ಪ್ರಮುಖ ಕಾರಣವೊಂದಕ್ಕೆ ಗಮನ ಸೆಳೆದ ಬಿಗ್ ಬಾಸ್ ಕನ್ನಡ; ಕರ್ನಾಟಕ ಸರ್ಕಾರದಿಂದಲೂ ಪ್ರಶಂಸೆ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಈ ಬಾರಿ ಪ್ರಮುಖ ಕಾರಣವೊಂದಕ್ಕೆ ಗಮನಸೆಳೆದಿದೆ. ಮುಟ್ಟಿನ ಕಪ್ ಬಳಕೆಯನ್ನು ಉತ್ತೇಜಿಸುತ್ತಿರುವ ರಾಜ್ಯ ಸರ್ಕಾರ ಬಿಗ್ ಬಾಸ್ ಕನ್ನಡ ಶೋ ಮೂಲಕ ಜಾಗೃತಿ ಮೂಡಿಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದೆ. 
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ನಟಿ ಸಪ್ತಮಿ ಗೌಡ
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ನಟಿ ಸಪ್ತಮಿ ಗೌಡ

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಈ ಬಾರಿ ಪ್ರಮುಖ ಕಾರಣವೊಂದಕ್ಕೆ ಗಮನಸೆಳೆದಿದೆ. ಮುಟ್ಟಿನ ಕಪ್ ಬಳಕೆಯನ್ನು ಉತ್ತೇಜಿಸುತ್ತಿರುವ ರಾಜ್ಯ ಸರ್ಕಾರ ಬಿಗ್ ಬಾಸ್ ಕನ್ನಡ ಶೋ ಮೂಲಕ ಜಾಗೃತಿ ಮೂಡಿಸಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದೆ. 

‘ಶುಚಿ-ನನ್ನ ಮೈತ್ರಿ ಮೆನ್ಸ್ಟ್ರುವಲ್ ಕಪ್’ ಕಾರ್ಯಕ್ರಮದ ಅಡಿಯಲ್ಲಿ ಮುಟ್ಟಿನ ಕಪ್ ಬಳಕೆಯನ್ನು ಕರ್ನಾಟಕ ಸರ್ಕಾರ ಉತ್ತೇಜಿಸುತ್ತಿದೆ. ‘ಶುಚಿ: ನನ್ನ ಮೈತ್ರಿ ಮುಟ್ಟಿನ ಕಪ್’ ಅಭಿಯಾನದ ರಾಯಭಾರಿ ಆಗಿರುವ ಸಪ್ತಮಿ ಗೌಡ ಅವರು ಬಿಗ್​ಬಾಸ್ ಮನೆಗೆ ಆಗಮಿಸಿದ್ದರು. 

ಋತುಸ್ರಾವದ ಸಮಯದಲ್ಲಿ ಪ್ಯಾಡ್ ಬದಲಿಗೆ ಮುಟ್ಟಿನ ಕಪ್ ಬಳಕೆ ಮಾಡುವುದು ಹೆಚ್ಚು ಆರೋಗ್ಯಕರ ಎಂಬುದರ ಜೊತೆಗೆ ಕಪ್ ಬಳಕೆಯಿಂದ ಆಗಬಹುದಾದ ಇನ್ನಷ್ಟು ಲಾಭಗಳ ಕುರಿತು ಮನದಟ್ಟು ಮಾಡಿದರು.

ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಮುಟ್ಟಿನ ಕಪ್ ಬಗ್ಗೆ ಜಾಗೃತಿ ಮೂಡಿಸಿರುವುದು ಶ್ಲಾಘನೀಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

'ಮುಟ್ಟಿನ ಅವಧಿಯಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದೆ ಬಂದಿರುವ ಕಲರ್ಸ್ ಕನ್ನಡ ಮಾಧ್ಯಮವನ್ನು ನಾನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಕಾಂತಾರ’ ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಟಿ ಸಪ್ತಮಿ ಗೌಡ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ' ಎಂದು ಹೇಳಿದರು.

ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿಯಾಗಿ ಆಹ್ವಾನಿತರಾದ ಸಪ್ತಮಿ ಗೌಡ ಅವರು, ರಾಜ್ಯ ಸರ್ಕಾರದ ಉಪಕ್ರಮದ ನಂತರ ಶೇ 80 ರಷ್ಟು ಯುವತಿಯರು ಈಗಾಗಲೇ ಮುಟ್ಟಿನ ಕಪ್‌ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ ಎಂದರು. 
ಈ ಸಂಚಿಕೆಯನ್ನು ಡಿಸೆಂಬರ್ 30 ರಂದು ಪ್ರಸಾರ ಮಾಡಲಾಗಿದೆ.

'ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ಯಾಡ್‌ಗಳ ಬಳಕೆಯಿಂದ ಮುಟ್ಟಿನ ಕಪ್‌ ಬಳಕೆಗೆ ಮುಂದಾಗುವುದು ಉತ್ತಮ ಪ್ರಯತ್ನವಾಗಿದೆ. ನಾನು ಈ ಕಾರ್ಯಕ್ರಮಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿದ್ದೇನೆ' ಎಂದ ಸಪ್ತಮಿ, ಮಹಿಳಾ ಸ್ಪರ್ಧಿಗಳಿಗೆ ಮುಟ್ಟಿನ ಕಪ್‌ಗಳನ್ನು ವಿತರಿಸಿದರು.

'ನಾವು ಅವುಗಳನ್ನು ಬಳಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು'  ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com