ಬೆಂಗಳೂರು: ಹೊಸಕೋಟೆಯಲ್ಲಿ ನಾಡಬಾಂಬ್ ಸ್ಫೋಟ; ಮಗ ಸಾವು, ತಂದೆ ಸ್ಥಿತಿ ಗಂಭೀರ

ಮೃತ ಯುವಕನನ್ನು ದೊಡ್ಡನಲ್ಲಾಳ ಗ್ರಾಮದ ಪವನ್(19) ಎಂದು ಗುರುತಿಸಲಾಗಿದೆ. ಸ್ಫೋಟದ ರಭಸಕ್ಕೆ ಮನೆಯ ಮೇಲ್ವಾವಣಿ ಛಿದ್ರ ಛಿದ್ರವಾಗಿದೆ.
ನಾಡಬಾಂಬ್ ಸ್ಫೋಟ
ನಾಡಬಾಂಬ್ ಸ್ಫೋಟ
Updated on

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದೊಡ್ಡನಲ್ಲಾಳ ಗ್ರಾಮದಲ್ಲಿ ಶುಕ್ರವಾರ ನಾಡಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ 19 ವರ್ಷದ ಯುವಕ ಮೃತಪಟ್ಟಿದ್ದು, ಆತನ ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತ ಯುವಕನನ್ನು ದೊಡ್ಡನಲ್ಲಾಳ ಗ್ರಾಮದ ಪವನ್(19) ಎಂದು ಗುರುತಿಸಲಾಗಿದೆ. ಸ್ಫೋಟದ ರಭಸಕ್ಕೆ ಮನೆಯ ಮೇಲ್ವಾವಣಿ ಛಿದ್ರ ಛಿದ್ರವಾಗಿದೆ.

ಕಾಡು ಪ್ರಾಣಿಗಳ ಬೇಟೆಗಾಗಿ ನಾಡಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಟೋಟವಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಾಡಬಾಂಬ್ ಸ್ಫೋಟ
ಹೊಸಕೋಟೆ: ಕೊಲೆ ಆರೋಪಿ ಮನೆ ಮೇಲೆ ಕುಟುಂಬಸ್ಥರ ದಾಳಿ, ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com