ಮೂರು ತಿಂಗಳ ನಂತರ ಮೇಲ್ಮನೆಯಲ್ಲಿ ಹಿಂದೂ ಧಾರ್ಮಿಕ ದತ್ತಿ ಕಾಯ್ದೆಗೆ ಅನುಮೋದನೆ- ಡಿಕೆ ಶಿವಕುಮಾರ್

ವಿಧಾನಪರಿಷತ್ತಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಿಂದ ತಿರಸ್ಕೃತಗೊಂಡಿರುವ ಹಿಂದೂ ಧಾರ್ಮಿಕ ದತ್ತಿ ವಿಧೇಯಕಕ್ಕೆ ಮೂರು ತಿಂಗಳ ನಂತರ ಮೇಲ್ಮನೆಯಲ್ಲಿ ಕಾಂಗ್ರೆಸ್ ಗೆ ಮತ್ತೆ ಬಹುಮತ ಬಂದಾಗ ಅನುಮೋದನೆ ದೊರೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್EXPRESS

ಶಿವಮೊಗ್ಗ: ವಿಧಾನಪರಿಷತ್ತಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಿಂದ ತಿರಸ್ಕೃತಗೊಂಡಿರುವ ಹಿಂದೂ ಧಾರ್ಮಿಕ ದತ್ತಿ ವಿಧೇಯಕಕ್ಕೆ ಮೂರು ತಿಂಗಳ ನಂತರ ಮೇಲ್ಮನೆಯಲ್ಲಿ ಕಾಂಗ್ರೆಸ್ ಗೆ ಮತ್ತೆ ಬಹುಮತ ಬಂದಾಗ ಅನುಮೋದನೆ ದೊರೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ಹೇಳಿದ್ದಾರೆ.

ಇಲ್ಲಿನ ಅಲ್ಲಮ ಪ್ರಭು ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಡಿಕೆ ಶಿವಕುಮಾರ್, ಅರ್ಚಕರ ಪ್ರಭಾವದಿಂದ ಭಕ್ತರು ಕಲ್ಲಿನಲ್ಲೂ ಶಿವನನ್ನು ಕಾಣುತ್ತಾರೆ. “ನಾವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ (ತಿದ್ದುಪಡಿ) ಮಸೂದೆ ಮಂಡಿಸಿದ್ದೇವು. ಸರ್ಕಾರ ಈ ಶಾಸನ ಮೂಲಕ ದೊಡ್ಡ ದೇವಾಲಯಗಳಿಂದ ಬರುವ ಆದಾಯದ ಶೇ.10 ರಷ್ಟನ್ನು ಅರ್ಚಕರಿಗೆ ಸಂಬಳ ನೀಡಲು, ವಿಮಾ ರಕ್ಷಣೆ, ಮತ್ತು ಅವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲು ಬಯಸಿತ್ತು. ಆದರೆ, ದೇವಸ್ಥಾನ ಮತ್ತು ಧರ್ಮದ ಪರ ವಾದಿಸುವ ಬಿಜೆಪಿ ಮತ್ತು ಜೆಡಿಎಸ್‌ಗಳು ಪರಿಷತ್ತಿನಲ್ಲಿ ಮಸೂದೆಯನ್ನು ಸೋಲಿಸಿದವು. ಮೂರು ತಿಂಗಳಲ್ಲಿ ಮೇಲ್ಮನೆಯಲ್ಲಿ ಬಹುಮತ ಪಡೆದು ಮಸೂದೆ ಮಂಡನೆ ಮಾಡುತ್ತೇವೆ ಎಂದು ಹೇಳಿದರು.

ಡಿಸಿಎಂ ಡಿಕೆ ಶಿವಕುಮಾರ್
ಹಿಂದೂ ಧಾರ್ಮಿಕ ದತ್ತಿ ಮಸೂದೆಗೆ ವಿಧಾನ ಪರಿಷತ್​ನಲ್ಲಿ ಸೋಲು: ಸರ್ಕಾರಕ್ಕೆ ಮುಖಭಂಗ; ಜೈ ಶ್ರೀರಾಮ ಎಂದ ಬಿಜೆಪಿ

ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದ್ದು, ಇದಕ್ಕೆ ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ. ಬಡವರನ್ನು ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಲು ಸರ್ಕಾರ ಅನುಮತಿ ನೀಡುವುದಿಲ್ಲ ಅರಣ್ಯ ಹಕ್ಕು ಕಾಯ್ದೆಯಡಿ ಪ್ರಾಥಮಿಕವಾಗಿ 75 ವರ್ಷಗಳಿಂದ ಪ್ರಾಮಾಣಿಕ ಜೀವನೋಪಾಯಕ್ಕಾಗಿ ಅರಣ್ಯ ಭೂಮಿಯಲ್ಲಿ ವಾಸಿಸುವ ನಿವಾಸಿಗಳು ಅರಣ್ಯ ಹಕ್ಕುಗಳನ್ನು ಪಡೆಯಬಹುದು ಎಂದು ಅವರು ಹೇಳಿದರು. ರಾಜ್ಯ ಸರ್ಕಾರ ಬಡ ಜನರನ್ನು ಅರಣ್ಯದಿಂದ ಸ್ಥಳಾಂತರಿಸುವುದಿಲ್ಲ, ಮುಂದೆ ಶರಾವತಿ ಯೋಜನೆ ಸಂತ್ರಸ್ತರ ಹಿತಾಸಕ್ತಿ ಕಾಪಾಡುವುದಾಗಿ ಭರವಸೆ ನೀಡಿದರು.

ಮತ್ತೊಂದೆಡೆ ಹಾಸನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಲ್ಮನೆಯಲ್ಲಿ ಹಿಂದೂ ಧರ್ಮದಾಯಿ ದತ್ತಿ ಕಾಯ್ದೆ ಸೋಲಿಗೆ ಪ್ರಮುಖವಾಗಿ ಬಿಜೆಪಿಯನ್ನು ದೂಷಿಸಿದರು. ಈ ವಿಚಾರದಲ್ಲಿ ಸುಳ್ಳು ಮಾಹಿತಿಯನ್ನು ಕೇಸರಿ ಪಕ್ಷ ಹರಡುತ್ತಿದೆ ಎಂದು ಆರೋಪಿಸಿದರು.

ಅಧಿಕ ಆದಾಯ ಬರುವ ದೇವಸ್ಥಾನಗಳ ಹಣದಲ್ಲಿ ಅಲ್ಪ ಆದಾಯ ಬರುವ ದೇವಾಲಯಗಳ ಅರ್ಚಕರಿಗೆ ವಿಮಾ ಸೌಲಭ್ಯ, ಅವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಸದುದ್ದೇಶದೊಂದಿಗೆ ನಮ್ಮ ಸರ್ಕಾರವು ತಿದ್ದುಪಡಿ ವಿಧೇಯಕವನ್ನು ಮಂಡನೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com