ಹೀರೋ ಫ್ಯೂಚರ್ಸ್ ಎನರ್ಜಿಸ್ ಸಂಸ್ಥೆಯಿಂದ ರಾಜ್ಯದಲ್ಲಿ ರೂ. 11.000 ಹೂಡಿಕೆ; 3, 000 ಉದ್ಯೋಗಗಳ ಸೃಷ್ಟಿ- ಎಂ. ಬಿ. ಪಾಟೀಲ

ಇನ್ವೆಸ್ಟ್ ಕರ್ನಾಟಕ 2025 ರೋಡ್’ಮ್ಯಾಪ್’ನ ಭಾಗವಾಗಿರುವ ಈ ಪ್ರಮುಖ ಹೂಡಿಕೆಯು ರಾಜ್ಯದಲ್ಲಿ 3,000 ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ
MB Patil and others
ಎಂಬಿ ಪಾಟೀಲ್ ನೇತೃತ್ವದಲ್ಲಿ ಒಪ್ಪಂದ
Updated on

ಬೆಂಗಳೂರು: ಹೀರೊ ಫ್ಯೂಚರ್ ಎನರ್ಜೀಸ್ ರಾಜ್ಯದಲ್ಲಿ ನವೀಕರಿಸಬಲ್ಲ ಇಂಧನ, ಗ್ರೀನ್ ಹೈಡ್ರೋಜೆನ್, ಹಾಗೂ ಇತರೆ ಪೂರಕ ಯೋಜನೆಗಳು ಒಳಗೊಂಡಂತೆ ರೂ.11,000 ಕೋಟಿ ಮೊತ್ತದ ಯೋಜನೆಗಳಲ್ಲಿ ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಇನ್ವೆಸ್ಟ್ ಕರ್ನಾಟಕ 2025 ರೋಡ್’ಮ್ಯಾಪ್’ನ ಭಾಗವಾಗಿರುವ ಈ ಪ್ರಮುಖ ಹೂಡಿಕೆಯು ರಾಜ್ಯದಲ್ಲಿ 3,000 ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್ ಭಾನುವಾರ ತಿಳಿಸಿದ್ದಾರೆ.

ಹೀರೋ ಗ್ರೂಪ್‌ನ ಭಾಗವಾಗಿರುವ HFEPL ಕಂಪನಿಯನ್ನು ರಾಹುಲ್ ಮುಂಜಾಲ್ 2 012 ರಲ್ಲಿ ಸ್ಥಾಪಿಸಿದ್ದಾರೆ. ಇದರೊಂದಿಗಿನ ಒಪ್ಪಂದದಿಂದ ಉದ್ಯೋಗ ಸೃಷ್ಟಿ ಜೊತೆಗೆ ಡೀಕಾರ್ಬನೈಸೇಷನ್ ಉತ್ತೇಜಿಸಿ, ಕರ್ನಾಟಕವನ್ನು ಸ್ವಚ್ಛ ಇಂಧನ ಕ್ಷೇತ್ರದಲ್ಲಿ ನಂ. 1 ಸ್ಥಾನದಲ್ಲಿ ನಿಲ್ಲಿಸಲಿದೆ ಎಂದು ಅವರು ತಿಳಿಸಿದ್ದಾರೆ.

MB Patil and others
ಉಪನಗರ ರೈಲು ಯೋಜನೆಯ ಮೊದಲ ಮಾರ್ಗ 2025ರ ಡಿಸೆಂಬರ್‌ಗೆ ಪೂರ್ಣ: ಎಂಬಿ ಪಾಟೀಲ್

ರಾಜ್ಯದ ನಿಯಮಗಳಡಿ ಸರಿಯಾದ ಸಮಯಕ್ಕೆ ಯೋಜನೆಗಳ ಅನುಷ್ಠಾನ ಖಾತ್ರಿಗೆ ರಾಜ್ಯ ಸರ್ಕಾರ ಅಗತ್ಯ ಅನುಮತಿ, ಅನುಮೋದನೆಗಳು ಮತ್ತು ಬೆಂಬಲವನ್ನು ಒದಗಿಸುತ್ತದೆ. ಈ ಸಹಯೋಗವು ಆದ್ಯತೆಯ ಹೂಡಿಕೆಯ ತಾಣವಾಗಿ ಕರ್ನಾಟಕದ ಸ್ಥಾನವನ್ನು ಬಲಪಡಿಸುತ್ತದೆ ಮತ್ತು ಹಸಿರು ಇಂಧನ ಪರಿಹಾರಗಳು ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿಯಲ್ಲಿ ರಾಜ್ಯ ಮುಂಚೂಣಿಯಲ್ಲಿ ನಿಲ್ಲಲು ನೆರವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com