ಮೈಸೂರು: ಸಿಎಂ ಸಿದ್ದರಾಮಯ್ಯ ಪತ್ನಿ, ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ ವಿರುದ್ಧ ದೂರು ದಾಖಲು

ಸಿದ್ದರಾಮಯ್ಯ ವಿರುದ್ಧ ಈ ಹಿಂದೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಅವರು ಬುಧವಾರ ಈ ಹೊಸ ದೂರು ದಾಖಲಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್
ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್
Updated on

ಮೈಸೂರು: ಮುಡಾ ಹಗರಣದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ, ಮೂಲ ದಾಖಲಾತಿ ನಾಶಪಡಿಸಿ, ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) 14 ನಿವೇಶನಗಳನ್ನು ಅಕ್ರಮವಾಗಿ ಪಡೆಯುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರು ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಸಿದ್ದರಾಮಯ್ಯ ವಿರುದ್ಧ ಈ ಹಿಂದೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಅವರು ಬುಧವಾರ ಈ ಹೊಸ ದೂರು ದಾಖಲಿಸಿದ್ದಾರೆ.

ಜುಲೈ 26, 2024 ರಂದು ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ತಮ್ಮ ಪತ್ನಿ ಪಾರ್ವತಿ ಅವರು ಜೂನ್ 23, 2014 ರಂದು ಮುಡಾ ಆಯುಕ್ತರಿಗೆ ಬರೆದ ಪತ್ರವನ್ನು ಬಿಡುಗಡೆ ಮಾಡಿದ್ದಾರೆ ಎಂದು ಕೃಷ್ಣ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಪತ್ರದ ಎರಡನೇ ಪುಟದಲ್ಲಿ ಕೆಲವು ಪದಗಳನ್ನು ಅಸ್ಪಷ್ಟಗೊಳಿಸಲು ವೈಟ್ನರ್ ಬಳಸಿರುವುದು ತೀವ್ರ ಅನುಮಾನಕ್ಕೆ ಕಾರಣವಾಗಿತ್ತು. ಪತ್ರಿಕಾಗೋಷ್ಠಿಯ ನಂತರ, ಸಿಎಂ ಸಿದ್ದರಾಮಯ್ಯ ಅವರು ಆಗಸ್ಟ್ 26, 2024 ರಂದು ವಿಡಿಯೋ ಕ್ಲಿಪ್ ವೊಂದನ್ನು ಟ್ವೀಟ್ ಮಾಡಿ, ವೈಟ್ನರ್ ಹಿಂದೆ ಏನಿತ್ತು ಎಂಬುದನ್ನು ವಿವರಿಸಿದ್ದರು. ಅರದಲ್ಲಿರುವ ಪಾರ್ವತಿ ಅವರ ಸಹಿಗೂ ನಾವು ಮಾಹಿತಿ ಹಕ್ಕಿನಡಿ ಪಡೆದಕೊಂಡ ಅದೇ ಪತ್ರದಲ್ಲಿರುವ ಸಹಿಗೂ ವ್ಯತ್ಯಾಸಗಳಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್
ಮುಡಾ ಹಗರಣ ನಡುವಲ್ಲೇ ವಿಶ್ವನಾಥ್-ಡಿಕೆಶಿ ಭೇಟಿ: ಕುತೂಹಲ ಮೂಡಿಸಿದ ನಾಯಕರ ಮಾತುಕತೆ!

ಎರಡು ಪತ್ರಗಳ ಸಹಿಗಳಲ್ಲಿ ನಕಲಿಯನ್ನು ಸೂಚಿಸುವ ಒಂಬತ್ತು ಪ್ರಮುಖ ವ್ಯತ್ಯಾಸಗಳಿವೆ. ವಿವಿಧ ಅಕ್ಷರಗಳಲ್ಲಿ ಭಿನ್ನತೆ ಕಂಡುಬಂದಿದೆ. ಸಹಿಗಳ ಪಕ್ಕದಲ್ಲಿರುವ ಗುರುತುಗಳಲ್ಲಿನ ವ್ಯತ್ಯಾಸಗಳಿವ. ಈ ವ್ಯತ್ಯಾಸಗಳು ಮೂಲ, ಅಧಿಕೃತ ದಾಖಲೆಗಳನ್ನು ಬದಲಿಸಿ ಸುಳ್ಳು ದಾಖಲೆ ಸೃಷ್ಟಿಸಿ ಅಧಿಕೃತ ದಾಖಲೆಗಳಲ್ಲಿ ಸೇರಿಸಿರುವುದನ್ನು ಸೂಚಿಸುತ್ತವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ ಅವರು ಚರ್ಚಿಸುತ್ತಿರುವ ಧ್ವನಿ ಕೇಳಿಸುತ್ತಿದೆ.

ಪಾರ್ವತಿ ಸಿದ್ದರಾಮಯ್ಯ, ಎಂ.ಲಕ್ಷ್ಮಣ ಮತ್ತು ಭಾಗಿಯಾಗಿರುವ ಇತರೆ ಯಾವುದೇ ವ್ಯಕ್ತಿಗಳ ವಿರುದ್ಧ ದಾಖಲೆಗಳನ್ನು ನಿರ್ಮಿಸುವುದು, ಮೂಲ ದಾಖಲೆಗಳನ್ನು ನಾಶಪಡಿಸುವುದು ಮತ್ತು ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪ್ರಕರಣ ದಾಖಲಿಸುವಂತೆ ಲಕ್ಷ್ಮೀಪುರಂ ಪೊಲೀಸರಿಗೆ ಮನವಿ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com