ಟೆಕ್ಕಿ ಆತ್ಮಹತ್ಯೆ: ಪತ್ನಿ, ಆಕೆಯ ಕುಟುಂಬದ ವಿರುದ್ಧ ಕೇಸ್!

ಟೆಕ್ಕಿಯ ಪತ್ನಿ ಸೇರಿ ಇತರ ನಾಲ್ವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಶರಣಾದ ಟೆಕ್ಕಿ ಅತುಲ್ ಸುಭಾಷ್ (34) 24 ಪೇಜ್ ಗಳ ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದಾರೆ.
Atul Subhash family members
ಅತುಲ್ ಸುಭಾಷ್ ಕುಟುಂಬ ಸದಸ್ಯರುonline desk
Updated on

ಬೆಂಗಳೂರು: ನಗರದ ಮಾರತಹಳ್ಳಿಯಲ್ಲಿ ಟೆಕ್ಕಿ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಟೆಕ್ಕಿಯ ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಟೆಕ್ಕಿಯ ಪತ್ನಿ ಸೇರಿ ಇತರ ನಾಲ್ವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಶರಣಾದ ಟೆಕ್ಕಿ ಅತುಲ್ ಸುಭಾಷ್ (34) 24 ಪೇಜ್ ಗಳ ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದಾರೆ.

ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ (34) ಭಾನುವಾರ ಮಧ್ಯರಾತ್ರಿ ತನ್ನ ಪತ್ನಿ ಮತ್ತು ಆಕೆಯ ಕುಟುಂಬದವರ ಕಿರುಕುಳದಿಂದ ತನ್ನ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ.

ಸುಭಾಷ್ ಅವರ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆತನ ಪತ್ನಿ ನಿಕಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ, ಸೋದರ ಮಾವ ಅನುರಾಗ್ ಸಿಂಘಾನಿಯಾ, ಚಿಕ್ಕಪ್ಪ ಸುಶೀಲ್ ಸಿಂಘಾನಿಯಾ ಮತ್ತು ನಿಕಿತಾ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅತುಲ್ ಸುಭಾಷ್ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಮುಕ್ತಾಯಗೊಳಿಸಲು ನಾಲ್ವರು 3 ಕೋಟಿ ರೂ.ಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಪೊಲೀಸರು ಡೆತ್ ನೋಟ್ ಮತ್ತು ಇತರ ದಾಖಲೆಗಳನ್ನು ತನಿಖೆಗಾಗಿ ಸಂಗ್ರಹಿಸಿದ್ದಾರೆ. ಪರಿಶೀಲನೆ ಬಳಿಕ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗಳು ಮತ್ತು ಪತ್ನಿ ಮತ್ತು ಆಕೆಯ ಕುಟುಂಬದವರ ಕಿರುಕುಳದಿಂದ ಖಿನ್ನತೆಗೆ ಒಳಗಾಗಿದ್ದ ಸುಭಾಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಅತುಲ್ ತನ್ನ ಜೀವನವನ್ನು ಕೊನೆಗೊಳಿಸುವ ನಿರ್ಧಾರದ ಬಗ್ಗೆ ಎನ್‌ಜಿಒಗೆ ಸಂದೇಶವನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಸೋಮವಾರ ಬೆಳಗ್ಗೆ, 6 ಗಂಟೆ ಸುಮಾರಿಗೆ ಎನ್‌ಜಿಒ ಸದಸ್ಯರಿಂದ ಅತುಲ್ ಬಗ್ಗೆ ಪೊಲೀಸರಿಗೆ ಎಚ್ಚರಿಕೆ ಬಂದಿತ್ತು. ಬಳಿಕ ಒಳಗಿನಿಂದ ಲಾಕ್ ಆಗಿದ್ದ ಮುಂಬಾಗಿಲನ್ನು ಒಡೆದರು.

Atul Subhash family members
ಬೆಂಗಳೂರು: 40 ಪುಟಗಳ ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ! ದಾಂಪತ್ಯ ಕಲಹದ ಶಂಕೆ

ಮಾರತಹಳ್ಳಿಯ ಮಂಜುನಾಥ ಲೇಔಟ್ ನಲ್ಲಿರುವ ಅಪಾರ್ಟ್ ಮೆಂಟ್ ಸಮುಚ್ಚಯದ ಮೂರನೇ ಮಹಡಿಯಲ್ಲಿನ ಫ್ಲಾಟ್ ನಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಪೊಲೀಸರಿಗೆ 24 ಪುಟಗಳ ಡೆತ್ ನೋಟ್, ಜೀವನ ಅಂತ್ಯಗೊಳ್ಳುವ ಮುನ್ನ ಸುಭಾಷ್ ರೆಕಾರ್ಡ್ ಮಾಡಿದ ವಿಡಿಯೋ, ಮಾಡಬೇಕಾದ ಕೆಲಸಗಳ ಪಟ್ಟಿ ಮತ್ತು ಆತನ ಟೀ ಶರ್ಟ್ ಮತ್ತು ಕಬೋರ್ಡ್‌ನಲ್ಲಿ ಅಂಟಿಸಲಾಗಿದ್ದ ‘ಜಸ್ಟಿಸ್ ಈಸ್ ಡ್ಯೂ’ ಎಂಬ ಸಂದೇಶವಿರುವ ಪೇಪರ್‌ಗಳು ಪತ್ತೆಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com