ಕೊಪ್ಪಳ: ಗರ್ಭದಲ್ಲೇ ಮಗು ಸಾವು; ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಕೊನೆಯುಸಿರು!

ರಾಜ್ಯಾದ್ಯಂತ ಬಾಣಂತಿಯರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಮಗು ಗರ್ಭದಲ್ಲೇ ಮೃತಪಟ್ಟರೆ, ಇಂದು ಚಿಕಿತ್ಸೆ ಫಲಿಸದೆ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಬೆಳಗಾವಿ ಮೂಲದ ತುಂಬು ಗರ್ಭಿಣಿ ಮೃತಪಟ್ಟಿದ್ದಾರೆ.
ರೇಣುಕಾ ಪ್ರಕಾಶ್
ರೇಣುಕಾ ಪ್ರಕಾಶ್
Updated on

ಕೊಪ್ಪಳ: ರಾಜ್ಯಾದ್ಯಂತ ಬಾಣಂತಿಯರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಮಗು ಗರ್ಭದಲ್ಲೇ ಮೃತಪಟ್ಟರೆ, ಇಂದು ಚಿಕಿತ್ಸೆ ಫಲಿಸದೆ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಬೆಳಗಾವಿ ಮೂಲದ ತುಂಬು ಗರ್ಭಿಣಿ ಮೃತಪಟ್ಟಿದ್ದಾರೆ. ಬೆಳಗಾವಿಯ ಕುಕನೂರಿನ ಆಡೂರ್ ಗ್ರಾಮದ ನಿವಾಸಿ ರೇಣುಕಾ ಪ್ರಕಾಶ್ ಹಿರೇಮನಿ ಹೆರಿಗೆಗಾಗಿ ನಿನ್ನೆ ರಾತ್ರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಕುಷ್ಟಗಿ ಆಸ್ಪತ್ರೆಯಿಂದ ಜಿಲ್ಲಾ ಆಸ್ಪತ್ರೆಗೆ ಬಂದಿದ್ದ ರೇಣುಕಾಗೆ ಬೆಳಗ್ಗೆ 2:30ರ ಸುಮಾರಿಗೆ ಹೆರಿಗೆ ಆಗಿತ್ತು. ಆದರೆ ಡೆಲಿವರಿಗೂ ಮೊದಲೇ ಮಗು ಮೃತಪಟ್ಟಿದ್ದು, ಹೀಗಾಗಿ ವೈದ್ಯರು ಸಿಜೇರಿಯನ್ ಮಾಡಿ ಮಗುವನ್ನು ಹೊರ ತೆಗೆದಿದ್ದರು. ಈ ಸಮಯದಲ್ಲಿ ಹೈಬಿಪಿ ಮತ್ತು ಹೃದಯಾಘಾತದಿಂದ ರೇಣುಕಾ ಸಾವನ್ನಪ್ಪಿದ್ದಾರೆ.

ರೇಣುಕಾ ಪ್ರಕಾಶ್
ಕರ್ನಾಟಕದಲ್ಲಿ ಮತೋರ್ವ ಬಾಣಂತಿ ಸಾವು: ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಆರೋಪ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com