ಅಂಚೆಚೀಟಿಗಳ ಹಬ್ಬದಲ್ಲಿ ಪುನೀತ್ ರಾಜ್ ಕುಮಾರ್ ಛಾಯಾಚಿತ್ರವಿರುವ ಲಕೋಟೆ ಬಿಡುಗಡೆ
ಅಂಚೆಚೀಟಿಗಳ ಹಬ್ಬದಲ್ಲಿ ಪುನೀತ್ ರಾಜ್ ಕುಮಾರ್ ಛಾಯಾಚಿತ್ರವಿರುವ ಲಕೋಟೆ ಬಿಡುಗಡೆ

13ನೇ ರಾಜ್ಯ ಮಟ್ಟದ ಅಂಚೆಚೀಟಿ ಸಂಗ್ರಹ ಪ್ರದರ್ಶನ KARNAPEX2024, ಅಂಚೆಚೀಟಿಗಳ ಹಬ್ಬಕ್ಕೆ ಚಾಲನೆ

13ನೇ ರಾಜ್ಯಮಟ್ಟದ ಅಂಚೆಚೀಟಿಗಳ ಸಂಗ್ರಹದ ಪ್ರದರ್ಶನ, ಕರ್ನಾಪೆಕ್ಸ್ 2024 ಆರಂಭವಾಗಿದೆ. ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಅಂಚೆಚೀಟಿಗಳ ಪ್ರದರ್ಶನವಿದ್ದು, ನಗರದ ಅಂಚೆಚೀಟಿಗಳ ಸಂಗ್ರಹಕಾರರಿಗೆ ರಸದೌತಣವಾಗಿತ್ತು.

ಬೆಂಗಳೂರು: 13ನೇ ರಾಜ್ಯಮಟ್ಟದ ಅಂಚೆಚೀಟಿಗಳ ಸಂಗ್ರಹದ ಪ್ರದರ್ಶನ, ಕರ್ನಾಪೆಕ್ಸ್ 2024 ಆರಂಭವಾಗಿದೆ. ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಅಂಚೆಚೀಟಿಗಳ ಪ್ರದರ್ಶನವಿದ್ದು, ನಗರದ ಅಂಚೆಚೀಟಿಗಳ ಸಂಗ್ರಹಕಾರರಿಗೆ ರಸದೌತಣವಾಗಿತ್ತು. ನಿನ್ನೆ ಶುಕ್ರವಾರ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ 1,832ರ ಹಿಂದಿನ ಅಂಚೆಚೀಟಿಗಳನ್ನು ಪ್ರದರ್ಶಿಸಲಾಯಿತು. ಒಟ್ಟು 17 ಮಳಿಗೆಗಳಲ್ಲಿ 700 ಫ್ರೇಮ್ ಗಳಿದ್ದು, ಪ್ರತಿಯೊಂದೂ ಬಹು ಅಂಚೆಚೀಟಿಗಳು ಮತ್ತು ಅಂಚೆ ಕವರ್‌ಗಳನ್ನು ಒಳಗೊಂಡಿರುತ್ತವೆ. 

ಉದ್ಘಾಟನಾ ದಿನವು 'ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ' ವಿಷಯವನ್ನು ಒಳಗೊಂಡಿದೆ. ಪುನೀತ್ ರಾಜ್‌ಕುಮಾರ್ ಅವರ ಮಿನಿಯೇಚರ್ ಮಾದರಿಗಳು ಮತ್ತು ಶ್ರೀ ಶಿವಕುಮಾರ್ ಸ್ವಾಮಿಗಳ ಅವರ ಅನೇಕ ಫೋಟೋಗಳು ಸ್ಟಾಲ್‌ಗಳಲ್ಲಿ ತುಂಬಿದ್ದವು, ಇಸ್ರೋ ಚಂದ್ರಯಾನ, ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಮತ್ತು ಕೆಲವು ರಿಮೋಟ್ ಸೆನ್ಸಿಂಗ್ ಉಪಗ್ರಹಗಳ ಮಿನಿಯೇಚರ್ ಮಾದರಿಗಳು ಸಹ ಇದ್ದವು. ನಿಮ್ಹಾನ್ಸ್ ಮಳಿಗೆಗಳು ತನ್ನ ಮಾನಸಿಕ ಆರೋಗ್ಯ ಉಪಕ್ರಮಗಳ ಮಾಹಿತಿಯಿಂದ ತುಂಬಿ ತುಳುಕುತ್ತಿದ್ದವು, ಕೆಎಂಎಫ್ ವಿಭಿನ್ನ ಸಿಹಿತಿಂಡಿಗಳು ಮತ್ತು ಪಾನೀಯಗಳನ್ನು ಪ್ರದರ್ಶಿಸಿತು.

