ಲ್ಯಾಪ್ ಟಾಪ್, ಬ್ಯಾಗ್... ಅಷ್ಟೇ ಅಲ್ಲ, ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರು ಚಿನ್ನವನ್ನೂ ಮರೆತುಹೋಗುತ್ತಾರೆ...

ದೈನಂದಿನ ಪ್ರಯಾಣಿಕರ ಸಂಖ್ಯೆ ಸರಾಸರಿ 8 ಲಕ್ಷ ದಾಟಿದ್ದು, ಪ್ರಯಾಣಿಕರು ಪ್ಲಾಟ್ ಫಾರ್ಮ್ ಗಳಲ್ಲಿ ಹಾಗೂ ರೈಲುಗಳಲ್ಲಿ ವಸ್ತುಗಳು ಮರೆತುಹೋಗುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ.
A bag with valuables found near the baggage scanner at Yeshwanthpur Metro station
ಪ್ರಯಾಣಿಕರು ಮರೆತುಹೋಗಿರುವ ಬ್ಯಾಗ್ online desk
Updated on

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಹಲವು ವಸ್ತುಗಳನ್ನು ಪ್ರಯಾಣಿಕರು ಮರೆತುಹೋಗುತ್ತಿರುತ್ತಾರೆ. ಈ ವರೆಗೂ ಲ್ಯಾಪ್ ಟಾಪ್, ಬ್ಯಾಗ್ ಗಳನ್ನು ಮರೆತುಹೋಗುತ್ತಿದ್ದ ಪ್ರಕರಣಗಳು ವರದಿಯಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಚಿನ್ನ, ಮಂಗಳ ಸೂತ್ರದಂತಹ ವಸ್ತುಗಳನ್ನೂ ಪ್ರಯಾಣಿಕರು ಮರೆತುಹೋಗುತ್ತಿರುವ ಬಗ್ಗೆ ವರದಿಗಳಾಗುತ್ತಿವೆ.

ದೈನಂದಿನ ಪ್ರಯಾಣಿಕರ ಸಂಖ್ಯೆ ಸರಾಸರಿ 8 ಲಕ್ಷ ದಾಟಿದ್ದು, ಪ್ರಯಾಣಿಕರು ಪ್ಲಾಟ್ ಫಾರ್ಮ್ ಗಳಲ್ಲಿ ಹಾಗೂ ರೈಲುಗಳಲ್ಲಿ ವಸ್ತುಗಳು ಮರೆತುಹೋಗುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ.

ಈ ರೀತಿಯಾಗಿ ಮರೆತುಹೋಗುವ ವಸ್ತುಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವ ವ್ಯವಸ್ಥೆ ಮೆಟ್ರೋನಲ್ಲಿ ಇದ್ದು, ಸಿಸಿಟಿವಿಗಳ ನೆರವಿನಿಂದ ಇದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆ. ಪ್ರಯಾಣಿಕರು ತಮ್ಮ ವಸ್ತುಗಳನ್ನು ಪಡೆಯಲು ಪ್ರಯತ್ನಿಸಿದರೆ ಅವುಗಳನ್ನು ಮರಳಿ ಪಡೆಯಬಹುದಾಗಿದೆ.

ಮೆಟ್ರೊ ಮೂಲವೊಂದರ ಪ್ರಕಾರ, ಇದುವರೆಗೆ ಪತ್ತೆಯಾದ ಅತ್ಯಂತ ದುಬಾರಿ ವಸ್ತುಗಳ ಪೈಕಿ ₹ 4 ಲಕ್ಷ ಮೌಲ್ಯದ ಚಿನ್ನಾಭರಣಗಳು ಆಗಸ್ಟ್ 17 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಬಿಆರ್‌ಸಿಎಸ್) ಮೆಟ್ರೊ ನಿಲ್ದಾಣದಲ್ಲಿ ಪತ್ತೆಯಾಗಿವೆ. “ಎರಡು ಚಿನ್ನದ ಸರಗಳು ಮತ್ತು ಎರಡು ಚಿನ್ನದ ಉಂಗುರಗಳನ್ನು ಒಳಗೊಂಡ 50 ಗ್ರಾಂ ಚಿನ್ನಾಭರಣಗಳ ಬ್ಯಾಗ್ ನ್ನು ಪ್ರಯಾಣಿಕರೊಬ್ಬರು ರಾತ್ರಿ 10.30 ರ ವೇಳೆಗೆ ನಿಲ್ದಾಣದ 1ನೇ ಪ್ಲಾಟ್‌ಫಾರ್ಮ್‌ನಲ್ಲಿ ಬಿಟ್ಟು ಹೋಗಿದ್ದರು. ಬ್ಯಾಗ್ ನಲ್ಲಿ 3,500 ರೂಪಾಯಿ ನಗದು ಕೂಡ ಇತ್ತು. ಇದನ್ನು ಕಂಡ ಖಾಸಗಿ ಭದ್ರತಾ ಸಿಬ್ಬಂದಿ ಸ್ವಲ್ಪ ಸಮಯದ ನಂತರ ನಿಲ್ದಾಣದಲ್ಲಿದ್ದ ಭದ್ರತಾ ಅಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಿದರು, ”ಎಂದು ಮೂಲಗಳು ತಿಳಿಸಿವೆ.

