ಬೆಂಗಳೂರು: ಹುಲಿ ವಲಸೆ ಹೆಚ್ಚುತ್ತಿರುವ ವರದಿಗಳನ್ನು ತಜ್ಞರು ಮತ್ತು ಅರಣ್ಯ ಸಿಬ್ಬಂದಿಗಳು ಗಮನಿಸುತ್ತಿದ್ದು, ಕ್ಯಾಮೆರಾ ಟ್ರ್ಯಾಪ್‌ಗಳಿಂದ ಸೆರೆಹಿಡಿಯುತ್ತಿದ್ದಾರೆ, ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಈಗ ಸ್ಥಳೀಯರೊಂದಿಗೆ ಕೆಲಸ ಮಾಡುತ್ತಿದ್ದು. ಸುತ್ತುತ್ತಿರುವ ಹುಲಿಗಳಿಂದ ದೂರವಿರುವಂತೆ ಸಲಹೆ ನೀಡಿದ್ದಾರೆ.
ಇಲಾಖೆಯು ಸುತ್ತಾಡುವ ಹುಲಿಗಳ ಅಧ್ಯಯನವನ್ನು ಸಹ ಕೈಗೊಂಡಿದೆ ಮಾನವ ಮತ್ತು ವನ್ಯಜೀವಿಗಳ ಸಂಘರ್ಷದಲ್ಲಿ ಕಾಡು ಪ್ರಾಣಿಗಳ ಸಾವನ್ನು ಕಡಿಮೆ ಮಾಡಲು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಪ್ರಾಜೆಕ್ಟ್ ಟೈಗರ್ ಪ್ರಕಾರ, ರಾಜ್ಯದಲ್ಲಿ ಬಂಡೀಪುರ-ನಾಗರಹೊಳೆ, ಬಿಆರ್‌ಟಿ-ಕಾವೇರಿ-ಎಂಎಂ ಹಿಲ್ಸ್, ಭದ್ರಾ-ಕುದುರೆಮುಖ-ಶಿವಮೊಗ್ಗ-ಚಿಕ್ಕಮಗಳೂರು ಮತ್ತು ಕಾಳಿ-ಬೆಳಗಾವಿ-ಶರಾವತಿ ಹುಲಿ ಸಂರಕ್ಷಿತ ಅರಣ್ಯಗಳಿವೆ. ಇವುಗಳಲ್ಲಿ, 75% ಹುಲಿಗಳು ಬಂಡೀಪುರ-ನಾಗರಹೊಳೆ ಹುಲಿ ಮೀಸಲು ಅರಣ್ಯದಲ್ಲಿ ನೆಲೆಸಿವೆ.
ಜಾನುವಾರು ಹತ್ಯೆ ವರದಿಯಾದಾಗ ಹುಲಿಗಳನ್ನು ನಾವು ಅರಣ್ಯದ ಅಂಚಿನಲ್ಲಿ ಸೆರೆಹಿಡಿಯುತ್ತಿರುವಾಗ, ನಾವು ಪ್ರಾಣಿಗಳಿಂದ ದೂರವಿರಲು ಅರಣ್ಯ ಪ್ರದೇಶಗಳ ಸುತ್ತಮುತ್ತ ಇರುವ ಜನರಲ್ಲಿ ಜಾಗೃತಿ ಮೂಡಿಸಲು ಪ್ರಾರಂಭಿಸಿದ್ದೇವೆ. ನಾವು ಹುಲಿಗಳ ಚಲನವಲನ ಮತ್ತು ಅಲೆದಾಡುವ ಮಾದರಿಯನ್ನು ಟ್ರ್ಯಾಕ್ ಮಾಡುತ್ತಿದ್ದೇವೆ. ಅರಣ್ಯದ ಹೊರಗಿನ ಎಲ್ಲಾ ಹುಲಿಗಳನ್ನು ಹಿಡಿಯುವ ಅಗತ್ಯವಿಲ್ಲ ಮತ್ತು ಹಿಡಿಯಲು ಸಾಧ್ಯವಿಲ್ಲ. ಹುಲಿಗಳು ಪ್ರಾದೇಶಿಕವಾಗಿದ್ದು ವಿವಿಧ ಸ್ಥಳಗಳಿಗೆ ತೆರಳಲು ಪ್ರಾರಂಭಿಸಿವೆ ಹೀಗಾಗಿ ಅದನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಪ್ರಾಜೆಕ್ಟ್ ಟೈಗರ್‌ನ ಅಧಿಕಾರಿಯೊಬ್ಬರು ಹೇಳಿದರು.
