ಹೊಸಪೇಟೆ: ಅಪಘಾತದಲ್ಲಿ ರೈತ ನಾಯಕ ಸಾವು; ತನಿಖೆಗೆ ಕುಟುಂಬಸ್ಥರ ಆಗ್ರಹ

ಹೊಸಪೇಟೆ ಮೂಲದ ರೈತ ನಾಯಕ ಕಾರ್ತಿಕ್ ಜೀರ್ (42) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಕುಟುಂಬ ಸದಸ್ಯರು ಈ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಹೊಸಪೇಟೆ: ಹೊಸಪೇಟೆ ಮೂಲದ ರೈತ ನಾಯಕ ಕಾರ್ತಿಕ್ ಜೀರ್ (42) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಕುಟುಂಬ ಸದಸ್ಯರು ಈ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಕಾರ್ತಿಕ್ ಮನೆಗೆ ಹಿಂತಿರುಗುತ್ತಿದ್ದಾಗ ಸರ್ವೀಸ್ ರಸ್ತೆಯಲ್ಲಿ ರಸ್ತೆ ಅಪಘಾತ ಸಂಭವಿಸಿದ್ದ ಘಟನೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 31 ರಂದು ರಾತ್ರಿ ವರದಿಯಾಗಿತ್ತು.  

ಕಾರ್ತಿಕ್ ನಿಧನದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಜಯನಗರ ಜಿಲ್ಲಾ ಸಚಿವ ಜಮೀರ್ ಅಹ್ಮದ್ ನಾಯಕನ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ಕಾರ್ತಿಕ್ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇದೊಂದು ಕೇವಲ ಅಪಘಾತವಷ್ಟೇ ಅಲ್ಲದೇ ಇನ್ನೂ ಹೆಚ್ಚಿನ ಘಟನೆಯಾಗಿರಬಹುದು ಎಂದು ಕಾರ್ತಿಕ್ ಕುಟುಂಬಸ್ಥರು ಆರೋಪಿಸಿದ್ದು ಪ್ರಕರಣದ ವಿವರವಾದ ತನಿಖೆಗೆ ಆಗ್ರಹಿಸಿದ್ದಾರೆ. ಕಾರ್ತಿಕ್ ಗೆ ಅಪಘಾತ ಸಂಭವಿಸುವುದಕ್ಕೂ ಕೆಲವೇ ನಿಮಿಷಗಳ ಮೊದಲು, ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂದು ಫೋನ್‌ನಲ್ಲಿ ಹೇಳಿದ್ದರೆಂದು ಕುಟುಂಬ ಸದಸ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರಿಗೆ ಶರಣಾದ ಲಾರಿ ಚಾಲಕನನ್ನು ವಿಚಾರಣೆ ನಡೆಸಲಾಗುತ್ತಿದೆ. ಸರ್ವಿಸ್ ರಸ್ತೆಯಲ್ಲಿ ಎದುರು ದಿಕ್ಕಿನಿಂದ ಬೈಕ್ ಸವಾರರು ತಪ್ಪು ದಾರಿಯಲ್ಲಿ ಬರುತ್ತಿದ್ದರು ಎಂದು ಚಾಲಕ ಹೇಳಿಕೆ ನೀಡಿದ್ದಾರೆ.

ಕಾರ್ತಿಕ್ ರೈತ ಸಂಬಂಧಿತ ಸಮಸ್ಯೆಗಳು, ಆಂದೋಲನಗಳು ಮತ್ತು ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಯಾವುದೇ ಶತ್ರುಗಳಿಲ್ಲದ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮಿ ವ್ಯಕ್ತಿ ಎಂದು ಅವರ ಜೊತೆಗಿದ್ದ ರೈತ ಮುಖಂಡರು ಹೇಳಿದ್ದಾರೆ. ಕಾರ್ತಿಕ್ ಹಠಾತ್ ನಿಧನ ಹಲವರಿಗೆ ಆಘಾತ ತಂದಿದೆ.

''ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ವಿಷಯವಾಗಿ ಹಲವು ರಾಜಕೀಯ ಮುಖಂಡರ ಜತೆ ಅವರು ಸಂಪರ್ಕದಲ್ಲಿದ್ದು ಮನವರಿಕೆ ಮಾಡಿಕೊಟ್ಟಿದ್ದರು. ಅವರು ದೀರ್ಘಕಾಲ ಲಾಬಿ ನಡೆಸುತ್ತಿದ್ದರು, ಬಹುತೇಕ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. 2011 ರಲ್ಲಿ ಕಾರ್ತಿಕ್ ಅವರನ್ನು ನಾವು ಭೇಟಿ ಮಾಡಿದ್ದೆವು ಮತ್ತು ನಾವು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯಲ್ಲಿ ಬಹಳ ಸಮಯದಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೊಸಪೇಟೆಯ ರೈತ ಮುಖಂಡ ಎಚ್ ಬಿ ವೀರಸಂಗಯ್ಯ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com