ಸಂಚಾರಿ ನಿಯಮ ಉಲ್ಲಂಘನೆ: ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇ ನಲ್ಲಿ 13.41 ಲಕ್ಷ ಕೇಸ್ ದಾಖಲು

ಪೊಲೀಸ್ ಇಲಾಖೆಯ ನಿರ್ದೇಶನದ ಮೇರೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಎಕ್ಸ್ ಪ್ರೆಸ್ ವೇನ ಆಯ್ದು12 ಕಡೆಗಳಲ್ಲಿ ಅಂದರೆ ಮಂಡ್ಯ ಜಿಲ್ಲೆಯಲ್ಲಿ 5, ರಾಮನಗರ ಜಿಲ್ಲೆಯ 5 ಮತ್ತು ಮೈಸೂರು ಜಿಲ್ಲೆಯ 2 ಕಡೆಗಳಲ್ಲಿ AI ಚಾಲಿತ ಕ್ಯಾಮರಾಗಳನ್ನು ಅಳವಡಿಸಿದೆ.
Mysuru-Bengaluru Expressway
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ
Updated on

ಮೈಸೂರು: ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇನಲ್ಲಿ (ITMS) A1 ಚಾಲಿತ ಕ್ಯಾಮರಾ ಅಳವಡಿಸಿದ್ದರೂ ಚಾಲಕರಿಂದ ಸಂಚಾರ ನಿಯಮ ಉಲ್ಲಂಘನೆ ಮುಂದುವರೆದಿದೆ. ಕಳೆದ ಮೂರು ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಗಾಗಿ ಒಟ್ಟು 13, 41, 940 ಪ್ರಕರಣಗಳು ದಾಖಲಾಗಿದ್ದು, 85. 8 ಕೋಟಿ ದಂಡವನ್ನು ಉಲ್ಲಂಘನೆದಾರರಿಂದ ಇನ್ನೂ ಸಂಗ್ರಹಿಸಬೇಕಾಗಿದೆ.

ಮಾರ್ಚ್ 2023ರಲ್ಲಿ ಉದ್ಘಾಟನೆಯಾದ ಹೆದ್ದಾರಿಯಲ್ಲಿ ಹೆಚ್ಚಾಗುತ್ತಿರುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ನಿರ್ದೇಶನದ ಮೇರೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಎಕ್ಸ್ ಪ್ರೆಸ್ ವೇನ ಆಯ್ದು12 ಕಡೆಗಳಲ್ಲಿ ಅಂದರೆ ಮಂಡ್ಯ ಜಿಲ್ಲೆಯಲ್ಲಿ 5, ರಾಮನಗರ ಜಿಲ್ಲೆಯ 5 ಮತ್ತು ಮೈಸೂರು ಜಿಲ್ಲೆಯ 2 ಕಡೆಗಳಲ್ಲಿ AI ಚಾಲಿತ ಕ್ಯಾಮರಾಗಳನ್ನು ಅಳವಡಿಸಿದೆ.

ಈ ಕ್ಯಾಮರಾಗಳು ನಿಯಮ ಉಲ್ಲಂಘಿಸಿದ ಚಾಲಕರ ವಿರುದ್ಧ ಕೇಸ್ ದಾಖಲಿಸಿಕೊಂಡು, ದಂಡಕ್ಕೆ ಸಂಬಂಧಿಸಿದಂತೆ ಎಸ್ಎಂಎಸ್ ಮೂಲಕ ಮಾಹಿತಿ ಕಳುಹಿಸುತ್ತವೆ.