ಬಿಟ್ಟು ಹೋಗಲಾದ ಬ್ಯಾಗ್‌ಗಳನ್ನು ನಿಯಮದ ಪ್ರಕಾರ, ಹ್ಯಾಂಡ್‌ಹೆಲ್ಡ್ ಮೆಟಲ್ ಡಿಟೆಕ್ಟರ್‌ಗಳನ್ನು ಬಳಸಿ ಸ್ಕ್ಯಾನ್ ಮಾಡಲಾಗುತ್ತದೆ ಮತ್ತು ವಸ್ತುಗಳನ್ನು ಪರೀಕ್ಷಿಸುವ ಮೊದಲು ಎಕ್ಸ್-ರೇ ತಪಾಸಣೆ ವ್ಯವಸ್ಥೆಯ ಮೂಲಕ ರವಾನಿಸಲಾಯಿತು.

A bag with valuables found near the baggage scanner at Yeshwanthpur Metro station
ಬೆಂಗಳೂರು ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಅನುಮತಿ

ಒಂದು ಗಂಟೆಯೊಳಗೆ ಬಸವರಾಜ ನಾಗನೂರ ಎಂಬ ಪ್ರಯಾಣಿಕರು ನಿಲ್ದಾಣಕ್ಕೆ ಬಂದು ತಾವು ಮರೆತುಹೋಗಿದ್ದ ಬ್ಯಾಗ್ ಬಗ್ಗೆ ವಿಚಾರಿಸಿದರು. ಪ್ರಯಾಣಿಕರು ಬ್ಯಾಗ್‌ನ ಬಣ್ಣ ಮತ್ತು ಒಳಗಿನ ವಸ್ತುಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿದ್ದರಿಂದ, ಅವರ ಗುರುತಿನ ಚೀಟಿಯನ್ನು ಪರಿಶೀಲಿಸಿದ ನಂತರ, ಅವರಿಗೆ ಬ್ಯಾಗ್ ನ್ನು ಹಸ್ತಾಂತರಿಸಲಾಗಿದೆ, ”ಎಂದು ಮೆಟ್ರೋ ಮೂಲಗಳು ತಿಳಿಸಿವೆ.

