ನಾಗಸಂದ್ರದಿಂದ ಮಾದಾವರವರೆಗಿನ ಹಸಿರು ಮಾರ್ಗ ವಿಸ್ತರಣೆ: ಪ್ರಯಾಣಿಕರ ನಿರುತ್ಸಾಹ

ಸರಾಸರಿ ದೈನಂದಿನ ಪ್ರಯಾಣಿಕರ ಸಂಚಾರದ ಅಂಕಿಅಂಶಗಳ ಪ್ರಕಾರ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಅಂದಾಜು ಮಾಡಿದ ನಾಲ್ಕನೇ ಒಂದು ಭಾಗ ಮಾತ್ರ ಬರುತ್ತಿದ್ದಾರೆ.
Madavara  Metro station
ಮಾದಾವರ ಮೆಟ್ರೋ ನಿಲ್ದಾಣ
Updated on

ಬೆಂಗಳೂರು: ಸಾರ್ವಜನಿಕರ ಒತ್ತಡಕ್ಕೆ ಮಣಿದು ನಾಗಸಂದ್ರದಿಂದ ಮಾದಾವರವರೆಗಿನ ಹಸಿರು ಮಾರ್ಗ ವಿಸ್ತರಣೆಯನ್ನು ನವೆಂಬರ್ 7 ರಂದು ಔಪಚಾರಿಕ ಉದ್ಘಾಟನೆ ಇಲ್ಲದೆ ಆರಂಭವಾಯಿತು. ಆದಾಗ್ಯೂ, ಮೂರು ವಾರಗಳಿಂದ ಈ ಮಾರ್ಗವನ್ನು ಬಳಸಲು ಪ್ರಯಾಣಿಕರು ಹೆಚ್ಚು ಉತ್ಸಾಹ ತೋರುತ್ತಿಲ್ಲ.

ಸರಾಸರಿ ದೈನಂದಿನ ಪ್ರಯಾಣಿಕರ ಸಂಚಾರದ ಅಂಕಿಅಂಶಗಳ ಪ್ರಕಾರ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಅಂದಾಜು ಮಾಡಿದ ನಾಲ್ಕನೇ ಒಂದು ಭಾಗ ಮಾತ್ರ ಬರುತ್ತಿದ್ದಾರೆ.

ಮಂಜುನಾಥ ನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ (BIEC) ಮೂರು ನಿಲ್ದಾಣಗಳು ಈ 3.14-ಕಿಮೀ ಮಾರ್ಗವನ್ನು ಹೊಂದಿದೆ, ಮಾದಾವರ ನಿಲ್ದಾಣ ಈಗ ಗ್ರೀನ್ ಲೈನ್‌ನ ಉತ್ತರ ಭಾಗದಲ್ಲಿ ಹೊಸ ಟರ್ಮಿನಲ್ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಲ್ದಾಣಗಳಲ್ಲಿರುವ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಮತ್ತು ನೆಲಮಂಗಲ, ಮಾದನಾಯಕನಹಳ್ಳಿ, ಅಂಚೆಪಾಳ್ಯ ಮತ್ತು ಮಾಕಳಿ ಮುಂತಾದ ಸಮೀಪದ ಪ್ರದೇಶಗಳನ್ನು ತಲುಪಲು ಮೆಟ್ರೋ ಬಳಸುವ ನಿರೀಕ್ಷೆಯಿದೆ.

BMRCL ಪ್ರತಿದಿನ 44,000 ಪ್ರಯಾಣಿಕರನ್ನು ನಿರೀಕ್ಷಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಸದ್ಯ BMRCL ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ ನವೆಂಬರ್ 7 ರಿಂದ 30 ರವರೆಗೆ ಈ ಮೂರು ನಿಲ್ದಾಣಗಳಲ್ಲಿ ಸಂಚರಿಸುವ ಪ್ರಯಾಣಿಕರ ಸರಾಸರಿ ದೈನಂದಿನ ಸಂಖ್ಯೆ 11,303 ರಷ್ಟು ಪ್ರಯಾಣಿಕರು ಸಂಚರಿಸಿದ್ದಾರೆ.

ನಿರೀಕ್ಷೆಯಂತೆ, BIEC ಮುಂಭಾಗದಲ್ಲಿರುವ ಮಾದಾವರಕ್ಕೆ 6,642 ಪ್ರಯಾಣಿಕರು ಸಂಚರಿಸಿದ್ದಾರೆ . ಚಿಕ್ಕಬಿದರಕಲ್ಲು 3,649, ಮಂಜುನಾಥ್ ನಗರಕ್ಕೆ 1,011 ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಅಂಕಿಅಂಶಗಳು ತಿಳಿಸುತ್ತವೆ.