1832 ರ ಹಿಂದಿನ ಸ್ಟಾಂಪ್, ಕೆಂಪು ಬಣ್ಣದ ಅರ್ಧ-ಅನ್ನಾ ತುಂಡು, ಪ್ರದರ್ಶನದಲ್ಲಿ ಅತ್ಯಂತ ಹಳೆಯ ವಿಷಯಗಳಾಗಿವೆ. ನಾಡಪ್ರಭು ಕೆಂಪೇಗೌಡ, ರಾಣಿ ಕಿತ್ತೂರು ಚೆನ್ನಮ್ಮ, ವನ್ಯಜೀವಿ ಮತ್ತು ಕರ್ನಾಪೆಕ್ಸ್ 2024ಗಳಿವೆ. ಬೇಳೆ ವ್ಯಾಪಾರಿ ಕಾರ್ತಿಕೇಯನ್, ನಾನು ಕಳೆದ 45 ವರ್ಷಗಳಿಂದ ಅಂಚೆಚೀಟಿಗಳನ್ನು ಸಂಗ್ರಹಿಸುತ್ತಿದ್ದೇನೆ. ಮನೆಯಲ್ಲಿ ಉತ್ತಮ ಅಂಚೆಚೇಟಿ ಸಂಗ್ರಹವಿದೆ ಎಂದರು. 

‘ಕರ್ನಾಪೆಕ್ಸ್ 2024’ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಅವರು ಕರ್ನಾಟಕ ಮತ್ತು ಅದರ ಸಾಧಕರ ಕುರಿತು ಹೆಚ್ಚಿನ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವಂತೆ ಅಂಚೆ ಇಲಾಖೆಗೆ ಮನವಿ ಮಾಡಿದರು. ಕರ್ನಾಟಕವು 6 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಅಪಾರ ಕೊಡುಗೆ ನೀಡಿದ ಅನೇಕ ದಿಗ್ಗಜರನ್ನು ಹೊಂದಿದೆ. ಅಂಚೆ ಇಲಾಖೆ ಇದುವರೆಗೆ 65 ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದೆ. ವೀರರು ಮತ್ತು ಐತಿಹಾಸಿಕ ಸ್ಥಳಗಳನ್ನು ಗೌರವಿಸಲು ನಮಗೆ ಕನಿಷ್ಠ 700 ಅಂಚೆಚೀಟಿಗಳ ಅಗತ್ಯವಿದೆ ಎಂದು ಹೇಳಿದರು. 

ಪುನೀತ್ ರಾಜ್‌ಕುಮಾರ್, ಸರ್ ಎಂ ವಿಶ್ವೇಶ್ವರಯ್ಯ ಎಫ್‌ಕೆಸಿಸಿಐ ಸ್ಥಾಪನೆ, 100 ವರ್ಷಗಳ ಕಾರ್ಲ್‌ಟನ್ ಹೌಸ್, 100 ವರ್ಷಗಳ ಲಲಿತ್ ಮಹಲ್ ಮತ್ತು ಮೈಸೂರು ಸ್ಯಾಂಡಲ್ ಸೋಪ್ ಕುರಿತ ಲಕೋಟೆಗಳನ್ನು ಬಿಡುಗಡೆ ಮಾಡಲಾಯಿತು.

Related Stories

No stories found.

Advertisement

X
Kannada Prabha
www.kannadaprabha.com