ಆಗಸ್ಟ್ 14 ರಂದು, ಬೀನಾ ಖಾನ್ ಎಂಬ ಪ್ರಯಾಣಿಕರೊಬ್ಬರು ರಾತ್ರಿ 8 ಗಂಟೆ ಸುಮಾರಿಗೆ ಯಶವಂತಪುರ ಮೆಟ್ರೋ ನಿಲ್ದಾಣದ ಬ್ಯಾಗೇಜ್ ಸ್ಕ್ಯಾನರ್ ಬಳಿ ತನ್ನ ಕೈಚೀಲವನ್ನು ಮರೆತಿದ್ದರು. ಅದರಲ್ಲಿ ನಾಲ್ಕು ಚಿನ್ನದ ಉಂಗುರಗಳು ಮತ್ತು 1,200 ರೂಪಾಯಿ ನಗದು ಇತ್ತು. ಆಕೆ ನಿಲ್ದಾಣಕ್ಕೆ ಮರಳಿ ಅದನ್ನು ವಾಪಸ್ ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ಹತ್ತು ದಿನಗಳ ಹಿಂದೆ ನಾಡಪ್ರಭು ಕೆಮೇಗೌಡ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಎರಡು ಚಿನ್ನದ ಮಂಗಳಸೂತ್ರಗಳು ಪತ್ತೆಯಾಗಿತ್ತು ಎಂದು ಹಿರಿಯ ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಯಾಣಿಕರು ಮೆಟ್ರೋ ಹತ್ತುವಾಗ ಅಥವಾ ಇಳಿಯುವಾಗ ಜಾರಿ ಬಿದ್ದಿರಬೇಕು. ನಾವು ಮಂಗಳಸೂತ್ರಗಳಂತಹ ವಸ್ತುಗಳನ್ನು ಮರೆತುಹೋಗುವುದನ್ನು ಅಪರೂಪವಾಗಿ ಕಾಣುತ್ತೇವೆ. ಮರುದಿನ ಒಬ್ಬ ಮಹಿಳೆ ದೂರು ದಾಖಲಿಸಲು ಬಂದು ನಮ್ಮ ಬಳಿ ಅವರ ಆಭರಣಗಳು ಸುರಕ್ಷಿತವಾಗಿರುವುದನ್ನು ಕಂಡು ಸಮಾಧಾನಗೊಂಡರು. ಇನ್ನೊಂದು ಇನ್ನೂ ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ನಮ್ಮ ‘lost & found ವಿಭಾಗದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲುಗಳಲ್ಲಿ ಟಿಫಿನ್ ಬ್ಯಾಗ್‌ಗಳು ಸಾಮಾನ್ಯವಾಗಿ ಮರೆತುಹೋಗುವ ವಸ್ತುಗಳಾಗಿವೆ. ನಿಲ್ದಾಣಗಳಲ್ಲಿ ಪ್ರತಿದಿನ ಕೆಲವು ಬ್ಯಾಗ್‌ಗಳು ಕಂಡುಬರುತ್ತವೆ. ಲ್ಯಾಪ್‌ಟಾಪ್‌ಗಳು, ಹೆಲ್ಮೆಟ್‌ಗಳು ಮತ್ತು ಛತ್ರಿಗಳು ಸಾಮಾನ್ಯವಾಗಿ ಬಿಟ್ಟುಹೋಗುವ ಇತರ ವಸ್ತುಗಳಾಗಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

A bag with valuables found near the baggage scanner at Yeshwanthpur Metro station
ಬೆಂಗಳೂರು: Namma Metro ಚಾಲಕರಹಿತ ರೈಲಿನ ವ್ಯವಸ್ಥೆ, ನಿಯಂತ್ರಣ ಹೇಗೆ? ಇಲ್ಲಿದೆ Video

ರೈಲುಗಳು ಅಥವಾ ನಿಲ್ದಾಣಗಳಲ್ಲಿ ಕಳೆದುಹೋದ ವಸ್ತುಗಳನ್ನು ಪ್ರಯಾಣಿಕರು ಬಂದು ವಾಪಸ್ ಪಡೆಯಲು ಅನುಕೂಲವಾಗುವಂಟೆ 24 ಗಂಟೆಗಳವರೆಗೆ ನಿಲ್ದಾಣದಲ್ಲಿ ಇರಿಸಲಾಗುತ್ತದೆ. ಆ ಬಳಿಕ ಅವುಗಳನ್ನು ಪ್ರತ್ಯೇಕ Lost and found ವಿಭಾಗವನ್ನು ಹೊಂದಿರುವ ಯಶವಂತಪುರ ಅಥವಾ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳಿಗೆ ವಸ್ತುಗಳನ್ನು ಕಳುಹಿಸಲಾಗುತ್ತದೆ. ಜನರು ತಮ್ಮ ಐಡಿಗಳನ್ನು ತಯಾರಿಸಬೇಕು ಮತ್ತು ಆರು ತಿಂಗಳೊಳಗೆ ಅವುಗಳನ್ನು ವಾಪಸ್ ಪಡೆಯಬಹುದಾಗಿದೆ. ಯಾರೂ ಹಿಂಪಡೆಯದ ವಸ್ತುಗಳಿದ್ದ ಸಂದರ್ಭದಲ್ಲಿ, ಅವುಗಳನ್ನು ವಿಲೇವಾರಿ ಮಾಡಲು ಪ್ರತಿ ಆರು ತಿಂಗಳಿಗೊಮ್ಮೆ ಹರಾಜು ನಡೆಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com