ಮಡಿಕೇರಿ: ಮಾಲೀಕನ ಕುರ್ಚಿ ಮೇಲೆ ಕುಳಿತಿದ್ದಕ್ಕೇ ವ್ಯಕ್ತಿ ಕೊಲೆ

ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಧಾರುಣ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಕೊಲೆಗೀಡಾದ ಸಾಜಿದ್
ಕೊಲೆಗೀಡಾದ ಸಾಜಿದ್

ಮಡಿಕೇರಿ: ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಧಾರುಣ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಹೌದು.. ಚಿಕ್ಕ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೊಡಗಿನ ಕುಶಾಲನಗರದಲ್ಲಿ ನಡೆದಿದ್ದು, ಸ್ಕೂಟರ್ ಶೋರೂಂ ಮಾಲೀಕನೊಬ್ಬ ತನ್ನ ಸ್ಕೂಟರ್ ರಿಪೇರಿ ಕೆಲಸಕ್ಕೆ ಬಂದಿದ್ದ ಗ್ರಾಹಕರನ್ನು ಕೊಲೆ ಮಾಡಿದ್ದಾನೆ. ಸೋಮವಾರ ತಡರಾತ್ರಿ ಈ ಘಟನೆ ವರದಿಯಾಗಿದ್ದು, ಆರೋಪಿ ಮಾಲೀಕನನ್ನು ಕುಶಾಲನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. 

ಮೂಲಗಳ ಪ್ರಕಾರ ಕುಶಾಲನಗರದಲ್ಲಿರುವ ಕೊಡಗಿನ ಮೋಟಾರ್ಸ್ ಶೋರೂಂ ದುರಸ್ತಿ ಕಾರ್ಯಕ್ಕೆಂದು ಬಂದಿದ್ದ ಮಡಿಕೇರಿ ನಿವಾಸಿ ಸಜೀದ್ (23) ಎಂಬುವರನ್ನು ಶೋರೂಂ ಮಾಲೀಕ ಶ್ರೀನಿಧಿ ಕೊಲೆ ಮಾಡಿದ್ದಾರೆ. ಸಣ್ಣಪುಟ್ಟ ಮನಸ್ತಾಪವೇ ಹಿಂಸಾಚಾರಕ್ಕೆ ತಿರುಗಿದ್ದು ಕೊಲೆಗೆ ಕಾರಣ. ಶೋರೂಮ್‌ನ ಕ್ಯಾಶ್ ಕೌಂಟರ್‌ನಲ್ಲಿ ಇರಿಸಲಾಗಿದ್ದ ಆರೋಪಿ ಮಾಲೀಕ ಶ್ರೀನಿಧಿ ಅವರ ಕುರ್ಚಿಯ ಮೇಲೆ ಕೊಲೆಗೀಡಾದ ಸಜೀದ್ ಕುಳಿತಿದ್ದರು. ಸಜೀದ್‌ಗೆ ಕುರ್ಚಿ ಖಾಲಿ ಮಾಡುವಂತೆ ಶ್ರೀನಿಧಿ ಒತ್ತಾಯಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದು ಗಲಾಟೆ ಆರಂಭವಾಗಿದೆ.

ಮಾತಿನ ಚಕಮಕಿ ದೊಡ್ಡದಾಗಿದ್ದು, ಶ್ರೀನಿಧಿ ಸಜೀದ್‌ನ ಎದೆಗೆ ಹರಿತವಾದ ಕಟ್ಟರ್‌ನಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾಜಿದ್ ನನ್ನು ಮೈಸೂರಿನ ಆಸ್ಪತ್ರೆಗೆ ಸಾಗಿಸುವಾಗ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾರೆ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಜರು ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆಗಳು ನಡೆಯುತ್ತಿವೆ. 

ಏತನ್ಮಧ್ಯೆ, ಘಟನೆಯು ಕೋಮು ಸೂಕ್ಷ್ಮವಾಗಿದ್ದರಿಂದ, ಯಾವುದೇ ಅಹಿತಕರ ಘರ್ಷಣೆಯನ್ನು ತಪ್ಪಿಸಲು ಮಡಿಕೇರಿ ಮತ್ತು ಕುಶಾಲನಗರ ಪಟ್ಟಣದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com