
ಗದಗ: ಬಾದಾಮಿ ನಗರದಿಂದ 30 ಕಿಮೀ ದೂರದಲ್ಲಿರುವ ಸೂಡಿಯಲ್ಲಿರುವ ಐತಿಹಾಸಿಕ ಸೂಡಿ ಜೋಡು ಕಳಸ ದೇವಸ್ಥಾನವನ್ನು ವಿರೂಪಗೊಳಿಸಿರುವ ಕುರಿತು ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ನಲ್ಲಿ ವರದಿಯಾದ ನಂತರ ಮುಖ್ಯಮಂತ್ರಿಗಳ ಕಚೇರಿ (CMO) ಪ್ರತಿಕ್ರಿಯಿಸಿದೆ. ಸ್ಮಾರಕವನ್ನು ಪುನಃಸ್ಥಾಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಅಧಿಕಾರಿಗಳು ಪರಿಶೀಲನೆಗಾಗಿ ದೇವಸ್ಥಾನಕ್ಕೆ ತೆರಳಿದ್ದು ಬುಧವಾರ ಬೆಳಗ್ಗೆ ಸ್ಮಾರಕವನ್ನು ದುರಸ್ತಿಗೊಳಿಸಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ತಡರಾತ್ರಿ, 10 ನೇ ಶತಮಾನದಲ್ಲಿ ನಿರ್ಮಿಸಲಾದ ಕಲ್ಯಾಣಿ ಚಾಲುಕ್ಯ ಅವಳಿ ಗೋಪುರದ ದೇವಾಲಯದ ಕೆಳಗಿನ ಭಾಗವನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದರು. ಹಾನಿಗೆ ಕಾರಣ ತಿಳಿದುಬಂದಿಲ್ಲ, ಆದರೆ ದುಷ್ಕರ್ಮಿಗಳು ನಿಧಿ ಶೋಧದಲ್ಲಿ ತೊಡಗಿರಬಹುದು ಅಥವಾ ದೇವಸ್ಥಾನಕ್ಕೆ ವಿಕೃತ ರೀತಿಯಲ್ಲಿ ಹಾನಿ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಪಾರಂಪರಿಕ ಸ್ಮಾರಕಕ್ಕೆ ಹಾನಿ ಮಾಡುವುದು ಹೊಸದೇನಲ್ಲ, ಯಾರೂ ಇಲ್ಲದಿರುವಾಗ ಅನೇಕರು ಇಂತಹ ವಿಧ್ವಂಸಕ ಕೃತ್ಯಗಳಲ್ಲಿ ತೊಡಗುತ್ತಾರೆ.ಇತಿಹಾಸಕಾರರು ಪ್ರತಿಯೊಂದು ಕಲ್ಲನ್ನೂ ಸೂಕ್ಷ್ಮವಾಗಿ ಗಮನಿಸುವವರೆಗೂ ಇಂತಹ ಕೃತ್ಯಗಳು ಬೆಳಕಿಗೆ ಬರುವುದಿಲ್ಲ. ದೇವಾಲಯದಲ್ಲಿ ಕೆಲವು ಮಾಹಿತಿಗಾಗಿ ಶೋಧನೆ ನಡೆಸುತ್ತಿರುವಾಗ ದೇವಾಲಯದ ತಳಭಾಗದ ಭಾಗ ಮತ್ತು ಸುತ್ತಲೂ ಕೆಲವು ಕಲ್ಲುಗಳು ಹರಡಿಕೊಂಡಿರುವುದು ಕಂಡುಬಂದಿತು ಎದ ಇತಿಹಾಸ ಪ್ರೇಮಿ ಮತ್ತುಇತಿಹಾಸಕಾರ ಪುಂಡಲೀಕ ಕಲ್ಲಿಗನೂರು ತಿಳಿಸಿದ್ದಾರೆ. ಕಲ್ಲಿಂಜೂರು ಸ್ಥಳೀಯ ಕಚೇರಿಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿ,ಬಿಗಿ ಭದ್ರತೆ ವಹಿಸಬೇಕು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಹೇಳಿದ್ದಾರೆ.
Advertisement