ಬೆಂಗಳೂರು ಮೆಟ್ರೋದ ಸಂಪೂರ್ಣ ನೆಟ್‌ವರ್ಕ್‌ಗೆ ಅಂದರೆ 76.95 ಕಿಮೀ ಪ್ರಯಾಣದಲ್ಲಿ ಹೆಚ್ಚುವರಿ ಮಾರ್ಗದಿಂದ ಸರಾಸರಿ ಎಂಟು ಲಕ್ಷ ಪ್ರಯಾಣಿಕರು ಸಂಚರಿಸಲು ಸಹಾಯ ಮಾಡಿದೆ ಎಂದು ಹಿರಿಯ ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವೆಂಬರ್ ಕೊನೆಯ ವಾರದ ಬುಧವಾರ ಮತ್ತು ಗುರುವಾರದಂದು ಕ್ರಮವಾಗಿ 8.69 ಲಕ್ಷ ಮತ್ತು 8.7 ಲಕ್ಷ ಮಂದಿ ಪ್ರಯಾಣಿಸಿದ್ದಾರೆ ಎಂದು ಅವರು ಹೇಳಿದರು. BIEC ಮಾದವಾರ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿಸಲು ಹಲವು ಕ್ರಮ ತೆಗೆದುಕೊಂಡಿದೆ. ಮೆಟ್ರೋ ರೈಲುಗಳ ಬಳಕೆಯನ್ನು ಪ್ರಚಾರ ಮಾಡಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದೆ ಎಂದುರ ಹಿರಿಯ ನಿರ್ದೇಶಕ ಮತ್ತು ಬಿಐಇಸಿಯ ಮಾರ್ಕೆಟಿಂಗ್ ಮುಖ್ಯಸ್ಥ ಉಬೈದ್ ಅಹ್ಮದ್ ತಿಳಿಸಿದ್ದಾರೆ.

Madavara  Metro station
ಶೂನ್ಯದಿಂದ 15 ಸಾವಿರ!: ಮಾದಾವರ-ನಾಗಸಂದ್ರ ಮೊದಲ ದಿನ ಮೆಟ್ರೊ ಸಂಚಾರಕ್ಕೆ ಪ್ರಯಾಣಿಕರು ಸಂತಸ

ನಮ್ಮ ಮೆಟ್ರೋ BIEC ನಿಂದ ಕಾರ್ಯನಿರ್ವಹಿಸುತ್ತಿದೆ, ಪ್ರಯಾಣಿಕರು ಶೀಘ್ರ ಪ್ರಯಾಣದ ಅನುಭವವನ್ನು ಪಡೆಯಬಹುದು ಎಂದು BIEC ವೆಬ್‌ಸೈಟ್ ತೆರೆದ ಕೂಡಲೇ ಕಾಣಿಸುತ್ತದೆ.

ನವೆಂಬರ್ 14 ರಿಂದ 16 ರವರೆಗೆ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ ಕಾರ್ಯಕ್ರಮ ನಡೆಸಲಾಯಿತು . 2024 ನವೆಂಬರ್ 21 ರಿಂದ 22 ರವರೆಗೆ ಗ್ರೇಸ್ ಹಾಪರ್ ಆಚರಣೆ ನಡೆಸಲಾಯಿತು. ಡಿಸೆಂಬರ್‌ನಲ್ಲಿ ಮೂರು ಈವೆಂಟ್‌ಗಳನ್ನು ನಿಗದಿಪಡಿಸಲಾಗಿದೆ ಹೀಗಾಗಿ ಹೆಚ್ಚಿನ ಜನರು BIEC ತಲುಪಲು ಇದನ್ನು ಬಳಸುವ ನಿರೀಕ್ಷೆಯಿದೆ. ಆರಂಭದಲ್ಲಿ ಮಾತ್ರ ಹೀಗೆ ಕಡಿಮೆ ಪ್ರಯಾಣಿಕರನ್ನು ಹೊಂದಿರುತ್ತದೆ, ಕ್ರಮೇಣ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತದೆ ಎಂದು ಮತ್ತೊಬ್ಬ ಅಧಿಕಾರಿ ಭರವಸೆ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com