ಪ್ರಿಯಾಂಕ್ ಖರ್ಗೆ ಗೆ ರಾಜೀವ್ ಚಂದ್ರಶೇಖರ್ ಪತ್ರ: ರಾಜ್ಯದಲ್ಲಿ ಜಲ್ ಜೀವನ್ ಮಿಷನ್ ಜಾರಿಯ ಗತಿ ಬಗ್ಗೆ ಕಳವಳ

ಕೇಂದ್ರ ಜಲ ಶಕ್ತಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕರ್ನಾಟಕ ಸಚಿವ ಐಟಿ/ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಗೆ ಪತ್ರ ಬರೆದು ರಾಜ್ಯದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಜಾರಿ ವೇಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್TNIE
Updated on

ನವದೆಹಲಿ: ಕೇಂದ್ರ ಜಲ ಶಕ್ತಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕರ್ನಾಟಕ ಸಚಿವ ಐಟಿ/ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಗೆ ಪತ್ರ ಬರೆದು ರಾಜ್ಯದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಜಾರಿ ವೇಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಸಮಯಕ್ಕೆ ಸರಿಯಾಗಿ ಮಿಷನ್ ನ್ನು ಪೂರ್ಣಗೊಳಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಕರ್ನಾಟಕದಲ್ಲಿ ಇತ್ತೀಚೆಗೆ ಜೆಜೆಎಂ ಯೋಜನೆ ಪ್ರಗತಿ ಪರಿಶೀಲನೆಯಲ್ಲಿ ರಾಜ್ಯ ಯೋಜಿತ ಕ್ರಿಯಾ ಯೋಜನೆಯಲ್ಲಿ ಹಿಂದುಳಿದಿದೆ ಎಂದು ಪತ್ರದಲ್ಲಿ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಲೋಕಸಭೆ ಚುನಾವಣೆ: ನಿರ್ಮಲಾ ಸೀತಾರಾಮನ್ ಬೆಂಗಳೂರು ದಕ್ಷಿಣಕ್ಕೆ, ರಾಜೀವ್ ಚಂದ್ರಶೇಖರ್ ಸೆಂಟ್ರಲ್ ಗೆ; ತೇಜಸ್ವಿ ಸೂರ್ಯ ಎಲ್ಲಿಗೆ?

"2024 ರ ವೇಳೆಗೆ ಪ್ರತಿ ಗ್ರಾಮೀಣ ಮನೆಗಳಿಗೆ ಶುದ್ಧ ಟ್ಯಾಪ್ ನೀರು ಪೂರೈಕೆಗಾಗಿ ನಿಮ್ಮ ರಾಜ್ಯದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ನ್ನು ಸಮಯಕ್ಕೆ ಅನುಗುಣವಾಗಿ ಅನುಷ್ಠಾನಗೊಳಿಸುವ ನಿಮ್ಮ ಬದ್ಧತೆಗೆ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ಬಳಸುತ್ತೇನೆ. JJM ತನ್ನ ಅಂತಿಮ ಹಂತದಲ್ಲಿರುವುದರಿಂದ, ಮಿಷನ್ ಅಡಿಯಲ್ಲಿ ಪ್ರಗತಿಯ ಆದ್ಯತೆಯ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಉತ್ತಮವಾಗಿ ರೂಪಿಸಿದ ಕಾರ್ಯತಂತ್ರದ ಅಗತ್ಯವಿದೆ. ಕರ್ನಾಟಕ ರಾಜ್ಯದಲ್ಲಿನ ಜೆಜೆಎಂ ಪ್ರಗತಿಯ ಇತ್ತೀಚಿನ ಪರಿಶೀಲನೆ ರಾಜ್ಯ ಯೋಜಿತ ಕ್ರಿಯಾ ಯೋಜನೆಯಲ್ಲಿ ಹಿಂದುಳಿದಿದೆ ಎಂಬುದನ್ನು ಬಹಿರಂಗಪಡಿಸಿದೆ ಮತ್ತು ಸೂಕ್ತ ಮಟ್ಟದಲ್ಲಿ ಸಂಪೂರ್ಣ ಪರಿಶೀಲನೆ ಮತ್ತು ಸರಿಪಡಿಸುವ ಕ್ರಮಗಳ ಅಗತ್ಯವಿದೆ" ಎಂದು ಕೇಂದ್ರ ಸಚಿವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ವಿಭಜಕ ಶಕ್ತಿಗಳಿಗೆ ಉತ್ತೇಜನ: ಕೇರಳ ಸ್ಫೋಟ ಬಗ್ಗೆ ಹೇಳಿಕೆ ನೀಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇಸು ದಾಖಲು

ಜಲ ಜೀವನ್ ಮಿಷನ್ ಪ್ರಾರಂಭದಲ್ಲಿ, ಕರ್ನಾಟಕದಲ್ಲಿ 24.51 ಲಕ್ಷ (ಶೇ. 24.23) ಗ್ರಾಮೀಣ ಕುಟುಂಬಗಳು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿವೆ ಎಂದು ವರದಿಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. JJM ಅಡಿಯಲ್ಲಿ ಹೆಚ್ಚುವರಿ 49.96 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಟ್ಯಾಪ್ ವಾಟರ್ ಸಂಪರ್ಕಗಳನ್ನು ಒದಗಿಸಲಾಗಿದೆ ಮತ್ತು ಫೆಬ್ರವರಿ 5, 2024 ರ ಹೊತ್ತಿಗೆ, ಕರ್ನಾಟಕದ 101.16 ಲಕ್ಷ ಗ್ರಾಮೀಣ ಕುಟುಂಬಗಳಲ್ಲಿ, ಸುಮಾರು 74.48 ಲಕ್ಷ (ಶೇ. 73.63) ಕುಟುಂಬಗಳು ನಲ್ಲಿ ನೀರಿನ ಸರಬರಾಜನ್ನು ಹೊಂದಿವೆ ಎಂದು ವರದಿಯಾಗಿದೆ, ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com