ಗೋಕರ್ಣ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಿಂದ ಜಪಾನ್ ದೇಶದ ಪ್ರವಾಸಿ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಮಹಿಳೆಯನ್ನು ಎಮಿ ಯಮಜಾಕಿ ಎಂದು ಗುರುತಿಸಲಾಗಿದ್ದು, ಜಪಾನ್‌ನ ನಾಗನೋ ಮೂಲದವರಾಗಿದ್ದಾರೆ.
43 ವರ್ಷದ ಎಮಿ ಪತಿ ಡೈ ಯಮಜಾಕಿ (40) ಅವರೊಂದಿಗೆ ಗೋಕರ್ಣಕ್ಕೆ ಭೇಟಿ ನೀಡಿದ್ದರು. ಪೊಲೀಸರ ಪ್ರಕಾರ, ಗೋಕರ್ಣದ ಬಳಿಯ ಬಂಗ್ಲೆಗುಡ್ಡದ ಕಾಟೇಜ್‌ನಲ್ಲಿ ಇಬ್ಬರೂ ವಾಸವಿದ್ದರು.
ಫೆಬ್ರವರಿ 5 ರಂದು ಬೆಳಿಗ್ಗೆ 10.15 ಕ್ಕೆ, ಆಕೆ ಕಾಟೇಜ್ ನಿಂದ ತೆರಳಿ ಶೀಘ್ರದಲ್ಲೇ ಹಿಂತಿರುಗುವುದಾಗಿ ಪತಿಗೆ ಹೇಳಿ ಹೊರಟರು. ಆದರೆ 24 ಗಂಟೆಗಳ ನಂತರವೂ ಆಕೆ ವಾಪಾಸಾಗದ ಕಾರಣ ಡೈ ಯಮಜಾಕಿ ಅವಳನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆಕೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಫೆಬ್ರವರಿ 6ರಂದು ಗೋಕರ್ಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಕೆಯನ್ನು ಪತ್ತೆ ಹಚ್ಚಲು ಕ್ರಮಕೈಗೊಂಡರೂ ಫಲಕಾರಿಯಾಗಲಿಲ್ಲ. ಜಪಾನ್ ರಾಯಭಾರ ಕಚೇರಿಗೆ ಸುದ್ದಿ ಮುಟ್ಟಿದ್ದು, ಅಲ್ಲಿನ ಅಧಿಕಾರಿಗಳು ಕರ್ನಾಟಕ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಏತನ್ಮಧ್ಯೆ, ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದು, ಎಮಿ ಕಾಟೇಜ್ ನಿಂದ ಒಂಟಿಯಾಗಿ ತೆರಳಿರುವುದು ಕಂಡುಬಂದಿದೆ. ಪೊಲೀಸರು ಎಮಿಯ ಪತಿಯನ್ನು ಪ್ರಶ್ನಿಸಿದ್ದಾರೆ, ಆಕೆ ಸ್ವಲ್ಪ ಅಸಮಾಧಾನಗೊಂಡಿದ್ದು, ಖಿನ್ನತೆಯಿಂದ ಬಳಲುತ್ತಿದ್ದಾಳೆ ಎಂದು ಪೊಲೀಸರಿಗೆ ವಿಷಯ ತಿಳಿಸಿದ್ದಾನೆ.
ಈ ಕುರಿತು ವಿವರವಾದ ತನಿಖೆ ನಡೆಯುತ್ತಿದ್ದು, ಹಿರಿಯ ಅಧಿಕಾರಿಗಳು ತನಿಖೆಯ ಮೇಲೆ ನಿಗಾ ವಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಎಮಿ ತನ್ನ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿಲ್ಲ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಅವಳು ಸುರಕ್ಷಿತವಾಗಿರುವುದಾಗಿ ತನ್ನ ಪತಿಗೆ ಇ-ಮೇಲ್ ಮಾಡಿದ್ದು, ತನ್ನನ್ನು ಹುಡುಕಬೇಡ ಎಂದು ಹೇಳಿದ್ದಾಳೆ ಎಂಬುದಾಗಿ ಮೂಲಗಳು ತಿಳಿಸಿವೆ.
ಎಮಿ ಬಳಿ ಫೋನ್ ಇಲ್ಲ, ಆದರೆ ಆಕೆ ತನ್ನ ಪತಿಯನ್ನು ಸಂಪರ್ಕಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪೊಲೀಸರು ತಿಳಿಸಿದ್ದಾರೆ. ಆಕೆ ತನ್ನ ಪತಿಯೊಂದಿಗೆ ಸಂಪರ್ಕದಲ್ಲಿದ್ದಾಳೆ ಅವರು ಜಪಾನೀಸ್ ಭಾಷೆಯಲ್ಲಿ ಚಾಟ್ ಮಾಡುತ್ತಿದ್ದಾರೆ. ಇದು ವೈಯಕ್ತಿಕ ಸಮಸ್ಯೆ ಎಂದು ತೋರುತ್ತದೆ ಎಂದಿದ್ದಾರೆ.
ಮಹಿಳೆ ಸುರಕ್ಷಿತವಾಗಿದ್ದ, ಪತಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನಾವು ಖಚಿತಪಡಿಸಬಹುದು. ನಾವು ಆಕೆ ಇರುವ ಸ್ಥಳವನ್ನು ಟ್ರ್ಯಾಕ್ ಮಾಡುತ್ತೇವೆ. ಆಕೆ ಬಹುಶಃ ಕೇರಳದಲ್ಲಿರಬಹುದು ಎಂದು ಗೋಕರ್ಣದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
Advertisement