ಕಲಬುರಗಿ: ವರಸೆಯಲ್ಲಿ ಅಣ್ಣ-ತಂಗಿ, ಪ್ರೀತಿಗೆ ಪೋಷಕರ ವಿರೋಧ; ವಿವಾಹವಾಗಿ ಪ್ರೇಮಿಗಳ ಆತ್ಮಹತ್ಯೆ!

ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಮನನೊಂದ ಪ್ರೇಮಿಗಳು ಜಮೀನಿನಲ್ಲಿಯೇ ಮದುವೆಯಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಡ್ರಾಮಿ ತಾಲೂಕಿನ‌ ಮಾಗಣಗೇರಾ ಗ್ರಾಮದಲ್ಲಿ ನಡೆದಿದೆ.
ಪ್ರೇಮಿಗಳ ಆತ್ಮಹತ್ಯೆ
ಪ್ರೇಮಿಗಳ ಆತ್ಮಹತ್ಯೆ

ಯಡ್ರಾಮಿ: ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಮನನೊಂದ ಪ್ರೇಮಿಗಳು ಜಮೀನಿನಲ್ಲಿಯೇ ಮದುವೆಯಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಡ್ರಾಮಿ ತಾಲೂಕಿನ‌ ಮಾಗಣಗೇರಾ ಗ್ರಾಮದಲ್ಲಿ ನಡೆದಿದೆ.

ಯಡ್ರಾಮಿ ತಾಲೂಕಿನ ಮಾಗಣಗೇರಾ ಗ್ರಾಮದ ಶಶಿಕಲಾ ತಂದೆ ಸಿದ್ದಪ್ಪ(18)  ಹಾಗೂ  ಇದೇ ಗ್ರಾಮದ ಗೊಲ್ಲಾಳ ತಂದೆ ಮರಿಲಿಂಗಪ್ಪ (24) ನೇಣಿಗೆ ಶರಣಾದ ಪ್ರೇಮಿಗಳು. ಇವರಿಬ್ಬರು ವರಸೆಯಲ್ಲಿ ಅಣ್ಣಚ-ತಂಗಿಯಾಗಿದ್ದರು ಎನ್ನಲಾಗಿದೆ.

ಮನೆಯವರ ವಿರೋಧದ ನಡುವೆ ಶುಕ್ರವಾರ ರಾತ್ರಿ ಪ್ರೇಮಿಗಳು ಮದುವೆ ಮಾಡಿಕೊಂಡಿದ್ದಾರೆ. ನಂತರ ಕೆಲವೇ ಗಂಟೆಗಳಲ್ಲಿ ಊರಿನ  ಹೊರವಲಯದ ಗೊಲ್ಲಾಳ ತಂದೆ ಮರಿಲಿಂಗಪ್ಪ ಅವರ ಜಮೀನಿನಲ್ಲಿರುವ ಮರಕ್ಕೆ ಇಬ್ಬರೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಶಶಿಕಲಾಗೆ ಬೇರೆ ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದರು. ಅದರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಗ್ರಾಮದ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಸಿದ್ದರು. ಮುಂದಿನ ತಿಂಗಳು ಮದುವೆ ಕೂಡ ನಿಶ್ಚಯವಾಗಿತ್ತು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com