತರು, ಕನ್ನಡ ಹಕ್ಕುಗಳು, ಭ್ರಷ್ಟಾಚಾರ ವಿರೋಧಿ ಮತ್ತು ಇನ್ನೂ ಹೆಚ್ಚಿನವರಿಗೆ ನೋವುಂಟು ಮಾಡುವ ನೀತಿಗಳನ್ನು ಸಕ್ರಿಯವಾಗಿ ತರುವ ಮೂಲಕ ಸಿದ್ದರಾಮಯ್ಯ ಈಗಾಗಲೇ ಅನ್ಯಾಯದ ವ್ಯವಸ್ಥೆಯನ್ನು ಇನ್ನು ಹೆಚ್ಚು ಅನ್ಯಾಯದಂತೆ ಮಾಡಿದ್ದಾರೆ. ಆರು ವರ್ಷಗಳಿಗೂ ಹೆಚ್ಚು ಕಾಲ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದ್ದಾರೆ. ಹೀಗಾಗಿ ರಾಜೀನಾಮೆ ನೀಡಲಿ ಮತ್ತು ಬೇರೆಯವರಿಗೆ ಅವಕಾಶ ನೀಡಲಿ ಎಂದು ಚೇತನ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೆ ಕರ್ನಾಟಕ ಅಹಿಂದ ಸಂಘಟನೆಯ ಒಕ್ಕೂಟದಿಂದ ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಹಾಗೂ ಆದಿವಾಸಿಗಳ 25 ಸಾವಿರ ಕೋಟಿ ಹಣಕ್ಕೆ ತೇಪೆ ಹಚ್ಚುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. SC/ST-TSP ಹಣವನ್ನು ದುರ್ಬಳಕೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಚೇತನ್ ಅಹಿಂಸಾ-ಸಿದ್ದರಾಮಯ್ಯ
ಮುಡಾ ಹಗರಣ: ಸಿಎಂಗೆ ತಾತ್ಕಾಲಿಕ ರಿಲೀಫ್; ಆ.29ರವರೆಗೆ ವಿಚಾರಣೆ ಮುಂದೂಡುವಂತೆ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ

ಸಿದ್ದರಾಮಯ್ಯ ನಾನು ಬಸವಣ್ಣನ ಅನುಯಾಯಿ, ಅಂಬೇಡ್ಕರ್ ವಾದಿ ಎನ್ನುತ್ತಾರೆ. ಟೋಕನಿಸಂ ರೀತಿ ಸಾಂಕೇತಿಕವಾಗಿ ಮಾತನಾಡುತ್ತಾರೆ. ಆದರೆ ಅಂಬೇಡ್ಕರ್, ಬಸವಣ್ಣನವರ ತತ್ವದ ವಿರುದ್ಧವಾಗಿ ಕೆಲಸಗಳನ್ನು ಮಾಡುತ್ತಾರೆ ಎಂದು ಕಿಡಿಕಾರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com