ನಾನೂ ರಾಮಾಂಜನೇಯ ಭಕ್ತ, ರಾಮಮಂದಿರ ನಿರ್ಮಾಣಕ್ಕೆ ಎಂದಿಗೂ ವಿರೋಧವಿಲ್ಲ: ಸಿಎಂ ಸಿದ್ದರಾಮಯ್ಯ

ನಾನೂ ಕೂಡ ರಾಮಾಂಜನೇಯ ಭಕ್ತ (ರಾಮ ಮತ್ತು ಹನುಮಂತನ ಭಕ್ತ) ಆಗಿದ್ದು, ರಾಮಮಂದಿರ ನಿರ್ಮಾಣಕ್ಕೆ ಎಂದಿಗೂ ವಿರೋಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದರು.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ನಾನೂ ಕೂಡ ರಾಮಾಂಜನೇಯ ಭಕ್ತ (ರಾಮ ಮತ್ತು ಹನುಮಂತನ ಭಕ್ತ) ಆಗಿದ್ದು, ರಾಮಮಂದಿರ ನಿರ್ಮಾಣಕ್ಕೆ ಎಂದಿಗೂ ವಿರೋಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದರು.

ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರುದ್ಧವಿಲ್ಲ. ದೇವಸ್ಥಾನ ಕಟ್ಟುವುದಕ್ಕೂ ನನ್ನ ವಿರೋಧ ಇಲ್ಲ. ನಮ್ಮ ಊರಿನಲ್ಲಿ ರಾಮಮಂದಿರ ಕಟ್ಟಿಸಿದ್ದಾರೆ. ನಾನು ಶ್ರೀರಾಮನನ್ನು ಎಂದಿಗೂ ವಿರೋಧಿಸುವುದಿಲ್ಲ. ನಾನು ರಾಮಾಂಜನೇಯ ಭಕ್ತ. ನಾನು ನನ್ನ ಊರಿನಲ್ಲಿ ಬಿಡುವಿದ್ದಾಗಲೆಲ್ಲ ಅನೇಕ ಸಂಕೀರ್ತನೆಗಳು ಮತ್ತು ಭಜನೆಗಳಲ್ಲಿ (ಭಕ್ತಿಗೀತೆಗಳು) ಭಾಗವಹಿಸಿದ್ದೇನೆ. ನಾನು ರಾಮನ ಪರವಾಗಿದ್ದೇವೆ. ರಾಮ ಮಂದಿರವನ್ನು ಕಟ್ಟಿರುವುದು ಬಹಳ ಸಂತೋಷ ವಿಷಯ ಎಂದು ಹೇಳಿದರು.

ಇದೇ ವೇಳೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಎಲ್ಲಾ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, "ಅದು ಬೇರೆ ಪ್ರಶ್ನೆ'ಯಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com