ರಾಜ್ಯದಲ್ಲಿ ವಿಮಾನ ಪ್ರಯಾಣಿಕರ ದಟ್ಟಣೆ ಹೆಚ್ಚಳ; ಶೇ.8.1 ರಷ್ಟು ಏರಿಕೆ!

ದೇಶದಲ್ಲಿನ ವಿಮಾನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕಳೆದ ತಿಂಗಳು 8.1% ರಷ್ಟು ಹೆಚ್ಚಳವನ್ನು ದಾಖಲಿಸಿವೆ ಎಂದು ವರದಿಯೊಂದು ತಿಳಿಸಿದೆ.
ವಿಮಾನ ಪ್ರಯಾಣಿಕರು
ವಿಮಾನ ಪ್ರಯಾಣಿಕರುTNIE

ಬೆಂಗಳೂರು: ದೇಶದಲ್ಲಿನ ವಿಮಾನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕಳೆದ ತಿಂಗಳು 8.1% ರಷ್ಟು ಹೆಚ್ಚಳವನ್ನು ದಾಖಲಿಸಿವೆ ಎಂದು ವರದಿಯೊಂದು ತಿಳಿಸಿದೆ.

ಹೌದು.. ಕಳೆದ ವರ್ಷ ಫೆಬ್ರವರಿಗೆ ಹೋಲಿಸಿದರೆ ವಿಮಾನ ನಿಲ್ದಾಣಗಳಲ್ಲಿನ ಪ್ರಯಾಣಿಕರ ಸಂಖ್ಯೆ ಮಾರ್ಚ್ ನಲ್ಲಿ 8.1% ರಷ್ಟು ಹೆಚ್ಚಳವನ್ನು ದಾಖಲಿಸಿದ್ದು, ಮಾತ್ರವಲ್ಲದೇ ದೇಶದಿಂದ ಅಂತರರಾಷ್ಟ್ರೀಯ ಪ್ರಯಾಣವು ಬೆಳವಣಿಗೆಯನ್ನು ಹೆಚ್ಚಿಸುತ್ತಿದೆ.

ಫೆಬ್ರವರಿ 2024 ರ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಬಿಡುಗಡೆ ಮಾಡಿದ ಏರ್ ಟ್ರಾಫಿಕ್ ವರದಿಯು ಕರ್ನಾಟಕದ ಬೆಂಗಳೂರು, ಮಂಗಳೂರು ಮತ್ತು ಬೆಳಗಾವಿಯ ವಿಮಾನ ನಿಲ್ದಾಣಗಳಲ್ಲಿ ದಟ್ಟಣೆ ಕಂಡು ಬಂದರೆ, ಮೈಸೂರು, ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.

ಫೆಬ್ರವರಿ 2024ರಲ್ಲಿ 5.94 ಮಿಲಿಯನ್ ಪ್ರಯಾಣಿಕರೊಂದಿಗೆ ಅಂತರರಾಷ್ಟ್ರೀಯ ದಟ್ಟಣೆಯಲ್ಲಿ ದೇಶವು 19.3% ಬೆಳವಣಿಗೆಯನ್ನು ಕಂಡಿದೆ ಎಂದು ದತ್ತಾಂಶ ಬಹಿರಂಗಪಡಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 4.98 ಮಿಲಿಯನ್‌ ಪ್ರಯಾಣಿಕರ ದಟ್ಟಣೆ ದಾಖಲಾಗಿತ್ತು. 24.05 ಮಿಲಿಯನ್‌ ನಷ್ಟಿದ್ದ ದೇಶೀಯ ಸಂಚಾರವು 5.8% ಬೆಳವಣಿಗೆಯೊಂದಿಗೆ 25.44 ಮಿಲಿಯನ್ ಗೆ ಏರಿಕೆಯಾಗಿದೆ.

ವಿಮಾನ ಪ್ರಯಾಣಿಕರು
ಟರ್ಮಿನಲ್ 2ಗೆ ಯುನೆಸ್ಕೋ ಪುರಸ್ಕಾರ: ಜಾಗತಿಕ ಮನ್ನಣೆ ಪಡೆದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ!

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಒಟ್ಟಾರೆ 6.3%ರಷ್ಟು ಪ್ರಯಾಣಿಕರ ಹೆಚ್ಚಳವನ್ನು ಕಂಡಿದೆ. ಫೆಬ್ರವರಿಯಲ್ಲಿ ಅಂದರೆ ಹೋಲಿಕೆಗಾಗಿ ತೆಗೆದುಕೊಂಡ ಅವಧಿಯಲ್ಲಿ 28,66,773 ಪ್ರಯಾಣಿಕರ ಪ್ರಮಾಣವಿದ್ದರೆ ಮಾರ್ಚ್ ನಲ್ಲಿ ಈ ಪ್ರಮಾಣ 30,46,010 ನಷ್ಟಿತ್ತು ಎಂದು ಹೇಳಲಾಗಿದೆ.

ಇದರಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯು ಕಳೆದ ವರ್ಷದ ಫೆಬ್ರವರಿಗಿಂತ 16.4% ಏರಿಕೆ ಹೊಂದಿದೆ. ಕಳೆದ ತಿಂಗಳು ಬೆಂಗಳೂರಿನಿಂದ 3,78,052 ಪ್ರಯಾಣಿಕರು ವಿದೇಶಕ್ಕೆ ಹಾರಿದ್ದಾರೆ. ಫೆಬ್ರವರಿ 2024 ರಲ್ಲಿ ಈ ಪ್ರಮಾಣ 26,67,958ರಷ್ಟಿತ್ತು. ನಿಲ್ದಾಣದ ದೇಶೀಯ ಬೆಳವಣಿಗೆಯು 5% ರಷ್ಟಿದೆ ಎಂದು ದತ್ತಾಂಶಗಳಿಂದ ತಿಳಿದುಬಂದಿದೆ.

ಅಂತೆಯೇ ಬೆಳಗಾವಿಯಲ್ಲಿ ಇಂತಹುದೇ ದತ್ತಾಂಶ ದೊರೆತಿದ್ದು, 2023ರ ಫೆಬ್ರವರಿಯಲ್ಲಿ 16,353 ಪ್ರಯಾಣಿಕರು ಪ್ರಯಾಣಿಸಿದ್ದು, ಈ ವರ್ಷ ಫೆಬ್ರವರಿಯಲ್ಲಿ 29,530 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಆ ಮೂಲಕ ಇಲ್ಲಿ ಶೇ. 80.6% ಬೆಳವಣಿಗೆ ದಾಖಲಾಗಿದೆ.

ವಿಮಾನ ಪ್ರಯಾಣಿಕರು
ಜನಸಂದಣಿ, ಪ್ರಯಾಣ ಮಾಹಿತಿಗಾಗಿ BLR Pulse ಆ್ಯಪ್ ಅಭಿವೃದ್ಧಿಪಡಿಸಿದ ಬೆಂಗಳೂರು ವಿಮಾನ ನಿಲ್ದಾಣ

ಈ ಬೆಳವಣಿಗೆ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ನೊಂದಿಗೆ ಮಾತನಾಡಿರುವ ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್ ತ್ಯಾಗರಾಜನ್, 'ಸ್ಪೈಸ್‌ಜೆಟ್ ಬೆಳಗಾವಿಯಲ್ಲಿ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ನಂತರ, ಇಂಡಿಗೋ ಬೆಳಗಾವಿ-ದೆಹಲಿ ಮಾರ್ಗದಲ್ಲಿ ದೈನಂದಿನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇದು ಈಗ ಶೇ.70% ಪ್ರಯಾಣಿಕರೊಂದಿಗೆ ಉತ್ತಮ ಪ್ರೋತ್ಸಾಹವನ್ನು ಹೊಂದಿದೆ. ಬೇಸಿಗೆ ರಜೆ ಆರಂಭವಾದಾಗ ಈ ಪ್ರಮಾಣ ಶೇ.90 ದಾಟಿದೆ.

ಅಲ್ಲದೆ, ಸ್ಟಾರ್‌ಏರ್ ಸಂಸ್ಥೆ ಈ ಹಿಂದೆ ಇಲ್ಲಿಂದ ಮುಂಬೈಗೆ ಎಂಬ್ರೇರ್ 145 ವಿಮಾನಗಳನ್ನು ನಿರ್ವಹಿಸುತ್ತಿತ್ತು. ಇದೀಗ ಅದನ್ನು 175 ವಿಮಾನಗಳಿಗೆ ಏರಿಕೆ ಮಾಡಲಾಗಿದ್ದು, ವಿಮಾನವು 80 ಆಸನಗಳನ್ನು ಹೊಂದಿದೆ ಮತ್ತು ಅದರ ಕಾರ್ಯಾಚರಣೆಯು ವಾರಕ್ಕೆ ಆರು ದಿನಗಳವರೆಗೆ ಇರುತ್ತದೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಮಂಗಳೂರು ಈ ವರ್ಷದ ಫೆಬ್ರವರಿಯಲ್ಲಿ 1,69,362 ಪ್ರಯಾಣಿಕರೊಂದಿಗೆ 24.5% ಬೆಳವಣಿಗೆಯನ್ನು ದಾಖಲಿಸಿದೆ, ಕಳೆದ ಫೆಬ್ರವರಿಯಲ್ಲಿ ಈ ಪ್ರಮಾಣ 1,36,007 ರಷ್ಚಿತ್ತು. ಕರ್ನಾಟಕದ ಹೊಸ ವಿಮಾನ ನಿಲ್ದಾಣ, ಶಿವಮೊಗ್ಗ, ಫೆಬ್ರವರಿಯಲ್ಲಿ 7,282 ಪ್ರಯಾಣಿಕರೊಂದಿಗೆ ನಿಧಾನವಾಗಿ ವೇಗವನ್ನು ಪಡೆದುಕೊಳ್ಳುತ್ತಿದೆ. ಈ ವರ್ಷದ ಜನವರಿಯಲ್ಲಿ ಇದು 6,430 ಪ್ರಯಾಣಿಕರನ್ನು ಹೊಂದಿತ್ತು.

