ಹೆಚ್ಚುವರಿ ಶುಲ್ಕ ಪಡೆದ ಆರೋಪ: 10ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ನಿಯಂತ್ರಣ ಸಮಿತಿ ನೊಟೀಸ್

ಡಾ ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಕಾಮೆಡ್-ಕೆ ಸೀಟ್‌ಗಾಗಿ ಹೆಚ್ಚುವರಿ ಶುಲ್ಕವನ್ನು ವಿಧಿಸಿದ ನಂತರ ವಿದ್ಯಾರ್ಥಿಗೆ 2.12 ಲಕ್ಷ ರೂಪಾಯಿ ಹಿಂತಿರುಗಿಸಿದೆ. ಆರಂಭದಲ್ಲಿ ಶುಲ್ಕ ಮರುಪಾವತಿಸಲು ನಿರಾಕರಿಸಿದರೂ, ಸಂಸ್ಥೆಯು ಎಫ್ ಆರ್ ಸಿಯ ಮಧ್ಯಸ್ಥಿತಿ ನಂತರ ಹಿಂತಿರುಗಿಸಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸರ್ಕಾರದ ಆದೇಶವನ್ನು ಮೀರಿ ಶುಲ್ಕ ವಸೂಲಿ ಮಾಡುತ್ತಿರುವ ರಾಜ್ಯದ ಹತ್ತಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ವಿರುದ್ಧ ಶುಲ್ಕ ನಿಯಂತ್ರಣ ಸಮಿತಿ (FRC) ಕ್ರಮ ಕೈಗೊಂಡಿದೆ. ಡಾ ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಟಿ ಜಾನ್ ಕಾಲೇಜ್ ಆಫ್ ಫಾರ್ಮಸಿ ಸೇರಿದಂತೆ ಹಲವಾರು ಸಂಸ್ಥೆಗಳಿಗೆ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕವನ್ನು ಮರುಪಾವತಿಸುವಂತೆ ಸೂಚಿಸಲಾಗಿದ್ದು, ಆದೇಶ ಪಾಲಿಸಲು ಕಟ್ಟುನಿಟ್ಟಾದ ಎಚ್ಚರಿಕೆಗಳನ್ನು ನೀಡಲಾಗಿದೆ.

ಡಾ ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಕಾಮೆಡ್-ಕೆ ಸೀಟ್‌ಗಾಗಿ ಹೆಚ್ಚುವರಿ ಶುಲ್ಕವನ್ನು ವಿಧಿಸಿದ ನಂತರ ವಿದ್ಯಾರ್ಥಿಗೆ 2.12 ಲಕ್ಷ ರೂಪಾಯಿ ಹಿಂತಿರುಗಿಸಿದೆ. ಆರಂಭದಲ್ಲಿ ಶುಲ್ಕ ಮರುಪಾವತಿಸಲು ನಿರಾಕರಿಸಿದರೂ, ಸಂಸ್ಥೆಯು ಎಫ್ ಆರ್ ಸಿಯ ಮಧ್ಯಸ್ಥಿತಿ ನಂತರ ಹಿಂತಿರುಗಿಸಿದೆ.

image-fallback
ಡೊನೇಷನ್ ಹಾವಳಿ ತಡೆಯಲು ಶಿಕ್ಷಣ ಫೀ ಅದಾಲತ್, ಮೇ 15ರ ಬಳಿಕ ತಿಳಿವಳಿಕೆ, ಹೆಚ್ಚಿನ ಶುಲ್ಕ ವಸೂಲಿ ಮಾಡಿದರೆ ಕಾನೂನು ಕ್ರಮ

ಟಿ ಜಾನ್ ಕಾಲೇಜ್ ಆಫ್ ಫಾರ್ಮಸಿ ಸಹ 2022-23 ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗೆ 50 ಸಾವಿರ ರೂಪಾಯಿ ಮರುಪಾವತಿ ಮಾಡಿದೆ. ಬಿ.ಫಾರ್ಮಾ ಕೋರ್ಸ್ ಗೆ ಹೆಚ್ಚುವರಿ ತರಬೇತಿ ಶುಲ್ಕದ ನೆಪದಲ್ಲಿ ಮೊತ್ತ ಸಂಗ್ರಹಿಸಲಾಗಿದೆ. ಇತರ ಇಬ್ಬರು ವಿದ್ಯಾರ್ಥಿಗಳಿಗೆ ಮರುಪಾವತಿಯನ್ನು ಸಹ ಪಡೆದುಕೊಂಡಿದೆ.

