ಸರ್ಕಾರಿ ಹಾಸ್ಟೆಲ್ ಗಳಲ್ಲಿ ಊಟ-ತಿಂಡಿ ಫೋಟೋ ಅಪ್ ಲೋಡ್: ಸಲಹೆ, ಪ್ರತಿಕ್ರಿಯೆಗಳ ಭರ್ಜರಿ ರೆಸ್ಪಾನ್ಸ್!

ಅಡುಗೆ ಮಾಡುವ ಕೊಠಡಿ, ಮೆನು ಕಾರ್ಡ್, ಎಲ್ಲಾ ಆಹಾರ ಪದಾರ್ಥಗಳಿರುವ ಪ್ಲೇಟ್, ಆಹಾರ ತಿನ್ನುತ್ತಿರುವ ವಿದ್ಯಾರ್ಥಿಗಳ ಫೋಟೋವನ್ನು ದಿನಕ್ಕೆ ಮೂರು ಬಾರಿ GPS Location, ಸಮಯದೊಂದಿಗೆ ನಾಲ್ಕು ಫೋಟೋಗಳನ್ನು ಅಪ್ ಲೋಡ್ ಮಾಡಬೇಕಾಗಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕೆಆರ್‌ಇಐಎಸ್) ಮತ್ತು ಸರ್ಕಾರಿ ಹಾಸ್ಟೆಲ್‌ಗಳಲ್ಲಿ ನೀಡಲಾಗುವ ಊಟ ಮತ್ತು ಆಹಾರದ ಮೆನು ಕಾರ್ಡ್ ಅನ್ನು ಅಪ್‌ಲೋಡ್ ಮಾಡುವ ಕಾರ್ಯವನ್ನು ಸಮಾಜ ಕಲ್ಯಾಣ ಇಲಾಖೆ ಪ್ರಾರಂಭಿಸಿ ಸುಮಾರು ಒಂದು ತಿಂಗಳು ಆದ ನಂತರವೂ ಸಲಹೆಗಳು ಮತ್ತು ಪ್ರತಿಕ್ರಿಯೆಗಳು ಬರುತ್ತಲೇ ಇವೆ.

ಹಾಸ್ಟೆಲ್ ಗಳಲ್ಲಿ ನೀಡಲಾಗುವ ಆಹಾರ ಪದಾರ್ಥಗಳನ್ನು ಬದಲಾಯಿಸುವುದು, ಕಾರ್ಬೋಹೈಡ್ರೆಟ್ ಗಿಂತ ಹೆಚ್ಚಿನ ಪ್ರೊಟಿನ್ ಯುಕ್ತ ಆಹಾರ ನೀಡುವುದು ಅಥವಾ ಅಕ್ಕಿಯ ಗುಣಮಟ್ಟ ಹೆಚ್ಚಿಸುವುದು ಮತ್ತಿತರ ಸಲಹೆಗಳನ್ನೊಳಗೊಂಡ ಸಕಾರಾತ್ಮಕ ಹಾಗೂ ನಕರಾತ್ಮಕ ಸಲಹೆಗಳ ಪಟ್ಟಿಯೇ ಇದೆ. ಅಡುಗೆ ಮಾಡುವ ಕೊಠಡಿ, ಮೆನು ಕಾರ್ಡ್,ಎಲ್ಲಾ ಆಹಾರ ಪದಾರ್ಥಗಳಿರುವ ಪ್ಲೇಟ್, ಆಹಾರ ತಿನ್ನುತ್ತಿರುವ ವಿದ್ಯಾರ್ಥಿಗಳ ಫೋಟೋವನ್ನು ದಿನಕ್ಕೆ ಮೂರು ಬಾರಿ GPS Location, ಸಮಯದೊಂದಿಗೆ ನಾಲ್ಕು ಫೋಟೋಗಳನ್ನು ಅಪ್ ಲೋಡ್ ಮಾಡುವ ಕೆಲಸವನ್ನು ಸಮಾಜ ಕಲ್ಯಾಣ ಇಲಾಖೆ ಆರಂಭಿಸಿತ್ತು.

