ರಾಜ್ಯದಲ್ಲಿ ಆನೆಗಳು ತುಂಬಿ ತುಳುಕುತ್ತಿವೆ, ಆದ್ರೂ ಬೇರೆ ರಾಜ್ಯಗಳಿಗೆ ಕೊಡಲು ಅರಣ್ಯ ಇಲಾಖೆ ಅಸಹಾಯಕ!

ಮಹಾರಾಷ್ಟ್ರ, ಗುಜರಾತ್, ಒರಿಸ್ಸಾ ಮತ್ತು ಮಧ್ಯಪ್ರದೇಶದಂತಹ ಇತರ ರಾಜ್ಯಗಳಿಂದ ಕರ್ನಾಟಕದ ಆನೆಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ ರಾಜ್ಯದಲ್ಲಿ ಆನೆಗಳು ತುಂಬಿ ತುಳುಕುತ್ತಿದ್ದರೂ, ಘರ್ಷಣೆ, ಸಮಸ್ಯೆಗಳು ಹೆಚ್ಚುತ್ತಿದ್ದರೂ ಅವುಗಳನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಹಾರಾಷ್ಟ್ರ, ಗುಜರಾತ್, ಒರಿಸ್ಸಾ ಮತ್ತು ಮಧ್ಯಪ್ರದೇಶದಂತಹ ಇತರ ರಾಜ್ಯಗಳಿಂದ ಕರ್ನಾಟಕದ ಆನೆಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ ರಾಜ್ಯದಲ್ಲಿ ಆನೆಗಳು ತುಂಬಿ ತುಳುಕುತ್ತಿದ್ದರೂ, ಘರ್ಷಣೆ, ಸಮಸ್ಯೆಗಳು ಹೆಚ್ಚುತ್ತಿದ್ದರೂ ಅವುಗಳನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಇಲ್ಲ.

ಬೇಡಿಕೆಯಿದ್ದರೂ ನಾವು ಸೆರೆಹಿಡಿಯಲಾದ ಅಥವಾ ಮೃಗಾಲಯದ ಯಾವುದೇ ಆನೆಗಳನ್ನು ಬೇರೆ ರಾಜ್ಯಗಳಿಗೆ ನೀಡುತ್ತಿಲ್ಲ. ಕೊನೆಯದಾಗಿ ಅರಣ್ಯ ಇಲಾಖೆ ಮಠಗಳಲ್ಲಿ ನೀಡಿದ್ದ ಆನೆಗಳನ್ನು ಸಹ ಅಲ್ಲಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಅರಣ್ಯ ಇಲಾಖೆ ಅವುಗಳನ್ನು ರಕ್ಷಿಸಿ ಬೇರೆ ರಾಜ್ಯಗಳಿಗೆ ಒಪ್ಪಿಸಿತ್ತು’ ಎಂದು ಹೆಸರು ಹೇಳಲಿಚ್ಛಿಸದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕಳೆದ ಮಂಗಳವಾರ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾನವ-ಪ್ರಾಣಿ ಸಂಘರ್ಷ, ಅರಣ್ಯೀಕರಣ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆನೆಗಳನ್ನು ಸೆರೆಹಿಡಿಯಲು ಅಥವಾ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಿದಾಗ, ಸಭೆಯಲ್ಲಿದ್ದ ಅಧಿಕಾರಿಗಳು ಆನೆಗಳನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಸಚಿವರಿಗೆ ತಿಳಿಸಿದರು.

ಇಲಾಖೆಯ ದಾಖಲೆಗಳ ಪ್ರಕಾರ, ರಾಜ್ಯಾದ್ಯಂತ ವಿವಿಧ ಆನೆ ಶಿಬಿರಗಳಲ್ಲಿ 100 ಆನೆಗಳನ್ನು ಇರಿಸಲಾಗಿದ್ದು, ಅವುಗಳಲ್ಲಿ 30- 35 ಕುಮ್ಕಿ ಆನೆಗಳಾಗಿ ಬಳಸಬಹುದು (ಇತರ ಕಾಡು ಆನೆಗಳನ್ನು ಹಿಡಿಯಲು ಬಳಸಲಾಗುತ್ತದೆ). ಉಳಿದ ಆನೆಗಳನ್ನು ಶಿಬಿರಗಳಲ್ಲಿ ಇರಿಸಲಾಗಿದೆ.

“ನಮ್ಮ ಆನೆಗಳನ್ನು ಇತರ ರಾಜ್ಯಗಳಲ್ಲಿ ಕುಮ್ಕಿಗಳಾಗಿ ಬಳಸಲು ಬೇಡಿಕೆಯಿದೆ. ದೇಶದ ಇತರ ಪ್ರಾಣಿಸಂಗ್ರಹಾಲಯಗಳಿಂದಲೂ ಆನೆಗಳಿಗೆ ಬೇಡಿಕೆಯಿದೆ. ಆದರೆ, ಅರ್ಜುನ ಸಾವಿನ ಘಟನೆಯ ನಂತರ, ನಾವು ಆನೆ ಸ್ಥಳಾಂತರ ಕಾರ್ಯಾಚರಣೆಯನ್ನು ನಿಧಾನಗೊಳಿಸಿದ್ದೇವೆ. ರಕ್ಷಣಾ ಕೇಂದ್ರಗಳಲ್ಲಿ ಸ್ಥಳಾವಕಾಶವಿಲ್ಲದ ಕಾರಣ ಆನೆ ಸೆರೆ ಕಾರ್ಯಾಚರಣೆಯನ್ನೂ ಸ್ಥಗಿತಗೊಳಿಸಿದ್ದೇವೆ. ಸದ್ಯದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದು, ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. ಅರ್ಜುನನ ಸಾವಿನ ನಂತರ ಸಂಘರ್ಷದಲ್ಲಿರುವ ಇತರ ಕಾಡು ಆನೆಗಳನ್ನು ಸೆರೆಹಿಡಿಯಲು ನಮಗೆ ಬಲಿಷ್ಠವಾದ ಬುಲ್ ಆನೆಗಳು ಬೇಕಾಗುತ್ತವೆ” ಎಂದು ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com