ವಿಮಾನ ಪ್ರಯಾಣಿಕರು
ಬೆಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಮಾಣ 5 ಪಟ್ಟು ಹೆಚ್ಚಳ!

ಮೈಸೂರು ವಿಮಾನ ನಿಲ್ದಾಣವು ಕೇವಲ 8,096 ಪ್ರಯಾಣಿಕರನ್ನು ದಾಖಲಿಸುವ ಮೂಲಕ ಈ ಪಟ್ಟಿಯಲ್ಲಿ ಭಾರಿ ಕುಸಿತ ಮುಂದುವರೆಸಿದೆ. ಫೆಬ್ರವರಿ 2023 ಕ್ಕಿಂತ ಇದು ಶೇ.37.3% ನಷ್ಟು ಕಡಿಮೆಯಾಗಿದೆ. ಫೆಬ್ರವರಿಯಲ್ಲಿ 12,918 ವಿಮಾನ ಪ್ರಯಾಣಿಕರು ಇಲ್ಲಿಂದ ಪ್ರಯಾಣ ನಡೆಸಿದ್ದರು.

ವಿಮಾನ ನಿಲ್ದಾಣದ ನಿರ್ದೇಶಕ ಟಿಆರ್ ಅನೂಪ್ ಅವರು ಈ ಬಗ್ಗೆ ಮಾತನಾಡಿದ್ದು, 'ಅಲಯನ್ಸ್ ಏರ್ ತನ್ನ ಗೋವಾ ಕಾರ್ಯಾಚರಣೆಯಿಂದ ಹಿಂದೆ ಸರಿದಿದ್ದು, ಮೈಸೂರಿನಿಂದ ಮತ್ತು ನಂತರ ಹೈದರಾಬಾದ್‌ನಿಂದ ಫೆಬ್ರವರಿ ಮಧ್ಯದ ವೇಳೆಗೆ ಕಾರ್ಯಾಚರಣೆಯಿಂದ ಹಿಂದೆ ಸರಿದಿದ್ದು ಪ್ರಯಾಣಿಕರ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ. ಹೈದರಾಬಾದ್ ಮತ್ತು ಚೆನ್ನೈಗೆ ಇಂಡಿಗೋ ವಿಮಾನಗಳು ಪ್ರಸ್ತುತ ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹಿಂದೆ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ವಿವಿಧ ಮಾರ್ಗಗಳನ್ನು ಚಲಾಯಿಸಲು ಆಸಕ್ತಿ ಹೊಂದಿದ್ದ ವಿಮಾನಯಾನ ಸಂಸ್ಥೆಗಳು ಬೇರೆ ಮಾರ್ಗಗಳಿಗೆ ತಿರುಗಿವೆ ಎಂದು ಅವರು ಹೇಳಿದರು.

ಏತನ್ಮಧ್ಯೆ, ಕಲಬುರಗಿಯಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ 25.6% ರಷ್ಟು ಕಡಿಮೆಯಾಗಿದ್ದು, ಫೆಬ್ರವರಿಯಲ್ಲಿ ದಾಖಲಾದ 5,824 ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ಮಾರ್ಚ್ ನಲ್ಲಿ 4,331 ಪ್ರಯಾಣಿಕರು ಮಾತ್ರ ಇಲ್ಲಿಂದ ಪ್ರಯಾಣಿಸಿದ್ದಾರೆ. ಅಂತೆಯೇ ಹುಬ್ಬಳ್ಳಿಯಲ್ಲೂ ಪ್ರಯಾಣಿಕರ ಸಂಖ್ಯೆ 6.1% (27,870) ಕಡಿಮೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com