ಈ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಎಂಬಿಎ, ಎಂಸಿಎ, ನರ್ಸಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾದ 25 ವಿದ್ಯಾರ್ಥಿಗಳಿಂದ ದೂರುಗಳು ಬಂದಿವೆ ಎಂದು ಎಫ್‌ಆರ್‌ಸಿ ಅಧ್ಯಕ್ಷ ನ್ಯಾಯಮೂರ್ತಿ ಬಿ ಶ್ರೀನಿವಾಸಗೌಡ ಬಹಿರಂಗಪಡಿಸಿದ್ದಾರೆ. ವಿದ್ಯಾರ್ಥಿಗಳು ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಶುಲ್ಕ 55 ಸಾವಿರದಿಂದ 4 ಲಕ್ಷ ರೂಪಾಯಿಗಳವರೆಗೆ ಬೇಡಿಕೆ ಇಟ್ಟಿದ್ದರು.

ಸಮಿತಿಯು ಈ ದೂರುಗಳ ಮೇಲೆ ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಶುಲ್ಕವನ್ನು ಪಾವತಿಸದೆ ಪ್ರವೇಶವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರೆಸಿಡೆನ್ಸಿ ಯೂನಿವರ್ಸಿಟಿ, ಎಐಎಂಎಸ್ ಐಬಿಎಸ್ ಸ್ಕೂಲ್, ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್, ದಿ ಆಕ್ಸ್‌ಫರ್ಡ್ ಕಾಲೇಜ್ ಆಫ್ ಇಂಜಿನಿಯರಿಂಗ್, ಬೃಂದಾವನ ಕಾಲೇಜ್, ಅಲಯನ್ಸ್ ಯೂನಿವರ್ಸಿಟಿ, ಐಎಫ್‌ಐಎಂ ಕಾಲೇಜು, ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್, ದಕ್ಷ ಫಸ್ಟ್ ಗ್ರೇಡ್, ಡಾನ್ ಬಾಸ್ಕೋ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಸೇರಿದಂತೆ ಹತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ಹೆಚ್ಚುವರಿ ಶುಲ್ಕ ಪಡೆದ ಆರೋಪ ಹೊತ್ತಿವೆ.

ಉನ್ನತ ಶಿಕ್ಷಣ ಇಲಾಖೆ ಅಧೀನದಲ್ಲಿರುವ ತುಮಕೂರು ಮತ್ತು ದಾವಣಗೆರೆ ವಿಶ್ವವಿದ್ಯಾಲಯಗಳೂ ಹೆಚ್ಚುವರಿ ಶುಲ್ಕ ವಸೂಲಿಗೆ ಯತ್ನಿಸಿದ್ದು, ನಂತರ ತಮ್ಮ ಬೇಡಿಕೆಗಳನ್ನು ಹಿಂಪಡೆದಿರುವುದು ಕಂಡುಬಂದಿದೆ ಎಂದು ನ್ಯಾಯಮೂರ್ತಿ ಬಿ ಶ್ರೀನಿವಾಸ ಗೌಡ ಹೇಳಿದರು.

ಸಮಿತಿಯ ಸ್ಪಷ್ಟ ನಿರ್ದೇಶನಗಳ ಹೊರತಾಗಿಯೂ ಮೂವರು ಎಂಬಿಎ ವಿದ್ಯಾರ್ಥಿಗಳು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಎಫ್‌ಆರ್‌ಸಿ ಆಚಾರ್ಯ ಬೆಂಗಳೂರು ಬಿ-ಸ್ಕೂಲ್‌ಗೆ ನೋಟಿಸ್ ಜಾರಿಗೊಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com