
ಬೆಂಗಳೂರು: ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ತಲುಪಿಸುವ ಡಿಜಿಟಲ್ ಜಾಹೀರಾತು ವ್ಯವಸ್ಥೆ ಬಳಸಿಕೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತೀರ್ಮಾನಿಸಿದ್ದು, ಈ ಕುರಿತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಅರ್ಹತೆ ಪಡೆಯಲು ಡಿಜಿಟಲ್ ಘಟಕಗಳು ಕಡ್ಡಾಯವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೋಂದಾಯಿಸಿರಬೇಕು.
ಅರ್ಹ ಡಿಜಿಟಲ್ ಮಾಧ್ಯಮ ಘಟಕಗಳು ಇಂತಿವೆ: ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಗಳು: ಗೂಗಲ್, ಯುಟ್ಯೂಬ್, ಮೆಟಾ (ಫೇಸ್ ಬುಕ್) ಇನ್ಸ್ಟಾಗ್ರಾಂ, ವಾಟ್ಸಾಪ್ ಬಿಸಿನೆಸ್, ವಾಟ್ಸಾಪ್ ಚಾನೆಲ್ , ಗೂಗಲ್, ಬಿಂಗ್ ಮತ್ತಿತರ ಸರ್ಜ್ ಇಂಜಿನ್ ಗಳು, ಎಕ್ಸ್, ಫೇಸ್ ಬುಕ್, ವಾಟ್ಸಾಪ್, ಸ್ನ್ಯಾಪ್ ಚಾಟ್ ಮತ್ತಿತರ ಸಾಮಾಜಿಕ ಜಾಲತಾಣಗಳು, ಪೇಟಿಎಂ, ಫೋನ್ ಪೇ , ಜಿಪೇಯಂತಹ ಫಿನ್ ಟೆಕ್ ಪ್ಲಾಟ್ ಫಾರ್ಮ್, ವೆಬ್ ಪೋರ್ಟಲ್, ನ್ಯೂಸ್ ಅಗ್ರಿಗೇಟರ್, ಕಾಲ್ ಸೆಂಟರ್, ಚಾಟ್ ಬಾಟ್, ಇನ್ ಫ್ಲ್ಯುಯನ್ಸರ್ ಸೇರಿದ್ದಾರೆ.
ದರ: ಪ್ರತಿ ಜಾಹೀರಾತು ಪ್ರಕಾರಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಿಗದಿಪಡಿಸಿದಂತೆ ದರಗಳು ಇರಬೇಕು. ದರಗಳು ಬದಲಾವಣೆಗೊಳಗಾಗುವ ಸ್ವರೂಪದ್ದಾಗಿದ್ದರೆ ಡಿಎವಿಪಿ ದರಗಳನ್ನು ಮೀರದಂತೆ ಸ್ವತಂತ್ರವಾಗಿ ದರ ನಿಗದಿಪಡಿಸುವ ವಿಧಾನ ಅನುಸರಿಸಬಹುದು.
ಡಿಜಿಟಲ್ ಜಾಹೀರಾತು ಏಜೆನ್ಸಿಗೆ ಅರ್ಹತೆ: ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಂಪನೀಸ್ ನಲ್ಲಿ ನೋಂದಣಿಯಾದ ಕಾನೂನುಬದ್ಧ ಸಂಘಟಿತ ಘಟಕವಾಗಿರಬೇಕು, ಎಂಪ್ಯಾನೆಲಿಂಗ್ ಸಮಯದಲ್ಲಿ ಕನಿಷ್ಠ ಎರಡು ವರ್ಷವಾಗಿರಬೇಕು, ಮಾನ್ಯವಾದ ಜಿಎಸ್ ಟಿ ನೋಂದಣಿ ಇರಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರಬೇಕು ಅಥವಾ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿ ಇರಬೇಕು. ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಪ್ರಾವೀಣ್ಯತೆ ಇರಬೇಕು. ಡಿಜಿಟಲ್ ಜಾಹೀರಾತು ಮತ್ತು ಸಾಮಾಜಿಕ ಜಾಲತಾಣದ ಕುರಿತು ಆಳವಾದ ಜ್ಞಾನವಿರಬೇಕು.
Advertisement