ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕಳೆದ ತಿಂಗಳು ಶೇ. 9.2 ರಷ್ಟು ಹೆಚ್ಚಳವನ್ನು ದಾಖಲಿಸಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐ) ತಿಳಿಸಿದೆ.
ಎಎಐ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಜುಲೈ 2023 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 30,13,675 ಪ್ರಯಾಣಿಕರು ಹಾರಾಟ ನಡೆಸಿದ್ದಾರೆ. ಕಳೆದ ತಿಂಗಳು ಒಟ್ಟು 32,91,960 ಅಂತರಾಷ್ಟ್ರೀಯ ಮತ್ತು ದೇಶೀಯ ವಿಮಾನಯಾನಗಳ ಮೂಲಕ ಪ್ರಯಾಣಿಸಿದ್ದಾರೆ.
KIA ನಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಂಗಳೂರಿನಿಂದ 4,44,759 ಪ್ರಯಾಣಿಕರು ದೇಶದಿಂದ ಹೊರಗೆ ಹಾರಿದ್ದಾರೆ. ಇದು ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 12.9 ರಷ್ಟು ಬೆಳವಣಿಗೆ ದಾಖಲಿಸಿದೆ. 28,47,201 ಪ್ರಯಾಣಿಕರೊಂದಿಗೆ ದೇಶೀಯ ಪ್ರಯಾಣಿಕರ ಬೆಳವಣಿಗೆಯು ಶೇಕಡಾ 8.7 ರಷ್ಟಿದೆ ಎಂದು ವರದಿ ಬಹಿರಂಗಪಡಿಸಿದೆ.
AAI ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಜುಲೈ 2024 ರಲ್ಲಿ ಒಟ್ಟಾರೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 7.8 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಜುಲೈನಲ್ಲಿ 3,01,17,351 ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದು, ಈ ವರ್ಷ ಜುಲೈನಲ್ಲಿ 3,24,65,443 ಪ್ರಯಾಣಿಕರು ಹಾರಾಟ ನಡೆಸಿದ್ದಾರೆ.
ರಾಜ್ಯದ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವ ಮಂಗಳೂರು ಕಳೆದ ತಿಂಗಳು 1,80,245 ಪ್ರಯಾಣಿಕರೊಂದಿಗೆ ಶೇಕಡಾ 9.6 ರಷ್ಟು ಬೆಳವಣಿಗೆ ಕಂಡಿದೆ. 45608 ಫ್ಲೈಯರ್‌ಗಳೊಂದಿಗೆ ಅಂತರರಾಷ್ಟ್ರೀಯ ಪ್ರಯಾಣಿಕರ ಕೊಡುಗೆ .ಶೇಕಡಾ 9 ರಷ್ಟಿದೆ.
ಬೆಳಗಾವಿ ವಿಮಾನ ನಿಲ್ದಾಣವು 27,860 ಪ್ರಯಾಣಿಕರೊಂದಿಗೆ ಕಳೆದ ವರ್ಷದ ಜುಲೈಗಿಂತ ಶೇ. 32.4 ರಷ್ಟು ಬೆಳವಣಿಗೆ ಸಾಧಿಸಿದೆ.
ಇನ್ನು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣವು 1368 ಫ್ಲೈಯರ್ಸ್ ಗಳೊಂದಿಗೆ ಶೇ. 26.4 ರಷ್ಟು ಹೆಚ್ಚಳ ದಾಖಲಿಸಿದೆ.
ನೆಗಟಿವ್ ಬೆಳವಣಿಗೆ
ಜುಲೈ 2023 ರಲ್ಲಿ 13,053 ಪ್ರಯಾಣಿಕರಿಗೆ ಹೋಲಿಸಿದರೆ ಈ ವರ್ಷ ಕೇವಲ 7820 ಪ್ರಯಾಣಿಕರೊಂದಿಗೆ ಮೈಸೂರು ವಿಮಾನ ನಿಲ್ದಾಣ ನೆಗಟಿವ್ ಬೆಳವಣಿಗೆ ದಾಖಲಿಸಿದೆ.
ರಾಜ್ಯದ ಇತರ ವಿಮಾನ ನಿಲ್ದಾಣಗಳ ಪ್ರಯಾಣಿಕರ ಸಂಖ್ಯೆಯೂ ಕುಸಿತವಾಗಿದ್ದು,
ಕಲಬುರಗಿ ವಿಮಾನ ನಿಲ್ದಾಣವು ಕಳೆದ ವರ್ಷ 4304 ಪ್ರಯಾಣಿಕರು ಹಾರಾಟ ನಡೆಸಿದ್ದರು.ಈ ವರ್ಷ 3884 ಪ್ರಯಾಣಿಕರೊಂದಿಗೆ ಶೇಕಡಾ 9.8 ರಷ್ಟು ಕುಸಿತ ಕಂಡಿದೆ.
ಹುಬ್ಬಳ್ಳಿಯಲ್ಲಿ ಕಳೆದ ವರ್ಷದ 29,323 ಪ್ರಯಾಣಿಕರಿಗೆ ಹೋಲಿಸಿದರೆ ಈ ವರ್ಷ 26,763 ಪ್ರಯಾಣಿಕರೊಂದಿಗೆ ಶೇ. 8.7 ರಷ್ಟು ಕುಸಿದಿದೆ.
Advertisement