Renuka Pojari
ಪ್ರೊ.ರೇಣುಕಾ ಪೂಜಾರಿ

ಬಳ್ಳಾರಿ: ತೃತೀಯ ಲಿಂಗಿ ಮಹಿಳೆಯನ್ನು ಅತಿಥಿ ಉಪನ್ಯಾಸಕರಾಗಿ ನೇಮಿಸಿದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯ!

ವಿಶ್ವವಿದ್ಯಾನಿಲಯದ ಕುಲಸಚಿವ ಎಸ್.ಎನ್.ರುದ್ರೇಶ್ ನೀಡಿದ ಬೆಂಬಲವೇ ತನ್ನ ಸಾಧನೆಗೆ ಕಾರಣ ಎಂದು ಹೇಳಿದರು. ಈ ಹಿಂದೆ ಟಿ. ಮಲ್ಲೇಶ್ ಆಗಿದ್ದ ಪ್ರೊ.ರೇಣುಕಾ ಪೂಜಾರಿ ಬಳ್ಳಾರಿ ಜಿಲ್ಲೆಯ ಕುರುಗೋಡು ನಿವಾಸಿ.
Published on

ಬಳ್ಳಾರಿ: ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯವು ಟ್ರಾನ್ಸ್ ಮಹಿಳೆಯನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಿದೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೇಣುಕಾ ಪೂಜಾರಿ (35) ಮೂರು ದಿನಗಳ ಹಿಂದೆ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಸೇರಿದ್ದಾರೆ.

ವಿಶ್ವವಿದ್ಯಾನಿಲಯದ ಕುಲಸಚಿವ ಎಸ್.ಎನ್.ರುದ್ರೇಶ್ ನೀಡಿದ ಬೆಂಬಲವೇ ತನ್ನ ಸಾಧನೆಗೆ ಕಾರಣ ಎಂದು ಹೇಳಿದರು. ಈ ಹಿಂದೆ ಟಿ. ಮಲ್ಲೇಶ್ ಆಗಿದ್ದ ಪ್ರೊ.ರೇಣುಕಾ ಪೂಜಾರಿ ಬಳ್ಳಾರಿ ಜಿಲ್ಲೆಯ ಕುರುಗೋಡು ನಿವಾಸಿ. ಶಾಲಾ-ಕಾಲೇಜು ದಿನಗಳಲ್ಲಿ ಹಲವು ಸವಾಲುಗಳನ್ನು ಎದುರಿಸಿದರೂ ಅವುಗಳನ್ನು ಮೆಟ್ಟಿ ನಿಂತು ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪಿಜಿ ಕೋರ್ಸ್‌ಗೆ ದಾಖಲಾದರು. ತನ್ನ ಪಿಜಿ ಕೋರ್ಸ್ ಮುಗಿದ ನಂತರ, ಅವರು ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡಲು ಬಯಸಿದ್ದರು, ಆದರೆ ದಾಖಲಾತಿ ಪ್ರಕ್ರಿಯೆ ಮುಗಿದಿದ್ದರಿಂದ ಸಾಧ್ಯವಾಗಲಿಲ್ಲ. ಪಿಜಿ ಕೋರ್ಸ್‌ಗೆ ದಾಖಲಾದಾಗ ರುದ್ರೇಶ್ ಮತ್ತು ವಿಶ್ವವಿದ್ಯಾನಿಲಯದ ಉಪಕುಲಪತಿ ಸೇರಿದಂತೆ ಇತರ ಅಧಿಕಾರಿಗಳು ಬೆಂಬಲ ನೀಡಿದರು. ನಂತರ ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡರು ಎಂದು ಪ್ರೊ.ರೇಣುಕಾ ಪೋಜಾರಿ TNIE ಗೆ ತಿಳಿಸಿದರು. ಟ್ರಾನ್ಸ್‌ಜೆಂಡರ್ ಸಮುದಾಯದವರು ಭಿಕ್ಷಾಟನೆಯು ಜೀವನಕ್ಕಾಗಿ ಇರುವ ಏಕೈಕ ಆಯ್ಕೆ ಎಂದು ನಂಬುತ್ತಾರೆ. ಆದರೆ ಪದವಿ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರು ಉದ್ಯೋಗ ಪಡೆದಿದ್ದಾರೆ. ಕೆಲವರು ಹೈಸ್ಕೂಲ್ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ.

ರಾಜ್ಯದ ವಿಶ್ವವಿದ್ಯಾನಿಲಯವೊಂದರಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡ ಮೊದಲ ಸಮುದಾಯದ ವ್ಯಕ್ತಿ ನಾನು. ನಾನು ಕನ್ನಡದಲ್ಲಿ ಪಿಎಚ್‌ಡಿ ಮಾಡಿದ್ದೇನೆ. ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಳ್ಳಲು NET ಮತ್ತು SET ಪರೀಕ್ಷೆಗಳಿಗೆ ಹಾಜರಾಗುತ್ತೇನೆ. ಭಿಕ್ಷಾಟನೆಯನ್ನು ನಿಲ್ಲಿಸಿ ಮತ್ತು ಶಿಕ್ಷಣವನ್ನು ಮುಂದುವರಿಸಿ ಎಂಬುದು ನನ್ನ ಸಮುದಾಯದವರಿಗೆ ನಾನು ಮನವಿ ಮಾಡುತ್ತೇನೆ. ನಾವು ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಾರಂಭಿಸಿದರೆ, ಸಮಾಜವು ಖಂಡಿತವಾಗಿಯೂ ನಮ್ಮನ್ನು ಬೆಂಬಲಿಸುತ್ತದೆ ಎಂದು ರೇಣುಕಾ ಹೇಳಿದರು. ಕಳೆದ ವರ್ಷ ತನ್ನನ್ನು ಪಿಎಚ್‌ಡಿ ಗಾಗ ದಾಖಲಿಸಿಕೊಳ್ಳಲು ನಮ್ಮ ಕಚೇರಿಗೆ ಬಂದಿದ್ದರು. ಆದರೆ ಆ ಹೊತ್ತಿಗೆ ದಾಖಲಾತಿ ಪ್ರಕ್ರಿಯೆ ಮುಗಿದಿದ್ದರಿಂದ ಆಕೆಗೆ ಸಾಧ್ಯವಾಗಲಿಲ್ಲ. ಅವರು ಬೋಧನೆಯಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದಾಗ, ನಾನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೊಂದಿಗೆ ಚರ್ಚಿಸಿದೆ. ಆಕೆಯನ್ನು ಡೆಮೊಗೆ ಕರೆಯಲಾಯಿತು ಮತ್ತು ಆಕೆಯ ಬೋಧನಾ ಕೌಶಲ್ಯದಿಂದ ಎಲ್ಲರೂ ಸಂತೋಷಪಟ್ಟರು.ಅವರನ್ನು ಅತಿಥಿ ಅಧ್ಯಾಪಕರಾಗಿ ನೇಮಕ ಮಾಡಲು ಸಿಂಡಿಕೇಟ್ ತನ್ನ ಅನುಮೋದನೆಯನ್ನು ನೀಡಿತು ಎಂದು ರುದ್ರೇಶ್ ತಿಳಿಸಿದ್ದಾರೆ.

Renuka Pojari
ಬಾಗಲಕೋಟೆ: ಮನೆಯಿಂದ ಹೊರಹಾಕಲ್ಪಟ್ಟ ತೃತೀಯ ಲಿಂಗಿ ಈಗ ಯಶಸ್ವಿ ವ್ಯಾಪಾರಿ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com