ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ಅಂಜನಾದ್ರಿ ಭೂಮಿಗೆ ಡಿಮ್ಯಾಂಡ್‌ ಶುರು! ಗರಿಗೆದರಿದ ರಿಯಲ್‌ ಎಸ್ಟೇಟ್‌; ಬೆಲೆ ಭಾರೀ ಏರಿಕೆ

ರಾಮಮಂದಿರದ ಉದ್ಘಾಟನೆ ಬೆನ್ನಲ್ಲೇ ರಾಮಭಕ್ತ ಹನುಮಂತನ ಜನ್ಮಸ್ಥಳವಾಗಿರುವ ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ಭೂಮಿಯ ಬೆಲೆ ಗಗನಕ್ಕೇರಿದೆ.
ಅಂಜನಾದ್ರಿ
ಅಂಜನಾದ್ರಿ

ಕೊಪ್ಪಳ: ರಾಮಮಂದಿರದ ಉದ್ಘಾಟನೆ ಬೆನ್ನಲ್ಲೇ ರಾಮಭಕ್ತ ಹನುಮಂತನ ಜನ್ಮಸ್ಥಳವಾಗಿರುವ ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ಭೂಮಿಯ ಬೆಲೆ ಗಗನಕ್ಕೇರಿದೆ.

ಅಂಜನಾದ್ರಿಯನ್ನು ಧಾರ್ಮಿಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದ್ದು, ಬೆಟ್ಟದಲ್ಲಿರುವ ದೇವಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ರೂ.100 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು. ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರ ಕೂಡ ಬೆಟ್ಟವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲು ಆಸಕ್ತಿ ತೋರಿಸಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇಗುಲಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಜನಾದ್ರಿ ಮತ್ತು ಅಯೋಧ್ಯೆ ನಡುವೆ ನೇರ ರೈಲು ಸಂಪರ್ಕವನ್ನು ಕಲ್ಪಿಸುವುದಾಗಿ ಹೇಳಿದ್ದರು. ಸರ್ಕಾರದ ಈ ಘೋಷಣೆ ಈ ಪ್ರದೇಶದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಹಾಗೂ ಉದ್ಯೋಗವಕಾಶ ಸೃಷ್ಟಿಸುವ ನಿರೀಕ್ಷೆಗಳನ್ನು ಹುಟ್ಟಿಸಿದೆ. ಹೀಗಾಗಿ ಈ ಪ್ರದೇಶದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಗರಿಗೆದರಿದ್ದು, ಇಲ್ಲಿನ ಭೂಮಿಗೆ ಭಾರೀ ಬೇಡಿಕೆ ಬಂದಿದೆ. ಇಲ್ಲಿನ ಭೂಮಾಲೀಕರು ಭೂಮಿಯ ಬೆಲೆಯನ್ನು ಶೇ.70ರಷ್ಟು ಹೆಚ್ಚಳ ಮಾಡಿದ್ದಾರೆಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಆನೆಗುಂದಿ ಗ್ರಾಮದಲ್ಲಿ ಕೆಲ ತಿಂಗಳ ಹಿಂದೆ 12 ಲಕ್ಷ ರೂ.ಗೆ ಎಕರೆ ಜಮೀನು ಲಭ್ಯವಿತ್ತು. ಆದರೆ ಅಯೋಧ್ಯೆ ದೇವಾಲಯ ಉದ್ಘಾಟನೆ ಮತ್ತು ಅಂಜನಾದ್ರಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳು ಪ್ರಾರಂಭವಾದ ನಂತರ, ಜಮೀನು ಮಾಲೀಕರು ಎಕರೆಗೆ 20-25 ಲಕ್ಷ ರೂನಂತೆ ಹೆಚ್ಚಳ ಮಾಡಿದ್ದಾರೆ. ಆನೆಗುಂದಿ ಸಮೃದ್ಧ ಫಲವತ್ತಾದ ಭೂಮಿಯನ್ನು ಹೊಂದಿದ್ದು, ಕೃಷಿ ಮತ್ತು ತೋಟಗಾರಿಕೆಗೆ ಈ ಭೂಮಿ ಸೂಕ್ತವಾಗಿದೆ ಎಂದು ಸ್ಥಳೀಯ ಉದ್ಯಮಿಯೊಬ್ಬರು ಹೇಳಿದ್ದಾರೆ.

ಅಂಜನಾದ್ರಿ
ಅಯೋಧ್ಯೆ-ಅಂಜನಾದ್ರಿ ನಡುವೆ ರೈಲು ಸಂಪರ್ಕ ಕಲ್ಪಿಸಲು ಚಿಂತನೆ

ಪಂಚಾಯತ್ ಅಧಿಕಾರಿಗಳು ಮಾತನಾಡಿ, ಮುಂಬೈ ಮತ್ತು ದೇಶದ ಇತರ ಭಾಗಗಳಿಂದ ಹಲವಾರು ಜನರು ಇತ್ತೀಚೆಗೆ ಅಂಜನಾದ್ರಿಗೆ ಭೇಟಿ ನೀಡಿ ಭೂಮಿಯ ಬೆಲೆಗಳನ್ನು ಪರಿಶೀಲಿಸಿದ್ದರು ಎಂದು ಹೇಳಿದ್ದಾರೆ.

ಹೊರಗಿನಿಂದ ಬರುತ್ತಿರುವ ಜನರು ಭೂಮಿ ಖರೀದಿಗೆ ಆಸಕ್ತಿ ತೋರುತ್ತಿದ್ದು, ಹೀಗಾಗಿ ಸ್ಥಳೀಯರು ಭೂಮಿಯ ಬೆಲೆಯನ್ನು ಹೆಚ್ಚಳ ಮಾಡುತ್ತಿದ್ದಾರೆ. ಉತ್ತರ ಭಾರತದ ರಾಜ್ಯಗಳಿಂದ ಪ್ರತಿ ವಾರ ಸಾವಿರಾರು ಪ್ರವಾಸಿಗರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com