ಶಿವಮೊಗ್ಗ: ಸತತ 10 ಗಂಟೆಗಳ ಕಾರ್ಯಾಚರಣೆ; 540 ಅಡಿ ಬೋರ್‌ವೆಲ್‌ಗೆ ಬಿದ್ದಿದ್ದ ನಾಗರಹಾವು ರಕ್ಷಣೆ

ವಾಹನ ದಟ್ಟಣೆ ಮತ್ತು ಜನರಿಂದ ಗಾಬರಿಗೊಂಡು ತರಾತುರಿಯಲ್ಲಿ ರಕ್ಷಣೆ ಪಡೆಯಲು ಆಕಸ್ಮಿಕವಾಗಿ ಮುಚ್ಚದೇ ಇದ್ದ ಬೋರ್‌ವೆಲ್ ಪೈಪ್‌ಗೆ ಹಾವು ಬಿದ್ದಿತ್ತು.
ಬೋರ್‌ವೆಲ್‌ಗೆ ಬಿದ್ದಿದ್ದ ನಾಗರಹಾವು ರಕ್ಷಣೆ
ಬೋರ್‌ವೆಲ್‌ಗೆ ಬಿದ್ದಿದ್ದ ನಾಗರಹಾವು ರಕ್ಷಣೆ
Updated on

ಶಿವಮೊಗ್ಗ: ನಾಟಕೀಯ ಬೆಳವಣಿಗೆಯಲ್ಲಿ ಇತ್ತೀಚೆಗೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ಸುಮಾರು 540 ಅಡಿ ಆಳದ ಬೋರ್‌ವೆಲ್ ಪೈಪ್‌ಗೆ ಬಿದ್ದಿದ್ದ ಸುಮಾರು ಮೂರು ಅಡಿ ಉದ್ದದ ನಾಗರಹಾವನ್ನು ಸತತ 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.

ಪ್ರದೇಶದ ಜನನಿಬಿಡ ಮುಖ್ಯ ರಸ್ತೆಯನ್ನು ದಾಟುವ ವೇಳೆ ಹಾವು ಬೋರ್‌ವೆಲ್ ಪೈಪ್‌ಗೆ ಬಿದ್ದಿತ್ತು. ವಾಹನ ದಟ್ಟಣೆ ಮತ್ತು ಜನರಿಂದ ಗಾಬರಿಗೊಂಡು ತರಾತುರಿಯಲ್ಲಿ ರಕ್ಷಣೆ ಪಡೆಯಲು ಆಕಸ್ಮಿಕವಾಗಿ ಮುಚ್ಚದೇ ಇದ್ದ ಬೋರ್‌ವೆಲ್ ಪೈಪ್‌ಗೆ ಹಾವು ಬಿದ್ದಿತ್ತು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಸ್ಥಳೀಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿತ್ತು.

ನಾಗರಹಾವನ್ನು ರಕ್ಷಿಸುವ ಆರಂಭಿಕ ಪ್ರಯತ್ನದಲ್ಲಿ, ನಿವಾಸಿಗಳು ಹಾವು ಜೀವಂತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕ್ಯಾಮೆರಾವನ್ನು ಬಳಸಿದರು ಮತ್ತು ಅದನ್ನು ಹಿಡಿಯಲು ನಾಲ್ಕು ದಿನಗಳ ಕಾಲ ವಿವಿಧ ವಿಧಾನಗಳನ್ನು ಅನುಸರಿಸಿದರು. ಜನರ ಎಲ್ಲಾ ಪ್ರಯತ್ನಗಳು ವಿಫಲವಾದಾಗ, ಅವರು ಅರಣ್ಯ ಇಲಾಖೆ ಮತ್ತು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ(ARRS)ದ ಸಹಾಯ ಕೋರಿದ್ದಾರೆ.

ಬೋರ್‌ವೆಲ್‌ಗೆ ಬಿದ್ದಿದ್ದ ನಾಗರಹಾವು ರಕ್ಷಣೆ
ಜೀವದ ಹಂಗು ತೊರೆದು ಬಾವಿಗೆ ಬಿದ್ದಿದ್ದ ನಾಗರಹಾವು ರಕ್ಷಿಸಿದ ಉರಗ ಪ್ರೇಮಿ

ಪರಿಶೀಲನೆಯ ನಂತರ, ಕ್ಷೇತ್ರ ನಿರ್ದೇಶಕ ಅಜಯ್ ಗಿರಿ ನೇತೃತ್ವದ ARRS ತಂಡ ಸ್ಥಳೀಯರ ಸಹಕಾರದೊಂದಿಗೆ ಸುಮಾರು 10 ಗಂಟೆಗಳ ಕಾಲ ನಡೆದ ಸೂಕ್ಷ್ಮ ಕಾರ್ಯಾಚರಣೆಯ ನಂತರ ಹಾವಿಗೆ ಯಾವುದೇ ಹಾನಿಯಾಗದಂತೆ ಹೊರತೆಗೆಯಲಾಗಿದೆ.

ಹಾವನ್ನು ಗುರುತಿಸಲು ಕೊಳವೆಬಾವಿಯಲ್ಲಿ ಪೈಪ್ ಮತ್ತು ಕ್ಯಾಮೆರಾವನ್ನು ಇಳಿಸಲಾಯಿತು. 240 ಅಡಿ ಆಳದಲ್ಲಿ ನಾಗರಹಾವು ಪತ್ತೆಯಾಗಿದೆ. ಬೋರ್‌ವೆಲ್‌ನಿಂದ ಎಲ್ಲಾ ಪಿವಿಸಿ ಪೈಪ್‌ಗಳನ್ನು ತೆಗೆಯಲಾಗಿದೆ. ಅಂತಿಮವಾಗಿ, ತಂಡವು ಹಾವನ್ನು ಕೊಕ್ಕೆ ಹಾಕುವಲ್ಲಿ ಯಶಸ್ವಿಯಾಯಿತು.

ಬೋರ್‌ವೆಲ್ ಪೈಪ್‌ಗೆ ಬಿದ್ದಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹೊರ ತೆಗೆದ ರಕ್ಷಣಾ ತಂಡ, ಅದನ್ನು ಮರಳಿ ಕಾಡಿಗೆ ಬಿಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com