ಕರ್ನಾಟಕದ ಶೇ.10.68 ರಷ್ಟು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಇಂಟರ್ನೆಟ್ ಸಂಪರ್ಕ!

ಕರ್ನಾಟಕದಲ್ಲಿ 49,679 ಸರ್ಕಾರಿ ಶಾಲೆಗಳಿವೆ. ಈ ಪೈಕಿ 5,308 ಶಾಲೆಗಳಲ್ಲಿ ಮಾತ್ರ ಇಂಟರ್ನೆಟ್ ಸೌಲಭ್ಯವಿದೆ. ರಾಜ್ಯದ 19,650 ಖಾಸಗಿ ಶಾಲೆಗಳ ಪೈಕಿ 14,145 ಶಾಲೆಗಳು ಅಂತರ್ಜಾಲದ ಸೌಲಭ್ಯ ಹೊಂದಿವೆ.
Casual Images
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದ ಕೇವಲ ಶೇ.10. 68 ರಷ್ಟು ಸರ್ಕಾರಿ ಶಾಲೆಗಳು ಹಾಗೂ ಶೇ. 71.98ರಷ್ಟು ಖಾಸಗಿ ಶಾಲೆಗಳು ಇಂಟರ್ನೆಟ್ ಸಂಪರ್ಕವನ್ನು ಹೊಂದಿವೆ. ಕೇರಳದಲ್ಲಿ ಶೇ.94.57ರಷ್ಟು ಸರ್ಕಾರಿ ಶಾಲೆಗಳಲ್ಲಿ ಈ ಸೌಲಭ್ಯವಿದೆ. ಗುಜರಾತ್‌ನಲ್ಲಿ ಇಂಟರ್ನೆಟ್ ಸಂಪರ್ಕ ಹೊಂದಿರುವ ಸರ್ಕಾರಿ ಶಾಲೆಗಳ ಪ್ರಮಾಣ ಶೇ. 94.18 ಆಗಿದೆ. ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಮೂಲಸೌಕರ್ಯ' ಕುರಿತು ಸಂಸದರಾದ ಫುಲೋ ದೇವಿ ನೇತಮ್ ಮತ್ತು ರಂಜೀತ್ ರಂಜನ್ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸರ್ಕಾರದಿಂದ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಕರ್ನಾಟಕದಲ್ಲಿ 49,679 ಸರ್ಕಾರಿ ಶಾಲೆಗಳಿವೆ. ಈ ಪೈಕಿ 5,308 ಶಾಲೆಗಳಲ್ಲಿ ಮಾತ್ರ ಇಂಟರ್ನೆಟ್ ಸೌಲಭ್ಯವಿದೆ. ರಾಜ್ಯದ 19,650 ಖಾಸಗಿ ಶಾಲೆಗಳ ಪೈಕಿ 14,145 ಶಾಲೆಗಳು ಅಂತರ್ಜಾಲದ ಸೌಲಭ್ಯ ಹೊಂದಿವೆ. ನವದೆಹಲಿ (2,762 ಸರ್ಕಾರಿ ಶಾಲೆಗಳು), ಚಂಡೀಗಢ (123) ಮತ್ತು ಪುದುಚೇರಿ (422) ಸರ್ಕಾರಿ ಶಾಲೆಗಳಲ್ಲಿ ಶೇ. 100 ರಷ್ಟು ಇಂಟರ್ ನೆಟ್ ಸೌಲಭ್ಯವಿದೆ.

ಕೇರಳ (5,010) ಮತ್ತು ಗುಜರಾತ್ (34,699) ಸರ್ಕಾರಿ ಶಾಲೆಗಳಲ್ಲಿ ಕ್ರಮವಾಗಿ ಶೇ. 94. 57 ಮತ್ತು 94. 18 ರಷ್ಟು ಇಂಟರ್ನೆಟ್ ಸೌಲಭ್ಯವಿದೆ. ಇನ್ನೂ ಬಿಹಾರದಲ್ಲಿ (75, 558) ಅಂದರೆ ಶೇ. 5. 85 ರಷ್ಟು ಶಾಲೆಗಳು ಮಾತ್ರ ಅಂತರ್ಜಾಲದ ಸೌಲಭ್ಯ ಹೊಂದಿವೆ.

