ಕೊನೆಗೂ ನಿಜಲಿಂಗಪ್ಪ ಬಂಗ್ಲೆ ಖರೀದಿಸಿದ ಸರ್ಕಾರ: ಮಾರುಕಟ್ಟೆ ಬೆಲೆಗಿಂತ ಕಡಿಮೆ ದರ ನೀಡಲು ಕಾರಣವೇನು?

ಮಾರುಕಟ್ಟೆ ಮೌಲ್ಯಕ್ಕಿಂತ ಸುಮಾರು 1 ಕೋಟಿ ರೂ.ಗಿಂತ ಕಡಿಮೆ ಬೆಲೆಗೆ ಮಾರಾಟವನ್ನು ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್‌.ನಿಜಲಿಂಗಪ್ಪ ಅವರ ನಿವಾಸವನ್ನು ಸರ್ಕಾರದ ಹೆಸರಲ್ಲಿ ಖರೀದಿಸುವ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ.
Nijalingappa bunglow
ನಿಜಲಿಂಗಪ್ಪ ಬಂಗಲೆ
Updated on

ಬೆಂಗಳೂರು: ವಿವಾದದ ಸುಳಿಯಲ್ಲಿ ಸಿಲುಕಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಎಐಸಿಸಿ ಅಧ್ಯಕ್ಷ ಎಸ್ ನಿಜಲಿಂಗಪ್ಪ ಅವರ ಚಿತ್ರದುರ್ಗದ ನಿವಾಸವನ್ನು ಅಂತಿಮವಾಗಿ ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡಲಾಯಿತು, ಇದು ನಾಲ್ಕು ವರ್ಷಗಳ ಕಾಲ ನಡೆದ ಹಗ್ಗ ಜಗ್ಗಾಟ ಕೊನೆಗೊಂಡಿದೆ.

ಮಾರುಕಟ್ಟೆ ಮೌಲ್ಯಕ್ಕಿಂತ ಸುಮಾರು 1 ಕೋಟಿ ರೂ.ಗಿಂತ ಕಡಿಮೆ ಬೆಲೆಗೆ ಮಾರಾಟವನ್ನುಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್‌.ನಿಜಲಿಂಗಪ್ಪ ಅವರ ನಿವಾಸವನ್ನು ಸರ್ಕಾರದ ಹೆಸರಲ್ಲಿ ಖರೀದಿಸುವ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ. ವಿ.ಪಿ. ಬಡಾವಣೆಯಲ್ಲಿರುವ ಮನೆಯನ್ನು ಹಿರಿಯ ಪುತ್ರ ಎಸ್‌.ಎನ್‌. ಕಿರಣ್‌ ಶಂಕರ್‌ ಸರ್ಕಾರದ ಪರವಾಗಿ ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿಸಿದರು. ನಿಜಲಿಂಗಪ್ಪ ಅವರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದಲೇ ಖರೀದಿಸುವ ಪ್ರಯತ್ನಗಳು 18 ವರ್ಷಗಳಿಂದ ಪ್ರಗತಿಯಲ್ಲಿದ್ದವು. ಆದರೆ, ವಿವಿಧ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. 2022ರಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಿವಾಸ ಖರೀದಿಸುವ ಪ್ರಯತ್ನ ಅಂತಿಮ ಹಂತಕ್ಕೆ ಬಂದಿತ್ತು.

ಭಾರತದ ಸ್ವಾತಂತ್ರ್ಯಕ್ಕೆ ಸುಮಾರು ಒಂದು ದಶಕದ ಮೊದಲು ನಿರ್ಮಿಸಲಾದ ಆಸ್ತಿಯನ್ನು ನಿಜಲಿಂಗಪ್ಪ ಅವರ ಮಗ ಕಿರಣ್ ಶಂಕರ್ ಅವರು ತಹಶೀಲ್ದಾರ್ ಮೂಲಕ ರಾಜ್ಯಕ್ಕೆ ವರ್ಗಾಯಿಸಿದರು. ಶಂಕರ್ ಅವರು ಕರ್ನಾಟಕ ಸರ್ಕಾರದ ಮುಖ್ಯ ವಾಸ್ತುಶಿಲ್ಪಿಯಾಗಿ ಸೇವೆ ಸಲ್ಲಿಸಿದ್ದರು.

Nijalingappa bunglow
ಬೆಂಗಳೂರು: ಸರ್ಕಾರದ ನಿರ್ಲಕ್ಷ್ಯ; ಮಾಜಿ ಮುಖ್ಯಮಂತ್ರಿ ಎಸ್​ ನಿಜಲಿಂಗಪ್ಪ ಮನೆ ಮಾರಾಟಕ್ಕೆ!

