10 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಚಿಕ್ಕಮಗಳೂರು KSRTC ಡಿಸಿ ಲೋಕಾಯುಕ್ತ ಬಲೆಗೆ

ಲಂಚ ಸ್ವೀಕರಿಸುತ್ತಿದ್ದಾಗ ಚಿಕ್ಕಮಗಳೂರು ಕೆಎಸ್​ಆರ್​ಟಿಸಿ ವಿಭಾಗ ನಿಯಂತ್ರಕ ಬಸವರಾಜು ಎಂಬುವವರು  ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕರ್ನಾಟಕ ಲೋಕಾಯುಕ್ತ
ಕರ್ನಾಟಕ ಲೋಕಾಯುಕ್ತ
Updated on

ಚಿಕ್ಕಮಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಚಿಕ್ಕಮಗಳೂರು ಕೆಎಸ್​ಆರ್​ಟಿಸಿ ವಿಭಾಗ ನಿಯಂತ್ರಕ ಬಸವರಾಜು ಎಂಬುವವರು  ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
 
ಚಿಕ್ಕಮಗಳೂರಿನಿಂದ ಕಡೂರು ಡಿಪೋಗೆ ವರ್ಗಾವಣೆ ಮಾಡಲು ಲಂಚಕ್ಕೆ  ಬೇಡಿಕೆ ಇಟ್ಟಿದ್ದು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲೇ ಬಸ್ ಚಾಲಕನಿಂದ 10 ಸಾವಿರ ರೂ. ಲಂಚ ಸ್ವೀಕರಿಸುವಾಗ ಬಸವರಾಜು ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

ಈ ಹಿನ್ನಲೆ ಚಾಲಕ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಚಾಲಕ ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಬಸವರಾಜುನನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com