ಸಾರ್ವಜನಿಕರ ಮಾಹಿತಿಗಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಾಲ್ಕು ಫೋಟೋಗಳನ್ನು ಅಪ್‌ಲೋಡ್ ಮಾಡಲು ನವೆಂಬರ್ 29 ರಂದು ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಡಿಸೆಂಬರ್ 1 ರಿಂದ ಬೀದರ್, ರಾಯಚೂರು ಮತ್ತು ಚಾಮರಾಜನಗರ ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ.

ಪ್ರತಿಯೊಂದು ಪ್ರತಿಕ್ರಿಯೆಗಳು ಬರುತ್ತಿದ್ದು, ಎಲ್ಲಾದಕ್ಕೂ ಉತ್ತರಿಸುತ್ತಿದ್ದೇವೆ. ಊಟದ ಗುಣಮಟ್ಟ ಸುಧಾರಿಸಲು ಕೆಲವು ಸಲಹೆಗಳನ್ನು ಸಹ ಅಳವಡಿಸಲಾಗಿದೆ. ರಾಜ್ಯದಲ್ಲಿ 2,500 KREIS ಮತ್ತು ಹಾಸ್ಟೆಲ್‌ಗಳು ಪ್ರತಿದಿನ 4.5 ಲಕ್ಷ ವಿದ್ಯಾರ್ಥಿಗಳಿಗೆ ಆಹಾರ ನೀಡುತ್ತಿವೆ. ಇದರಲ್ಲಿ ಮೂರು ಜಿಲ್ಲೆಗಳ 294 ಸಂಸ್ಥೆಗಳು ವ್ಯಾಪ್ತಿಗೆ ಒಳಪಟ್ಟಿವೆ. ಜನವರಿ 2025 ರ ಅಂತ್ಯದ ವೇಳೆಗೆ ಇದನ್ನು ಪ್ರಾರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು TNIE ಗೆ ತಿಳಿಸಿದರು.

ಹಾಸ್ಟೆಲ್ ವಾರ್ಡನ್‌ಗಳು, ಅಡುಗೆಯವರು, ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳಲ್ಲಿ ಹೊಣೆಗಾರಿಕೆಯನ್ನು ತರಲು ಸಮಾಜ ಕಲ್ಯಾಣ ಇಲಾಖೆ ಈ ಕಾರ್ಯವನ್ನು ಆರಂಭಿಸಿದೆ. ಹಾಸ್ಟೆಲ್‌ಗಳಲ್ಲಿ ನೀಡುತ್ತಿರುವ ಆಹಾರದ ದಯನೀಯ ಗುಣಮಟ್ಟದ ಬಗ್ಗೆ ಅನೇಕ ಪೋಷಕರು ಮತ್ತು ವಿದ್ಯಾರ್ಥಿಗಳು ಸರ್ಕಾರಕ್ಕೆ ದೂರು ನೀಡಿದ್ದರು. ಆಹಾರ ಮತ್ತು ಸೌಲಭ್ಯಗಳ ಕಳಪೆ ಗುಣಮಟ್ಟದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

Casual Images
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಕೊರತೆ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನವೂ ಮಾಹಿತಿಯನ್ನು ಅಪ್‌ಲೋಡ್ ಮಾಡುವ ಉದ್ದೇಶ ಪಾರದರ್ಶಕತೆಯನ್ನು ತರುವುದು ಮತ್ತು ಏಕರೂಪದ ಗುಣಮಟ್ಟ ಕಾಪಾಡಿಕೊಳ್ಳುವುದಾಗಿದೆ. ವಾರ್ಡನ್‌ಗಳು ದಿನಕ್ಕೆ ಮೂರು ಬಾರಿ ನಾಲ್ಕು ಫೋಟೋಗಳನ್ನು ಟ್ವೀಟ್ ಮಾಡಬೇಕು ಫೋಸ್ಟ್ ಗಳ ಪರಿಶೀಲನೆ ಮತ್ತು ಪ್ರತಿಕ್ರಿಯೆ ನೀಡಲು 30 ಜನರನ್ನೊಳಗೊಂಡ ಟಿ ಎ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com