ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 6 ಲಕ್ಷ ಮಂದಿಗೆ ಬಿಬಿಎಂಪಿ ನೊಟೀಸ್

ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕೆಲವು ದಿನಗಳ ಹಿಂದೆ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಮತ್ತೆ 6 ಲಕ್ಷ ಮಂದಿಗೆ ಬಾಕಿ ತೆರಿಗೆ ಪಾವತಿಸುವಂತೆ ಸಂದೇಶ ಕಳುಹಿಸಿದೆ.
ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ
ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ

ಬೆಂಗಳೂರು: ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕೆಲವು ದಿನಗಳ ಹಿಂದೆ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಮತ್ತೆ 6 ಲಕ್ಷ ಮಂದಿಗೆ ಬಾಕಿ ತೆರಿಗೆ ಪಾವತಿಸುವಂತೆ ಸಂದೇಶ ಕಳುಹಿಸಿದೆ.

ಸುಮಾರು 500 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ 6 ಲಕ್ಷ ಮಂದಿಗೆ ಸಂದೇಶ ಕಳುಹಿಸಲಾಗಿದೆ. ಆದಾಗ್ಯೂ ಅವರು ತೆರಿಗೆ ಬಾಕಿ ಪಾವತಿ ಮಾಡದಿದ್ದರೆ ಈ ಸಂದೇಶದಲ್ಲಿ ಉಲ್ಲೇಖಿಸಿರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್​ ತಿಳಿಸಿದ್ದಾರೆ.

ಈ ಅಪ್ಲಿಕೇಷನ್ ಸಂಖ್ಯೆಯ (ನಿರ್ದಿಷ್ಟ ಅರ್ಜಿ ಸಂಖ್ಯೆಯನ್ನು ಉಲ್ಲೇಖಿಸಿ) ಆಸ್ತಿಯ ತೆರಿಗೆಯನ್ನು ಪಾವತಿ ಮಾಡಲಾಗಿಲ್ಲ. ದಯವಿಟ್ಟು ಗಮನಿಸಿ, ತೆರಿಗೆ ಪಾವತಿಸದೇ ಇರುವುದರಿಂದ ನಿಮ್ಮನ್ನು ‘ಬಿಬಿಎಂಪಿ ಕಾಯ್ದೆ 2020’ರ ಅಡಿಯಲ್ಲಿ ಕ್ರಮಕ್ಕೆಒಳಪಡಿಸಬೇಕಾಗುತ್ತದೆ.

ಇದರಲ್ಲಿ ಚರಾಸ್ತಿಗಳ ಸೀಲಿಂಗ್, ಮುಟ್ಟುಗೋಲು, ಸಬ್-ರಿಜಿಸ್ಟ್ರಾರ್ ನೀಡಿದ ಎನ್ಕಂಬರೆನ್ಸ್ ಸರ್ಟಿಫಿಕೇಟ್ ವಶಪಡಿಸಿಕೊಳ್ಳುವಿಕೆ, ಹಿಂಪಡೆಯುವಿಕೆ, ಕ್ರಿಮಿನಲ್ ಪ್ರಕರಣ ದಾಖಲಿಸುವುದು ಸೇರಿವೆ. ತೆರಿಗೆ ಪಾವತಿಸಲು ಈ ಲಿಂಕ್ https://bbmptax.karnataka.gov.in/ ಕ್ಲಿಕ್ ಮಾಡಿ. ಯಾವುದೇ ಸ್ಪಷ್ಟೀಕರಣಕ್ಕಾಗಿ ನಿಮ್ಮ ಸ್ಥಳೀಯ ವಾರ್ಡ್ ಅಥವಾ ಎಆರ್​ಒ ಕಚೇರಿಯನ್ನು ಸಂಪರ್ಕಿಸಿ. ಈಗಾಗಲೇ ತೆರಿಗೆ ಪಾವತಿಸಿದ್ದರೆ ದಯವಿಟ್ಟು ನಿರ್ಲಕ್ಷಿಸಿ’ ಎಂದು ಬಿಬಿಎಂಪಿಯು ತೆರಿಗೆದಾರರಿಗೆ ಕಳುಹಿಸಿದ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೂ ಮುನ್ನ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಪೌರ ಸಂಸ್ಥೆಯಲ್ಲಿ 19 ಲಕ್ಷ ಆಸ್ತಿಗಳಿದ್ದು, ಕೇವಲ 15 ಲಕ್ಷ ಮಾಲೀಕರು ಮಾತ್ರ ತೆರಿಗೆ ಪಾವತಿಸಿದ್ದಾರೆ ಎಂದು ತಿಳಿಸಿದ್ದಾರೆ. 2023-2024ರ ಹಣಕಾಸು ವರ್ಷದಲ್ಲಿ 4,189 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಬಿಬಿಎಂಪಿ ಹೊಂದಿರುವುದರಿಂದ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಆರ್ಥಿಕ ವರ್ಷ ಕೊನೆಗೊಳ್ಳಲು ಕೇವಲ ಮೂರು ತಿಂಗಳುಗಳು ಉಳಿದಿವೆ, 2022-2023ರಲ್ಲಿ ಪಾಲಿಕೆಯು 3,339 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com