ಮಂಗಳೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ!

ತಾಯಿ ರಾಣಿ ಮತ್ತು ಮರಿಗಳೆರಡೂ ಆರೋಗ್ಯವಾಗಿವೆ ಎಂದು ಅವರು ತಿಳಿಸಿದ್ದಾರೆ. ರಾಣಿ 2016 ರಲ್ಲಿ ಐದು ಮತ್ತು 2021 ರಲ್ಲಿ ಮೂರು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದ್ದಳು.
Pilikula
ಪಿಲಿಕುಳonline desk
Updated on

ಪಿಲಿಕುಳ: ಮಂಗಳೂರಿನ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ.

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 14 ವರ್ಷದ ಹುಲಿಯೊಂದು ಇತ್ತೀಚೆಗೆ ಎರಡು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಯಿ ರಾಣಿ ಮತ್ತು ಮರಿಗಳೆರಡೂ ಆರೋಗ್ಯವಾಗಿವೆ ಎಂದು ಅವರು ತಿಳಿಸಿದ್ದಾರೆ. ರಾಣಿ 2016 ರಲ್ಲಿ ಐದು ಮತ್ತು 2021 ರಲ್ಲಿ ಮೂರು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಪಿಲಿಕುಳದಿಂದ ಗಂಡು ಹುಲಿಗೆ ಬದಲಾಗಿ ರಾಣಿಯನ್ನು ಪಿಲಿಕುಳ ಜೈವಿಕ ಉದ್ಯಾನವನಕ್ಕೆ ತರಲಾಗಿತ್ತು. ಹೊಸ ಮರಿಗಳ ಜನನದೊಂದಿಗೆ ಪಿಲಿಕುಳ ಮೃಗಾಲಯದಲ್ಲಿ ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಸೇರಿದಂತೆ ಹುಲಿಗಳ ಸಂಖ್ಯೆ 10ಕ್ಕೆ ಏರಿದೆ.

Pilikula
African elephant Shankar ಬಗ್ಗೆ ನಿರ್ಲಕ್ಷ ಆರೋಪ; ದೆಹಲಿ ಮೃಗಾಲಯ ಸದಸ್ಯತ್ವ ಅಮಾನತು!

ಹೊಸದಾಗಿ ಹುಟ್ಟಿದ ಮರಿಗಳ ಲಿಂಗವನ್ನು ಎರಡು ತಿಂಗಳ ನಂತರ ನಿರ್ಧರಿಸಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com