ಹಂಪಿಯಲ್ಲಿ ವಿಶ್ರಾಂತಿ ಕೊಠಡಿ, ಕೆಫೆ ಸೇರಿ ವಸತಿ ಸೌಲಭ್ಯಗಳ ಒದಗಿಸಲು ಎಎಸ್ಐ ಮುಂದು!

ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ, ಕೆಫೆ, ರೆಸ್ಟೋರೆಂಟ್ ಸೇರಿದಂತೆ ಇತರೆ ವಸತಿ ಸೌಲಭ್ಯಗಳ ಒದಗಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮುಂದಾಗಿದೆ.
ಹಂಪಿಯಲ್ಲಿ ಆರಂಭವಾಗಿರುವ ಕೆಫೆ ಸೌಲಭ್ಯ.
ಹಂಪಿಯಲ್ಲಿ ಆರಂಭವಾಗಿರುವ ಕೆಫೆ ಸೌಲಭ್ಯ.
Updated on

ಹೊಸಪೇಟೆ: ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ, ಕೆಫೆ, ರೆಸ್ಟೋರೆಂಟ್ ಸೇರಿದಂತೆ ಇತರೆ ವಸತಿ ಸೌಲಭ್ಯಗಳ ಒದಗಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮುಂದಾಗಿದೆ.

ವಿಜಯ ವಿಠ್ಠಲ ದೇವಸ್ಥಾನದ ಆವರಣದ ಬಳಿ ಎರಡು ಸ್ಥಳಗಳಲ್ಲಿ ಮತ್ತು ಉಗ್ರ ನರಸಿಂಹ ದೇವಸ್ಥಾನದ ಬಳಿ ಈ ಸೌಲಭ್ಯಗಳ ಒದಗಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಹಂಪಿಯಲ್ಲಿ ಸಣ್ಣ ಸಣ್ಣ ಅಂಗಡಿಗಳಿದ್ದು, ಅಲ್ಲಿ, ಟೀ, ಕಾಫಿ, ತೆಂಗಿನಕಾಯಿ ಸೇರಿದಂತೆ ಇತರೆ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದೀಗ ವಸತಿ ಸೌಲಭ್ಯಕ್ಕಾಗಿ ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೆ ಚಿಂತನೆ ನಡೆಸುತ್ತಿದೆ.

ಸೇವೆಗಳ ಒದಗಿಸಲು ಅಗತ್ಯವಿರುವ ಪ್ರಕ್ರಿಯೆಗಳನ್ನು ಈಗಾಗಲೇ ಆಡಳಿತ ಮಂಡಳಿಗಳು ಪೂರ್ಣಗೊಳಿಸಿದೆ ಎಂದು ತಿಳಿದುಬಂದಿದೆ. ಇದೀಗ ಕ್ರಿಸ್ ಮಸ್ ಹಾಗೂ ಹೊಸ ವರ್ಷದ ರಜಾ ದಿನಗಳು ಇರುವ ಹಿನ್ನೆಲೆಯಲ್ಲಿ ಹಂಪಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಪ್ರವಾಸಿಗರಿಗೆ ತಿಂಡಿ ತಿನಿಸು ಹಾಗೂ ಪಾನೀಯಗಳ ನೀಡಲು ಆಡಳಿತ ಮಂಡಳಿ ಮುಂದಾಗಿದೆ ಎಂದು ತಿಳಿದುಬಂದಿದೆ.

ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅನುಕೂಲಕರವಾಗುವಂತೆ ಈಗಾಗಲೇ ಎರಡು ಕೆಫೆಗಳನ್ನು ತೆರೆಯಲಾಗಿದ್ದು, ಇಂತಹ ಮತ್ತಷ್ಟು ಕೆಫೆಗಳ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಎಎಸ್‌ಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಕೆಫೆಯಲ್ಲಿ ಒಂದು ಗ್ಲಾಸ್ ಟೀ ಅಥವಾ ಕಾಫಿ ಬೆಲೆ ರೂ.10-20ಗಳು ಇರುತ್ತವೆ. ಇದಲ್ಲದೆ, ಸಮೋಸಾ, ಪಫ್ಸ್, ಕೂಲ್ ಡ್ರಿಂಕ್ಸ್ ಮತ್ತು ನೀರಿನ ಬಾಟಲಿಗಳನ್ನು ನೀಡಲಾಗುತ್ತದೆ. ವಸತಿ ಸೌಲಭ್ಯ ಕುರಿತ ಎಎಸ್ಐ ಅಂತಿಮ ನಿರ್ಧಾರಗಳನ್ನು ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ನಿರ್ಧಾರಗಳು ಅಂತಿಮಗೊಳ್ಳುತ್ತಿದ್ದಂತೆಯೇ ಕೊಠಡಿಗಳ ನಿರ್ಮಾಣ ಮಾಡಲಾಗುವುದು. ಈ ಕೊಠಡಿಗಳಲ್ಲಿ ಎಎಸ್ಐ ನಿಯಮಗಳ ಅನುಸಾರ ಶೌಚಾಲಯ, ಹಾಸಿಗೆ ಸೇರಿದೆ ಇತರೆ ವ್ಯವಸ್ಥೆಗಳ ಒದಗಿಸಲಾಗುವುದು. ಹಂಪಿ ವಾಸ್ತುಶಿಲ್ಪ ಶೈಲಿಯಲ್ಲಿ ಈ ಕೊಠಡಿಗಳ ನಿರ್ಮಾಣ ಇರಲಿದೆ. ರೆಸ್ಟೋರೆಂಟ್ ಗಳನ್ನು ಕೂಡ ಸ್ಥಾಪಿಸಲಾಗುತ್ತಿದ್ದು, ಇಲ್ಲಿ ಆರೋಗ್ಯಕರ ಆಹಾರಗಳ ಒದಗಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಎಎಸ್ಐ ನಿರ್ಧಾರ ಸ್ವಾಗತಾರ್ಹವಾಗಿದೆ. ಇದರಿಂತ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಲಿದೆ ಎಂದು ಪ್ರವಾಸಿಗರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com