ಡಿಸಿಎಂ ಡಿ ಕೆ ಶಿವಕುಮಾರ್ ಆದೇಶ ನೀಡಿ ಒಂದು ತಿಂಗಳಾದರೂ ದುರಸ್ತಿ ಕಾಣದ ಎಸ್ ಪಿ ರೋಡ್!

ರಾಜಧಾನಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಳೆದ ಡಿಸೆಂಬರ್ 2 ರಂದು ನಡೆದ ತಮ್ಮ ನಗರ ಪ್ರದಕ್ಷಿಣೆ ವೇಳೆ ದಾಸಪ್ಪ ಆಸ್ಪತ್ರೆ ಪಕ್ಕದಲ್ಲಿರುವ ಪೈಲ್ವಾನ್ ಎಂ ಕೃಷ್ಣಾ ರಸ್ತೆಯ ರಸ್ತೆ ಗುಂಡಿಗಳನ್ನು ಸರಿಪಡಿಸಲು ಮತ್ತು ದುರಸ್ತಿ ಮಾಡಲು ಬಿಬಿಎಂಪಿಗೆ ಸೂಚಿಸಿದ್ದರು.
ಎಸ್ ಪಿ ರಸ್ತೆಯ ದಯನೀಯ ಸ್ಥಿತಿಯಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಸಂಚಾರಕ್ಕೆ ಹರಸಾಹಸ ಪಡುವ ಸ್ಥಿತಿ
ಎಸ್ ಪಿ ರಸ್ತೆಯ ದಯನೀಯ ಸ್ಥಿತಿಯಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಸಂಚಾರಕ್ಕೆ ಹರಸಾಹಸ ಪಡುವ ಸ್ಥಿತಿ

ಬೆಂಗಳೂರು: ರಾಜಧಾನಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಳೆದ ಡಿಸೆಂಬರ್ 2 ರಂದು ನಡೆದ ತಮ್ಮ ನಗರ ಪ್ರದಕ್ಷಿಣೆ ವೇಳೆ ದಾಸಪ್ಪ ಆಸ್ಪತ್ರೆ ಪಕ್ಕದಲ್ಲಿರುವ ಪೈಲ್ವಾನ್ ಎಂ ಕೃಷ್ಣಾ ರಸ್ತೆಯ ರಸ್ತೆ ಗುಂಡಿಗಳನ್ನು ಸರಿಪಡಿಸಲು ಮತ್ತು ದುರಸ್ತಿ ಮಾಡಲು ಬಿಬಿಎಂಪಿಗೆ ಸೂಚಿಸಿದ್ದರು. ಅದಾಗಿ ಭರ್ತಿ ಒಂದು ತಿಂಗಳು ಕಳೆದರೂ ರಸ್ತೆಯ ಸ್ಥಿತಿ ಹಾಗೆಯೇ ಇದೆ. ಇಲ್ಲಿ ಕುತೂಹಲಕಾರಿ ವಿಷಯವೆಂದರೆ ಪಾಲಿಕೆ ಕೇಂದ್ರ ಕಚೇರಿಯು ಈ ಸ್ಥಳದಿಂದ ಕೆಲವೇ ನಿಮಿಷಗಳ ದೂರದಲ್ಲಿರುವುದು. 

ಎಸ್ಪಿ ರಸ್ತೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಮೇಶ ಧೋಕಾ, ಹೆಚ್ಚಿನ ದಟ್ಟಣೆಯಿಂದಾಗಿ ರಸ್ತೆಯು ದೀರ್ಘಕಾಲ ಕೆಟ್ಟ ಸ್ಥಿತಿಯಲ್ಲಿದೆ. ಹದಗೆಟ್ಟ ರಸ್ತೆಯಿಂದ ಟ್ರಾಫಿಕ್ ಜಾಮ್ ಉಂಟಾಗಿ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. 

ಈ ಹಿಂದೆ ಅಧಿಕಾರಿಗಳಿಗೆ ಹಲವು ಪತ್ರಗಳನ್ನು ಬರೆದಿದ್ದೇನೆ. ಸಮಸ್ಯೆಯ ಬಗ್ಗೆ ಪರಿಶೀಲಿಸುವಂತೆ ನಾವು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದೇವೆ, ಆದರೆ ವಿಷಯವು ಬಗೆಹರಿದಿಲ್ಲ ಎಂದು ಧೋಕಾ ಹೇಳಿದರು. ದಕ್ಷಿಣ ವಿಭಾಗದ ಪ್ರಮುಖ ರಸ್ತೆಗಳ ಕಾರ್ಯಪಾಲಕ ಇಂಜಿನಿಯರ್ ಸಾವಿತ್ರಿ ಅಕ್ಕಿ, ಈ ರಸ್ತೆಗಳು ಬಿಬಿಎಂಪಿ ವಾರ್ಡ್‌ಗೆ ಬರುತ್ತವೆ. ಈಗ ಅಧಿಕಾರಿಗಳು ಪ್ರಮುಖ ರಸ್ತೆಗಳ ವಿಭಾಗವನ್ನು ಅದರ ಅಧೀನಕ್ಕೆ ತೆಗೆದುಕೊಳ್ಳುವಂತೆ ಪತ್ರ ಬರೆದು ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲು ಪ್ರಸ್ತಾಪಿಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com