ಆದಾಯದ ಹೊಸ ಮಾರ್ಗಗಳು: ಖನಿಜಗಳ ಮೇಲೆ ತೆರಿಗೆ, ದಂಡ ಜಾರಿಗೆ ಸರ್ಕಾರ ಕ್ರಮ

ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಸಂಪತ್ತು ಹೊಂದಿರುವ ಭೂಮಿ) ತೆರಿಗೆ ಮಸೂದೆ, 2024 ನ್ನು ಬೆಳಗಾವಿಯಲ್ಲಿ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಮುಂದಿಡಲು ಸಚಿವ ಸಂಪುಟ ನಿರ್ಧರಿಸಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸರ್ಕಾರದ ಐದು ಖಾತ್ರಿ ಯೋಜನೆಗಳಿಗೆ ಬಜೆಟ್‌ನಲ್ಲಿ 56,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಣ ಸಾಕಾಗುತ್ತಿಲ್ಲ ಎಂಬ ಆರೋಪಗಳ ಮಧ್ಯೆ ಖನಿಜ ಹೊಂದಿರುವ ಜಮೀನುಗಳಿಗೆ ರಾಯಧನದ ಜೊತೆಗೆ ಹೊಸ ತೆರಿಗೆಯನ್ನು ಜಾರಿಗೆ ತರುವ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ.

ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜ ಸಂಪತ್ತು ಹೊಂದಿರುವ ಭೂಮಿ) ತೆರಿಗೆ ಮಸೂದೆ, 2024 ನ್ನು ಬೆಳಗಾವಿಯಲ್ಲಿ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಮುಂದಿಡಲು ಸಚಿವ ಸಂಪುಟ ನಿರ್ಧರಿಸಿದೆ. ಇದು ಕಾನೂನು ಆಗಿ ಜಾರಿಗೆ ಬಂದರೆ ಗಣಿಗಾರಿಕೆ ಗುತ್ತಿಗೆ ಹೊಂದಿರುವವರು ಭೂಮಿಯಿಂದ ತೆಗೆಯುವ ಖನಿಜದ ಪ್ರಮಾಣವನ್ನು ಆಧರಿಸಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಪ್ರತಿ ಟನ್‌ಗೆ 20 ರೂಪಾಯಿಗಳಿಂದ (ಸುಣ್ಣಕ್ಕೆ) ಕಬ್ಬಿಣದ ಅದಿರಿಗೆ 100 ರೂಪಾಯಿವರೆಗೆ ಇರುತ್ತದೆ, ಇದರಲ್ಲಿ ಮಾಪನಾಂಕ ನಿರ್ಣಯಿಸಿದ ಉಂಡೆ ಅದಿರು (CLO), ಉಂಡೆ ಅದಿರು ಮತ್ತು ಎಲ್ಲಾ ದರ್ಜೆಗಳ ಖನಿಜಗಳು ಸೇರಿವೆ. ವಾರ್ಷಿಕವಾಗಿ ಇದರಿಂದ 4,700 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಸರ್ಕಾರಕ್ಕೆ ತರಬಹುದು ಎಂದು ಹೇಳಲಾಗುತ್ತಿದೆ.

ಜುಲೈ 25, 2024 ರಂದು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಅನುಗುಣವಾಗಿ ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವು ರಾಜ್ಯಗಳಿಗೆ ಇರುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದರು.

ಖನಿಜಗಳು ಮತ್ತು ಖನಿಜ ಹೊಂದಿರುವ ಭೂಮಿಗೆ ಕೇಂದ್ರ ಸರ್ಕಾರ ರಾಯಧನವನ್ನು ವಿಧಿಸುತ್ತದೆ. 1957 ರ ಸಂಸತ್ತಿನ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ ಈ ಅಧಿಕಾರವನ್ನು ಮಿತಿಗೊಳಿಸುವುದಿಲ್ಲ ಎಂಬ 1989 ರ ತೀರ್ಪನ್ನು ಸುಪ್ರೀಂ ಕೋರ್ಟ್ ತೀರ್ಪು ತಳ್ಳಿಹಾಕಿದೆ. ಕರ್ನಾಟಕ ಮೈನರ್ ಮಿನರಲ್ ರಿಯಾಯ್ತಿ (ತಿದ್ದುಪಡಿ) ನಿಯಮಗಳು, 2024 ರಲ್ಲಿ ರಾಯಧನವನ್ನು ಪ್ರತಿ ಟನ್‌ಗೆ 70 ರಿಂದ 80 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ, ರಾಜ್ಯಸರ್ಕಾರದ ಬೊಕ್ಕಸಕ್ಕೆ 301 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರುತ್ತದೆ.

ಅತಿಕ್ರಮಣ ಸೇರಿದಂತೆ ನಿಯಮಗಳನ್ನು ಉಲ್ಲಂಘಿಸಿ 1,221 ಕೋಟಿ ರೂಪಾಯಿ ರಾಯಲ್ಟಿ ಬಾಕಿ ಉಳಿಸಿಕೊಂಡಿರುವ 2,438 ಕಲ್ಲು ಕ್ವಾರಿಗಳಿಗೆ ಐದು ಬಾರಿ ದಂಡ ವಿಧಿಸಿ ಆರು ವರ್ಷಗಳವರೆಗೆ 6,105 ಕೋಟಿ ರೂಪಾಯಿ ದಂಡವನ್ನು ವಿಧಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

11 ಜಿಲ್ಲೆಗಳಲ್ಲಿ ಡಿಫರೆನ್ಷಿಯಲ್ ಜಿಪಿಎಸ್ ಡ್ರೋನ್ ಸಮೀಕ್ಷೆಯು ಗಣಿಗಾರರು ನಿಯಮಗಳನ್ನು ಉಲ್ಲಂಘಿಸಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ ಮತ್ತು ಇನ್ನೂ 20 ಜಿಲ್ಲೆಗಳಲ್ಲಿ ಸಮೀಕ್ಷೆಯು ಉಳಿದಿರುವುದರಿಂದ ದಂಡದ ಸಂಗ್ರಹವು ಹೆಚ್ಚಾಗಬಹುದು ಎಂದು ಸಚಿವ ಪಾಟೀಲ್ ಹೇಳಿದರು.

ಹೆಚ್ಚುವರಿ ಆದಾಯ ಗ್ಯಾರಂಟಿ ಯೋಜನೆಗಳಿಗೆ ಹೊಂದಿಸಲು ಅಲ್ಲ. ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸಲು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Representational image
ಸೋರಿಕೆ ಪತ್ತೆ ಹಚ್ಚಿ, 2024-25 ಅಂತ್ಯದೊಳಗೆ ತೆರಿಗೆ ಸಂಗ್ರಹ ಗುರಿ ತಲುಪಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಜನನ, ಮರಣ ಪ್ರಮಾಣ ಪತ್ರ ಪಡೆಯುವುದು ಈಗ ಸುಲಭ: ಕರ್ನಾಟಕ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ನಿಯಮಗಳು, 2024ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಜನರು, ವಿಶೇಷವಾಗಿ ರೈತರು, ಕುಟುಂಬದ ಸದಸ್ಯರ ಜನನ ಅಥವಾ ಮರಣದ ಒಂದು ವರ್ಷದೊಳಗೆ ಪ್ರಮಾಣಪತ್ರಗಳನ್ನು ಪಡೆಯಲು ವಿಫಲವಾದರೂ ಸಹ, ತೀರ್ಪುಗಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com