ದಾಖಲೆಗಳ ಪ್ರಕಾರ ಒಟ್ಟು 13, 41,940 ಕೇಸ್ ಗಳ ಪೈಕಿ ರೂ. 90. 71 ಕೋಟಿ ದಂಡ ವಿಧಿಸಲಾಗಿದೆ. ಆದರೆ ಇನ್ನೂ 12, 67,338 ಪ್ರಕರಣಗಳಿಂದ ರೂ. 85. 80 ಕೋಟಿ ಹಣವನ್ನು ಸಂಗ್ರಹಿಸಬೇಕಾಗಿದೆ. ಒಟ್ಟು ದಾಖಲಾದ ಪ್ರಕರಣಗಳು 4,74,550 (2022) 4,55,458 (2023) 4,11,932 (2024) ಸೀಟ್ ಬೆಲ್ಟ್ ಹಾಕದ ಪ್ರಕರಣಗಳು 2,95,413 (2022) 2,12,461 (2023) 1,93,437 (2024) ಅತಿ ವೇಗದ ಚಾಲನೆ 49,584 (2022) 1,96,237 (2023)29,006( 2024) ಲೇನ್ ಶಿಸ್ತು ಉಲ್ಲಂಘನೆ 49,652 (2022) 36,016 (2023) 42,670(2024) ಚಾಲನೆ ವೇಳೆ ಮೊಬೈಲ್ ಬಳಕೆ 8,598 (2022) 6,777 (2023) 8,430 (2024)

Mysuru-Bengaluru Expressway
ಶ್ರೀರಂಗಪಟ್ಟಣ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಇಬ್ಬರು ದಂಪತಿಯ ದರೋಡೆ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಹೊರತಾಗಿ, ಎಕ್ಸ್‌ಪ್ರೆಸ್‌ವೇ ಹಲವಾರು ಸುಲಿಗೆ ಮತ್ತು ದರೋಡೆ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ ಪ್ರಯಾಣಿಕರು ತಮ್ಮ ವಾಹನಗಳನ್ನು ನಿಲ್ಲಿಸಿ ಮೂತ್ರ ವಿರ್ಸಜನೆ ಮತ್ತಿತರ ಕಡೆ ಹೋದಾಗ ದರೋಡೆಗಳು ಹೆಚ್ಚಾಗುತ್ತಿವೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿ-275 ಮತ್ತು ಬೆಂಗಳೂರು-ಮೈಸೂರು ನಡುವಿನ ಸರ್ವಿಸ್ ರಸ್ತೆಗಳಲ್ಲಿ ಪ್ರಯಾಣಿಕರನ್ನು ನಿಲ್ಲಿಸಿ ಒಟ್ಟು 26 ಸುಲಿಗೆ ಮತ್ತು ದರೋಡೆ ಪ್ರಕರಣಗಳು ನಡೆದಿದ್ದು, ಅದರಲ್ಲಿ 20 ಪ್ರಕರಣಗಳನ್ನು ಪರಿಹರಿಸಲಾಗಿದೆ.

26 ಪ್ರಕರಣಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ 14 ಮಂಡ್ಯ ಮತ್ತು ರಾಮನಗರ ಜಿಲ್ಲೆಯಲ್ಲಿ 12 ಸುಲಿಗೆ ಪ್ರಕರಣ ವರದಿಯಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ 9 ಮತ್ತು ರಾಮನಗರ ಜಿಲ್ಲೆಯಲ್ಲಿನ 11 ಪ್ರಕರಣಗಳನ್ನು ಪೊಲೀಸರು ಬಗೆಹರಿಸಿದ್ದಾರೆ.

ಸೀಟ್ ಬೆಲ್ಟ್ ಧರಿಸಿದ್ದರೂ, ವಾಹನ ಚಲಾಯಿಸುವಾಗ ಮೊಬೈಲ್ ಬಳಸದಿದ್ದರೂ ದಂಡ ವಿಧಿಸುತ್ತಿರುವ ಬಗ್ಗೆ ಚಾಲಕರಿಂದ ದೂರುಗಳಿವೆ. ಅಂತಹ ದೂರುಗಳನ್ನು ಸ್ವೀಕರಿಸಿದಾಗ ಕ್ಯಾಮೆರಾಗಳಿಂದ ಸೆರೆಹಿಡಿಯಲಾದ ಫೋಟೋಗಳನ್ನು ಪರಿಶೀಲಿಸುತ್ತೇವೆ ನಂತರ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com