ಶಿವಮೊಗ್ಗ: ಮಗ ಮಾಡಿದ ತಪ್ಪಿಗೆ ತಾಯಿ, ಸಹೋದರಿಗೆ ಸಾಮಾಜಿಕ ಬಹಿಷ್ಕಾರ!

ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದ ಕುಳವಳ್ಳಿಯಲ್ಲಿ ಈಡಿಗ ಸಮುದಾಯದ ತಾಯಿ ಮತ್ತು ಮಗಳು ಸಾಮಾಜಿಕ ಬಹಿಷ್ಕಾರಕ್ಕೆ ಗುರಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದ ಕುಳವಳ್ಳಿಯಲ್ಲಿ ಈಡಿಗ ಸಮುದಾಯದ ತಾಯಿ ಮತ್ತು ಮಗಳು ಸಾಮಾಜಿಕ ಬಹಿಷ್ಕಾರಕ್ಕೆ ಗುರಿಯಾಗಿದ್ದಾರೆ.

ಮಹಿಳೆಯ ಮಗ, ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ ನಂತರ ಆತನ ತಾಯಿ ಮತ್ತು ಸಹೋದರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಈ ಸಂಬಂಧ ತಾಯಿ ಸರೋಜಮ್ಮ ಮತ್ತು ಮಗಳು ಪವಿತ್ರಾ ಅವರು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರನ್ನು ಸಂಪರ್ಕಿಸಿ ನ್ಯಾಯ ಕೇಳಿದ್ದಾರೆ.

ನನ್ನ ಮಗ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಮಗ ಅಪರಾಧ ಎಸಗಿದ ಪರಿಣಾಮವಾಗಿ, ಅದೇ ಸಮುದಾಯದ ಸುಮಾರು 60 ಕುಟುಂಬಗಳು ಸರೋಜಮ್ಮ ಮತ್ತು ಪವಿತ್ರಾ ಅವರಿಗೆ ಬಹಿಷ್ಕಾರ ಹಾಕಿದ್ದಾರೆ ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದ ವೇಳೆ 'ಅಲ್ಲಾಹು ಅಕ್ಬರ್' ಕೂಗಿದ ಮುಸ್ಲಿಂ ಮಹಿಳೆ

ಯಾರಾದರೂ ತಮ್ಮೊಂದಿಗೆ ಮಾತನಾಡಿದರೆ 1,000 ರೂಪಾಯಿ ದಂಡ ವಿಧಿಸುವುದಾಗಿ ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ. ಅಲ್ಲದೆ ತಮ್ಮ ಮನೆಗೆ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ತಾಯಿ ಮತ್ತು ಮಗಳು ಆರೋಪಿಸಿದ್ದಾರೆ.

ಇದಲ್ಲದೆ, ಅವರು ಗ್ರಾಮಕ್ಕೆ ಮರಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ನಮ್ಮ ಮನೆ ಕಳ್ಳತನವಾಗಿದೆ. ಗ್ರಾಮದೊಳಗೆ ಯಾರ ಬೆಂಬಲವೂ ಇಲ್ಲ ಎಂದ ಸರೋಜಮ್ಮ, ಕಾನೂನು ಬಾಹಿರವಾಗಿ ಬಹಿಷ್ಕಾರ ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಬಹಿಷ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಹಿಳೆಯರು ತಮ್ಮ ಗಮನಕ್ಕೆ ತಂದಿದ್ದಾರೆ. ನಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಇಂತಹ ಬಹಿಷ್ಕಾರದ ಕೃತ್ಯಗಳು ಕಾನೂನು ಬಾಹಿರ ಎಂದು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ತಹಶೀಲ್ದಾರ್, ಡಿವೈಎಸ್ಪಿ, ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪಿಡಿಒ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸುವಂತೆ ತಿಳಿಸಲಾಗಿದೆ. ಗ್ರಾಮದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ಬಹಿಷ್ಕಾರ ಹಾಕಿರುವ ಆರೋಪ ಸಾಬೀತಾದರೆ ಬಹಿಷ್ಕಾರಕ್ಕೆ ಕರೆ ನೀಡಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಗಡೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com