ರಾಜ್ಯದಲ್ಲಿ ಮತ್ತು ದೇಶದಲ್ಲೇ ಇದು ಮೊದಲ ಯೋಜನೆಯಾಗಿದೆ. ಬಂಡೀಪುರ-ನಾಗರಹೊಳೆ ಭೂದೃಶ್ಯದಲ್ಲಿ ಇನ್ನೂ ಎಷ್ಟು ಹುಲಿಗಳು ಇರಬಹುದು ಎಂಬ ಚರ್ಚೆ ನಡೆಯುತ್ತಿದೆ, ಆ ಬಗ್ಗೆಯೂ ಅಧ್ಯಯನ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾನವ- ಪ್ರಾಣಿ ಘರ್ಷಣೆಗಳು ಹೊಸದಲ್ಲ. 10 ವರ್ಷಗಳ ಹಿಂದೆ ಪ್ರಾಣಿಗಳು ಅಲ್ಲಿಯೇ ಇದ್ದವು. ಆದರೆ ಈಗ ಆವರ್ತನ ಹೆಚ್ಚಾಗಿದೆ, ಏಕೆಂದರೆ ಪ್ರಾಣಿಗಳು ಹೊರಗೆ ಅಲೆದಾಡಲು ಮತ್ತು ದೂರದವರೆಗೆ ಪ್ರಯಾಣಿಸಲು ಪ್ರಾರಂಭಿಸಿವೆ. ದಾರಿಯಲ್ಲಿ, ಮಾನವ ವಾಸಸ್ಥಾನಗಳಿಗೆ ಸಮೀಪದಲ್ಲಿ ಬರುತ್ತಿದ್ದು ಸಂಘರ್ಷಗಳಿಗೆ ಕಾರಣವಾಗುತ್ತಿದೆ. ಇದನ್ನು ಈಗ ವಿಭಿನ್ನ ರೀತಿಯಲ್ಲಿ ನಿಭಾಯಿಸಬೇಕಾಗಿದೆ ಮತ್ತು ಸರ್ಕಾರ ಆದ್ಯತೆಯನ್ನು ಬದಲಾಯಿಸಬೇಕಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧ್ಯಯನದ ಸಮಯದಲ್ಲಿ, ತಂಡಗಳು ಜಾನುವಾರು ಹತ್ಯೆ ಮತ್ತು ಮಾನವ ಸಾವಿನ ಮಾದರಿಯನ್ನು ಕಂಡುಕೊಂಡಿವೆ. ಹುಲಿಗಳಿಗೆ ವಿಷ ಹಾಕಿ ಚಿರತೆಗಳನ್ನು ಹೊಡೆದು ಸಾಯಿಸಿದ ಪ್ರಕರಣಗಳೂ ವರದಿಯಾಗುತ್ತಿವೆ. ಹುಲಿ ಪದೇ ಪದೇ ಮನುಷ್ಯರ ಜತೆ ಸಂಘರ್ಷಕ್ಕಿಳಿದು ಮಾನವ ಸಾವು ಸಂಭವಿಸಿದರೆ ಅದನ್ನು ಹಿಡಿಯಬೇಕು. ಆದರೆ ಎಲ್ಲಾ ಪ್ರಾಣಿಗಳನ್ನು ಸೆರೆಹಿಡಿಯಲು ಮತ್ತು ಪಂಜರದಲ್ಲಿ ಇಡಲು ಸಾಧ್ಯವಿಲ್ಲ ಎಂಬುದನ್ನು ಜನರು ಅರಿತುಕೊಳ್ಳಬೇಕು ಎಂದು ಅಧಿಕಾರಿ ಹೇಳಿದರು.
Advertisement