ಈ ಕುರಿತು ಮಾತನಾಡಿದ ಮಾತನಾಡಿದ ಶಿಕ್ಷಣ ತಜ್ಞ ವಿಪಿ ನಿರಂಜನಾರಾಧ್ಯ, ಸರ್ಕಾರಿ ಶಾಲೆಗಳಲ್ಲಿ ಅಂತರ್ಜಾಲ ಸಂಪರ್ಕ ಇಲ್ಲದಿರುವುದು ವಿಷಾದಕರ. ಡಿಜಿಟಲ್ ತಂತ್ರಜ್ಞಾನಗಳು ಭೌತಿಕ ತರಗತಿಯ ಪ್ರಕ್ರಿಯೆಗಳಿಗೆ ಪೂರಕವಾಗಿದ್ದರೂ, ಅಲ್ಲಿ ಸಮರ್ಥ ಮತ್ತು ಅರ್ಹ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ, ಸೂಕ್ತವಾದ ಗ್ಯಾಜೆಟ್‌ಗಳೊಂದಿಗೆ ಇಂಟರ್ನೆಟ್‌ ಸಂಪರ್ಕ ಇರುವುದು ಮಹತ್ವದ್ದಾಗಿದೆ ಎಂದರು.

ರಾಜ್ಯ ಸರ್ಕಾರ ತನ್ನ ಶಾಲೆಗಳನ್ನು ಸಮಗ್ರ ರೀತಿಯಲ್ಲಿ ಬಲಪಡಿಸುವ ಮಾರ್ಗಸೂಚಿಯನ್ನು ರೂಪಿಸಬೇಕಾಗಿದ್ದು, ನಮಗೆ ಇಂಟರ್ನೆಟ್ ಸಂಪರ್ಕವೂ ಬೇಕಾಗಿದೆ. ತರಗತಿ ಕೊಠಡಿಗಳು, ಶಿಕ್ಷಕರು, ಶೌಚಾಲಯಗಳು, ಕುಡಿಯುವ ನೀರು, ಮುಂತಾದ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಬೇಕು. ಶೇಕಡಾವಾರು ಪ್ರಮಾಣದಲ್ಲಿ ಹೆಚ್ಚಿರುವ ಕೇರಳ ಅದನ್ನು ಸಾಧಿಸಬಹುದಾದರೆ ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಆಗಿರುವ ಕರ್ನಾಟಕವನ್ನು ಏಕೆ ಮಾಡಬಾರದು? ಅವರು ಹೇಳಿದರು.

Casual Images
ತುಮಕೂರು: ಸೈಬರ್ ಸುರಕ್ಷತೆ ಅಭಿಯಾನದಲ್ಲಿ 44 ಸರ್ಕಾರಿ ಶಾಲೆಗಳು ಭಾಗಿ!

ಈ ಮಧ್ಯೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆಡಳಿತಾರೂಢ ಕಾಂಗ್ರೆಸ್‌ನ ಸರ್ಕಾರಿ ಶಾಲೆಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ವಾಗ್ದಾಳಿ ನಡೆಸಿದರು. ಭಾರತದ ಐಟಿ ರಾಜಧಾನಿಯಲ್ಲಿ ಸರ್ಕಾರದಲ್ಲಿ ಹಣ ಮತ್ತು ದೂರದೃಷ್ಟಿಯ ಕೊರತೆಯಿಂದಾಗಿ ನಮ್ಮ ಮಕ್ಕಳಿಗೆ ಇಂಟರ್ನೆಟ್ ಸಂಪರ್ಕ ಸಿಗದಂತಾಗಿದೆ. ಕರ್ನಾಟಕದಲ್ಲಿ ಶೇ. 71. 98 ರಷ್ಟು ಖಾಸಗಿ ಶಾಲೆಗಳು ಇಂಟರ್ನೆಟ್ ಸಂಪರ್ಕವನ್ನು ಆನಂದಿಸುತ್ತಿದ್ದರೆ, ಸರ್ಕಾರ ನಡೆಸುವ ಶಾಲೆಗಳಿಗೆ ಕನಿಷ್ಠ ಡಿಜಿಟಲ್ ಸೌಲಭ್ಯ ಇಲ್ಲವಾಗಿದೆ. ಈ ಅಸಮಾನತೆಯು ಸಮಾನ ಶಿಕ್ಷಣವನ್ನು ದುರ್ಬಲಗೊಳಿಸುತ್ತದೆ. ನಮ್ಮ ಮಕ್ಕಳ ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತದೆ. ಈ ಡಿಜಿಟಲ್ ಅಂತರವನ್ನು ನಿವಾರಿಸಲು ಮತ್ತು ರಾಜ್ಯಾದ್ಯಂತ ಶಾಲೆಗಳಿಗೆ ಇಂಟರ್ನೆಟ್ ಸಂಪರ್ಕ ಖಚಿತಪಡಿಸಿಕೊಳ್ಳಲು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com