ಮಹಾತ್ಮಾ ಗಾಂಧಿಯವರು ಭಾಗವಹಿಸಿದ್ದ 1924 ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಗುರುತಿಸುವ ಬೆಳಗಾವಿಯಲ್ಲಿನ ಹೆಗ್ಗುರುತು ಎಐಸಿಸಿ ಕಾಂಗ್ರೆಸ್ ಅಧಿವೇಶನಕ್ಕೆ ಸ್ವಲ್ಪ ಮುಂಚಿತವಾಗಿ ಮಾರಾಟ ಪ್ರಕ್ರಿಯೆ ಪೂರ್ಣಗೊಂಡಿದೆ. ನಾಲ್ಕು ವರ್ಷಗಳ ಹಿಂದೆ ಮಾರಾಟಕ್ಕೆ ಒಪ್ಪಿಗೆ ನೀಡಲಾಗಿತ್ತು, ವಿಳಂಬಕ್ಕೆ ಅಧಿಕಾರಶಾಹಿ ಅಸಮರ್ಥತೆ ಎಂದು ಹಲವರು ಆರೋಪಿಸಿದ್ದರು. ಈಗ ಎದ್ದಿರುವ ಪ್ರಶ್ನೆಯೆಂದರೆ, ಬೆಲೆ ಕಡಿತದ ಹಿಂದಿರುವ ಕಾರಣ ಏನು? ಇದಕ್ಕೆ ಇನ್ನೂ ಉತ್ತರ ದೊರೆತಿಲ್ಲ.

ಇಷ್ಟು ವರ್ಷಗಳ ಅನಾವಶ್ಯಕ ಹಿಡಿತದ ನಂತರ ಕೊನೆಗೂ ಮಾರಾಟಕ್ಕೆ ತೆರೆ ಬಿದ್ದಿದೆ.ಆದರೆ ಈಗ ಸರಕಾರ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿ ಎಸ್ ನಿಜಲಿಂಗಪ್ಪ ಅವರ ಪರಂಪರೆಯನ್ನು ಗೌರವಿಸಬೇಕು ಎಂದು ಮಾಜಿ ಎಂಎಲ್‌ಸಿ ಮೋಹನ್ ಕೊಂಡಜ್ಜಿ ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಚಿತ್ರದುರ್ಗ ಜಿಲ್ಲಾಡಳಿತದ ನಿರಾಸಕ್ತಿಯಿಂದ ಕಡತ ಧೂಳು ಹಿಡಿಯುತ್ತಿದೆ ಎಂದಿದ್ದಾರೆ. ಒಂದು ವರ್ಷದ ಹಿಂದೆ, ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್, ಮಾರಾಟವನ್ನು ಅಂತಿಮಗೊಳಿಸಲು ಯುಎಸ್‌ನಿಂದ ಆಗಮಿಸಿದರು, ಆದರೆ ಅಧಿಕಾರಿಗಳು ಹಲವು ಅಡೆತಡೆ ಮಾಡಿ, ನೋಂದಣಿ ಆಗದಂತೆ ಮಾಡಿದರು. ವರ್ಷಗಳಿಂದ ಅಧಿಕಾರಿಗಳು ಈ ಪ್ರಕ್ರಿಯೆಗೆ ಕಲ್ಲು ಹಾಕಿದ್ದಾರೆ ಎಂದು ಕೊಂಡಜ್ಜಿ ಬಹಿರಂಗಪಡಿಸಿದರು.

ಈ ನಿವಾಸವು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ, ಕರ್ನಾಟಕದ ಅತ್ಯಂತ ಪ್ರಭಾವಶಾಲಿ ರಾಜಕೀಯ ವ್ಯಕ್ತಿಯ ಜೀವನಕ್ಕೆ ಸಾಕ್ಷಿಯಾಗಿದೆ. ನಿಜಲಿಂಗಪ್ಪ ಅವರ ಸ್ಮಾರಕಕ್ಕೆ ನಾಲ್ಕು ವರ್ಷಗಳ ಹಿಂದೆಯೇ ಹಣ ಬಿಡುಗಡೆ ಮಾಡಿದ್ದರೂ ಅದನ್ನು ಮುಂದುವರಿಸುವಲ್ಲಿ ಸರ್ಕಾರ ವಿಫಲವಾಗಿದೆ. ದಿವಂಗತ ನಾಯಕರ 121ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಬಹುಕಾಲದಿಂದ ವಿಳಂಬವಾಗಿರುವ ಸ್ಮಾರಕಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಗಳು ಕೇಳಿಬಂದಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com